ಸಂವೇದನಾಶೀಲ ಮನಸ್ಸು, ಸೃಜನಶೀಲ ಪ್ರತಿಭೆ, ನಮ್ರ ವ್ಯಕ್ತಿತ್ವ, ಅಧ್ಯಯನದ ಬಹುಮುಖತೆ ಒಟ್ಟಾದ ಅಪರೂಪದ ಬರಹಗಾರ ರಮೇಶಬಾಬು ಯಾಳಗಿ ಅವರು. ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ಅನುಭವ ವೈವಿಧ್ಯತೆ ಮತ್ತು ಅಭಿವ್ಯಕ್ತಿ ಸಾಧ್ಯತೆಗಳನ್ನು ವಿಸ್ತರಿಸಿಕೊಂಡು ಸಫಲರಾಗಿರುವ ಅವರೊಳಗೆ ಚಿಂತಕ, ವಾಗ್ಮಿ, ಗಾಯಕ, ಲೇಖಕ ಒಟ್ಟಾಗಿ ಮೇಳವಿಸಿದ್ದಾರೆ.
ಪ್ರಸ್ತುತ ‘ಅನುಭವಗಳ ಅನಾವರಣ’ ಹೆಸರೇ ಹೇಳುವಂತೆ, ಅವರ ಜೀವನಾನುಭವಗಳ ನೇರ ಅಭಿವ್ಯಕ್ತಿ. ಎದುರಾದ ವ್ಯಕ್ತಿ, ಒಂದು ಪ್ರಸಂಗ, ಬಾಲ್ಯದ ಉಲ್ಲಾಸ, ಎದೆಯಲ್ಲಿ ಹೂತ ಒಂದು ನೆನಪು, ತಲೆಮಾರುಗಳ ಅಂತರದಲ್ಲಿ ದಿಕ್ಕೆಟ್ಟ ಮೌಲ್ಯ, ಅನೈತಿಕತೆಯ ಅವಘಡ ಇತ್ಯಾದಿ ಕುತೂಹಲಕಾರಿ ಹಾಗೂ ವೈವಿಧ್ಯಮಯ ಸಂಗತಿಗಳು ರಮೇಶಬಾಬು ಅವರ ಸಹೃದಯವನ್ನು ಕಾಡಿ ಇಲ್ಲಿ ಅಚ್ಚುಕಟ್ಟಾಗಿ ಬರಹಕ್ಕಳಿದಿದೆ. ಅನುಭವಕಥನದ ಈ ಶೈಲಿಯು ಅಪ್ಯಾಯಮಾನವಾಗಿದೆ. ಆಳದಾಳಕ್ಕೆ ಹೋಗಿ ಮಾತನಾಡುವ ಬರಹದ ಪರಿ ಚಕಿತಗೊಳಿಸುವಂಥದ್ದು.
ಮಾನ್ವಿಯ ಕಲ್ಮಠ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಮೇಶಬಾಬು ಯಾಳಗಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸುರಪುರದಲ್ಲಿ, ಕಾಲೇಜು ಶಿಕ್ಷಣವನ್ನು ಶಹಾಪುರದಲ್ಲಿ ಪಡೆದ ಅವರು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅನುಭವಗಳ ಅನಾವರಣ, ಭರವಸೆಯ ಬೇಸಾಯ, ಸರ್ವಜ್ಞನ ವಿಚಾರ ದರ್ಶನ ಅವರ ಪ್ರಕಟಿತ ಕೃತಿಗಳು. ...
READ MORE