ಹಿಂದಣ ಹೆಜ್ಜೆಯ ನೋಡಿ

Author : ಗುಂಡಣ್ಣ ಕಲಬುರ್ಗಿ

Pages 140

₹ 120.00




Year of Publication: 2004
Published by: ಸೌಜನ್ಯ ಪ್ರಕಾಶನ
Address: ಭಾಗ್ಯನಗರ 583238, ತಾ/ಜಿ ಕೊಪ್ಪಳ
Phone: 7019181570

Synopsys

‘ಹಿಂದಣ ಹೆಜ್ಜೆಯ ನೋಡಿ’ ಗುಂಡಣ್ಣ ಕಲಬುರ್ಗಿ ಅವರ ರಚನೆಯ ಲೇಖನವಾಗಿದೆ. ಕನ್ನಡ ಭಾಷೆಯಲ್ಲಿ ಅಸಂಖ್ಯಾತ ಕವಿಸಾಹಿತಿಗಳು ಸೃಷ್ಟಿಸಿದ ಸಾಹಿತ್ಯ ಸಂಪದವಿದೆ. ಹಿಂದಿನಿಂದಲೂ ಅಂದಂದಿನ ಸಾಮಾಜಿಕ ಸಂದರ್ಭಕ್ಕನುಗುಣವಾಗಿ ಸಮಾಜದ ಒಟ್ಟೂ ಆಶಯಗಳಿಗೆ ಸ್ಪಂದಿಸುತ್ತಲೇ ಸಾಹಿತ್ಯ ರಚನೆಯಾಗಿದೆ. ಸಹಜವಾಗಿ ಅಲ್ಲಿ ವಿಭಿನ್ನ ದೃಷ್ಟಿಕೋನಗಳು ಒಡಮೂಡಿವೆ. ಹಿಂದಿನ ಒಟ್ಟು ಸಾಹಿತ್ಯದ ನೆಲೆ-ಬೆಲೆಯೇನು ? ಅವು ಇಂದಿನ ದೃಷ್ಟಿಯಲ್ಲಿ ನಗಣ್ಯ ಮತ್ತು ಅಪ್ರಸ್ತುತವೆಂದು ತಳ್ಳಿಹಾಕಲು ಸಾಧ್ಯವೆ ? ಸಾವಿರಾರು ವರ್ಷಗಳಿಂದ ಹೂ ಚಿಗುರು ಕಾಯಿ ಬಿಡುತ್ತಿದ್ದ ಮರವು ಹೊಂದಿರುವುದು ಅವೇ ಬೇರುಗಳನ್ನಲ್ಲವೆ ? ಇಂಥ ಹುಡುಕಾಟ ಈ ಲೇಖನಗಳ ಉದ್ದೇಶವಾಗಿದೆ.

About the Author

ಗುಂಡಣ್ಣ ಕಲಬುರ್ಗಿ

ಲೇಖಕ, ಕವಿ ಗುಂಡಣ್ಣ ಕಲಬುರ್ಗಿ ಅವರು ಮೂಲತಃ ಕಲಬುರ್ಗಿಯವರು. ಎಂಎ ಹಾಗೂ ಪಿ.ಎಚ್.ಡಿ ಪದವೀಧರರು. ಪ್ರಸ್ತುತ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಕೃತಿಗಳು : ಎಲ್ಲಿ ಹೋದಳು ಈಕೆ (ಕವನ ಸಂಕಲನ) ...

READ MORE

Reviews

ಹೊಸತು - ಏಪ್ರಿಲ್‌ -2005

ಕನ್ನಡ ಭಾಷೆಯಲ್ಲಿ ಅಸಂಖ್ಯಾತ ಕವಿಸಾಹಿತಿಗಳು ಸೃಷ್ಟಿಸಿದ ಸಾಹಿತ್ಯ ಸಂಪದವಿದೆ. ಹಿಂದಿನಿಂದಲೂ ಅಂದಂದಿನ ಸಾಮಾಜಿಕ ಸಂದರ್ಭಕ್ಕನುಗುಣವಾಗಿ ಸಮಾಜದ ಒಟ್ಟೂ ಆಶಯಗಳಿಗೆ ಸ್ಪಂದಿಸುತ್ತಲೇ ಸಾಹಿತ್ಯ ರಚನೆಯಾಗಿದೆ. ಸಹಜವಾಗಿ ಅಲ್ಲಿ ವಿಭಿನ್ನ ದೃಷ್ಟಿಕೋನಗಳು ಒಡಮೂಡಿವೆ. ಹಿಂದಿನ ಒಟ್ಟು ಸಾಹಿತ್ಯದ ನೆಲೆ-ಬೆಲೆಯೇನು ? ಅವು ಇಂದಿನ ದೃಷ್ಟಿಯಲ್ಲಿ ನಗಣ್ಯ ಮತ್ತು ಅಪ್ರಸ್ತುತವೆಂದು ತಳ್ಳಿಹಾಕಲು ಸಾಧ್ಯವೆ ? ಸಾವಿರಾರು ವರ್ಷಗಳಿಂದ ಹೂ ಚಿಗುರು ಕಾಯಿ ಬಿಡುತ್ತಿದ್ದ ಮರವು ಹೊಂದಿರುವುದು ಅವೇ ಬೇರುಗಳನ್ನಲ್ಲವೆ ? ಇಂಥ ಹುಡುಕಾಟ ಈ ಲೇಖನಗಳ ಉದ್ದೇಶ. ಸಾಹಿತ್ಯ ರಚನೆಯೊಂದು ನಿತ್ಯನೂತನ ಕ್ರಿಯೆ ಎಂಬ ಆಧಾರ ಆಶಯಗಳನ್ನು ಇಲ್ಲಿ ಮನಗಾಣಿಸಲಾಗಿದೆ. ಹಿಂದಿನ ಹೆಜ್ಜೆಗಳನ್ನು ಗುರುತಿಸುತ್ತಲೇ ಜಾಗ್ರತೆಯಾಗಿ ಮುಂದಿನ ಹೆಜ್ಜೆಗಳನ್ನಿಡಬೇಕಾದ ಅಗತ್ಯವನ್ನು ಸಾಹಿತ್ಯ ಸಂಸ್ಕೃತಿ ವಕ್ತಾರರು ಗಮನಿಸಬೇಕಾಗಿದೆ. ಕೆಲವೊಂದು ಪದ್ಯಗಳ ತುಣುಕುಗಳನ್ನು ವಿಶ್ಲೇಷಿಸಲಾಗಿದೆ.

Related Books