‘ಮುಖಾಮುಖಿ’ ಇಪ್ಪತ್ತನೆಯ ಶತಮಾನದ ಪ್ರಾರಂಭದ ದಶಕಗಳಿಂದಲೂ ಕನ್ನಡ ಶ್ರೀಸಾಮಾನ್ಯನನ್ನು ವಿಶ್ವಮಾನವ ಚೈತನ್ಯವನ್ನಾಗಿ ಪರಿವರ್ತಿಸುವ ಮಹಾಕಾಯಕದಲ್ಲಿ ತೊಡಗಿಕೊಂಡು ದೊಡ್ಡ ಕನಸು ಕಂಡವರು ಶ್ರೀಕುವೆಂಪು. ಕನ್ನಡಿಗರು ಈ ಶತಮಾನವನ್ನು ಕುವೆಂಪು ಶತಮಾನವೆಂದೇ ಗುರುತಿಸತೊಡಗಿರುವುದು ಅದಕ್ಕೆ ಸಾಕ್ಷಿಯಾಗಿದೆ. ಅನೇಕ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಕನ್ನಡದ ಚೈತನ್ಯ ತನ್ನ ಹೆಜ್ಜೆಗುರುತುಗಳನ್ನು ಮೂಡಿಸಿದೆಯೆಂಬ ಹೆಮ್ಮೆ ಶ್ರೀಕುವೆಂಪು ಅವರ ಚೇತನಕ್ಕೆ ಸಲ್ಲಬೇಕು. ಇಷ್ಟಾದರೂ ಇಂದು ಮಹಾಕವಿ ಶ್ರೀಕುವೆಂಪು ತಮ್ಮ ಎದೆಗೂಡಲ್ಲಿಟ್ಟು ಕಾಪಾಡಿದ ಕನ್ನಡಕ್ಕೆ ಅನೇಕ ಆತಂಕಗಳು ಎದುರಾಗಿರುವುದು ಸುಳ್ಳಲ್ಲ.
ಕನ್ನಡ ಶ್ರೀಸಾಮಾನ್ಯನ ದಿನನಿತ್ಯದ ಬದುಕು ಗುಣಾತ್ಮಕವಾದ ಬದಲಾವಣೆಯನ್ನು ಕಾಣದೆ ದಿಕ್ಕೆಟ್ಟಿರುವ ಪರಿಸ್ಥಿತಿಗೆ ನಮ್ಮ ರಾಜಕಾರಣ, ಸಾಮಾಜಿಕ ವ್ಯವಸ್ಥೆ ಎಷ್ಟರಮಟ್ಟಿಗೆ ಕಾರಣವೊ ಅಷ್ಟರಮಟ್ಟಿಗೆ ಕವಿ, ಕಾದಂಬರಿಕಾರ, ಲೇಖಕರಾದ ನಾವೂ ಕಾರಣರೆಂಬುದನ್ನು ಮರೆಯಲಾಗದು. ಶ್ರೀಕುವೆಂಪು ಅವರ ಶತಮಾನೋತ್ಸವವನ್ನು ಆಚರಿಸುತ್ತಿರುವ ನಾವು ಈಗ ಹೊಸ ಸಂಕಲ್ಪವನ್ನು ಕೈಗೊಳ್ಳುವುದರ ಮೂಲಕ ಅವರು ಕಂಡಿದ್ದ ಕನಸುಗಳನ್ನು ಪೂರೈಸಬೇಕಾಗಿದೆ. ಮನಸ್ಸು ಮಾಡಿದರೆ ಅದಕ್ಕೆ ಸಿದ್ದ ಎಂಬುದನ್ನು ಸಾಧಿಸಿ ತೋರಿಸಿರುವುದೇ ಇಲ್ಲಿ ನೂರು ಮಂದಿ ಲೇಖಕರು ಸೇರಿ ಶ್ರೀಕುವೆಂಪು ಅವರಿಗೆ ಅರ್ಪಿಸಿರುವ ಗ್ರಂಥ ಕುಸುಮಗಳು. ಎಳೆಯ ಬರಹಗಾರರಿಂದ ಮೊದಲ್ಗೊಂಡು ಹಿರಿಯ ಬರಹಗಾರರವರೆಗೆ ತಮ್ಮ ತಮ್ಮ ಸಾಹಿತ್ಯ ಪ್ರಕಾರಗಳಲ್ಲಿ ಇಂತಿಯನ್ನು ಪಡೆದಿರುವ, ಪಡೆಯುತ್ತಿರುವ ಎಲ್ಲರೂ ಸಂತೋಷದಿಂದ ಈ ಕೆಲಸದಲ್ಲಿ ಒಂದಾಗಿದ್ದಾರೆ.
ಲೇಖಕಿ ಡಾ. ಎನ್. ಗಾಯತ್ರಿ ಮೂಲತಃ ಬೆಂಗಳೂರಿನವರು. 1957 ರ ಜನೆವರಿ 17 ರಂದು ಜನನ. ಸಾಹಿತ್ಯದಲ್ಲಿ ಎಂ.ಎ ಹಾಗೂ ಪಿಎಚ್.ಡಿ ಪದವೀಧರರು. ರಿಸರ್ವ್ ಬ್ಯಾಂಕಿನಲ್ಲಿ ಅಧಿಕಾರಿ.ಮಹಿಳಾ ಪರ ಚಿಂತಕಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿ 25 ವರ್ಷ ಸೇವೆ ಸಲ್ಲಿಸಿದ್ದಾರೆ. 22 ವರ್ಷ ಕಾಲ 'ಅಚಲ' ಮಾಸಪತ್ರಿಕೆಯ ಸಂಪಾದಕಿಯಾಗಿದ್ದು ಮಹಿಳಾ ಹೋರಾಟಗಳಿಗೆ ಸೈದ್ಧಾಂತಿಕ ನೆಲೆ ಕಲ್ಪಿಸಿಕೊಟ್ಟವರು. ಈಗ 'ಹೊಸತು' ಪತ್ರಿಕೆಯ ಸಂಪಾದಕ ಬಳಗದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು 'ಮಹಿಳೆ: ಬಿಡುಗಡೆಯ ಹಾದಿಯಲ್ಲಿ’, 'ಮಹಿಳಾ ಚಳವಳಿಯ ಮಜಲುಗಳು’, 'ಮುಖಾಮುಖಿ', 'ಕ್ಲಾರಾ ಜೆಟ್ಕಿನ್, 'ಮಹಿಳಾ ಮೀಸಲಾತಿ' ಮತ್ತು 'ಲಿಂಗ ರಾಜಕಾರಣ', ಫ್ರೆಡರಿಕ್ ...
READ MORE