ಲೇಖಕ ಮಹಾದೇವ ಬಸರಕೋಡ ಅವರ ಕೃತಿ-ನಿಂದ ಹೆಜ್ಜೆಯ ಮೀರಿ. ಜೀವಪರ ಕಾಳಜಿಗೆ ಕಾತರಿಸುವ ಲೇಖನಗಳ ಸಂಗ್ರಹವಿದು. ಜೀವಿತ ಕಾಲದ ಪ್ರತಿಯೊಂದು ಕ್ಷಣವೂ ಆನಂದ ಪರವಶತೆಯ ಅನುಭವ ಪಡೆಯಲು, ಯಶಸ್ಸು ಮತ್ತು ವೈಪಲ್ಯಗಳ ಜೀವನಾನುಭ ಬಳಸಿಕೊಂಡು ಮುನ್ನಡೆಯಲು, ಕತ್ತಲನ್ನು ಒಪ್ಪಿಕೊಳ್ಳು ಮುನ್ನ ಮತ್ತೆ ಮತ್ತೆ ಅರಿವಿನ ಹಣತೆ ಹಚ್ಚಿ, ಬೆಳಕನ್ನು ಅರಸುವ ಕ್ರಿಯೆಯನ್ನು ನಿರಂತರವಾಗಿ ಚಲನಶೀಲವಾಗಿಸಿಕೊಳ್ಳಲು ನೆರವಾಗುವ, ಆಪ್ತವಾಗಿ ಸಮಾಲೋಚಿಸುವ ಧಾಟಿಯ ಲೇಖನಗಳು ಸಂಕಲಿಸಲಾಗಿದೆ. ಇಲ್ಲಿಯ ಬಹುತೇಕ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಮೂಲತಃ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಬೇನಾಳ ಗ್ರಾಮದವರಾದ ಬರಹಗಾರ ಮಹಾದೇವ ಬಸರಕೋಡ ಅವರು ಜನಿಸಿದ್ದು 1972 ಜೂನ್ 14ರಂದು. ನಿಡಗುಂದಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಇಲಕಲ್ಲಿನ ಎಸ್.ಆರ್. ಕಂಠಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್ ಹಾಗೂ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಕನ್ನಡ ಸಾಹಿತ್ಯ ಆಸಕ್ತಿ ಕ್ಷೇತ್ರ. ಮಹಾದೇವ ಅವರ ಪ್ರಮುಖ ಕೃತಿಗಳೆಂದರೆ ಬದುಕು ಬೆಳಕು, ತಮಂಧ ಘನ ಕಳೆದು (ಕವನ ಸಂಕಲನ), ಒಡಲುಗೊಂಡವ (ವಚನ ಸಾಹಿತ್ಯ), ಹಸಿವೆಂಬ ಹೆಬ್ಬಾವು, ವರ್ತಮಾನದಲ್ಲಿ ನಿಂತು ...
READ MORE