‘ಮುಸ್ಲಿಮರ ತಲ್ಲಣ’ ಮನದಾಳದ ಮಾತು ಮಂಗ್ಳೂರು ವಿಜಯ ಅವರು ಅನುವಾದಿಸಿರುವ ಲೇಖನ ಸಂಕಲನ. ಈ ಕೃತಿಯಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಅತ್ಯಂತ ಮುಖ್ಯ ವಿಚಾರಗಳನ್ನು ವಿಶ್ಲೇಷಿಸಿದ್ದಾರೆ. ಮತ್ತೊಂದು ವಿಶೇಷತೆ ಎಂದರೆ ಇಲ್ಲಿನ ಹೆಚ್ಚಿನ ಲೇಖನಗಳನ್ನು ಮುಸ್ಲೀಂ ಸಮುದಾಯದವರೇ ಬರೆದಿದ್ದಾರೆ. ಇಸ್ಲಾಂ ಧರ್ಮವು ಹತ್ಯೆ ಅಥವಾ ಭಯೋತ್ಪಾದನೆಯನ್ನು ಮಾನ್ಯ ಮಾಡಿಲ್ಲ ಹಾಗೂ ಬೋಧಿಸಿಲ್ಲ; ಇತರ ಕಾರಣಗಳಿಂದಾಗಿ ಜಗತ್ತಿನಲ್ಲಿಂದು ಶಾಂತಿ ಕೆಡುತ್ತಿದೆಯೆ೦ಬುದು ಇಲ್ಲಿನ ಲೇಖನಗಳ ಅಭಿಪ್ರಾಯ.
ಹಿರಿಯ ಲೇಖಕ, ಚಿಂತಕ ಮಂಗ್ಳೂರು ವಿಜಯ ಅವರು ಮೂಲತಃ ಮಂಗಳೂರಿನವರು. ಸಂವಿಧಾನಾತ್ಮಕ ಆಶಯಗಳನ್ನೇ ಬದುಕಾಗಿಸಿಕೊಂಡು, ಹಲವಾರು ಕಾರ್ಯಗಾರ, ಶಿಬಿರ ಶಾಲೆಗಳಲ್ಲಿ ಸಂವಿಧಾನದ ಪ್ರಾಮುಖ್ಯತೆ ಬಗ್ಗೆ ಉಪನ್ಯಾಸ ನೀಡುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ. ಆಂಧ್ರ ಪ್ರದೇಶ ಮೂಲ ಚಿಂತಕ ‘ಕಾಂಚ ಐಲಯ್ಯ’ ಅವರ ಕೃತಿಯನ್ನು‘ನಾನೇಕೆ ಹಿಂದೂ ಅಲ್ಲ’ ಎನ್ನುವ ಶೀರ್ಷಿಕೆಯಡಿ ಅನುವಾದಿಸಿದ್ಧಾರೆ. ಈ ಕೃತಿಯನ್ನು ಲಡಾಯಿ ಪ್ರಕಾಶನ ಪ್ರಟಿಸಿದೆ. ...
READ MOREಪುಸ್ತಕ ಪರಿಚಯ: ಹೊಸತು-2009 ಏಪ್ರಿಲ್
ಮುಸ್ಲಿಂ ಸಮುದಾಯದ ಬಗ್ಗೆ ಅತ್ಯಂತ ಗಹನವಾದ ವಿಚಾರಗಳನ್ನು ಜಾಗತಿಕ ಮಟ್ಟದಲ್ಲಿ ವಿಶ್ಲೇಷಣೆ ಮಾಡಿ, ಚರಿತ್ರೆಯ ಆಳಕ್ಕಿಳಿದು ಶೋಧಿಸಿದ ಲೇಖನಗಳಿವು. ಮುಸ್ಲಿಂ ಬಾಂಧವರೇ ಇಲ್ಲಿನ ಹೆಚ್ಚಿನ ಲೇಖನಗಳನ್ನು ಬರೆದಿದ್ದಾರೆ. ಇವನ್ನು ಮುಸ್ಲಿಮೇತರರೇ ಮೊತ್ತಮೊದಲು ಓದಿ ಅರ್ಥೈಸಿಕೊಳ್ಳಬೇಕಾದ ಅಗತ್ಯವಿದೆ. ಭಾರತದ ಚರಿತ್ರೆಯಲ್ಲಿ ಹಿಂದೂ-ಮುಸ್ಲಿಂ ಇಬ್ಬರಿಗೂ ಪಾಲಿರುತ್ತದೆ. ಎಲ್ಲ ಅಪರಾಧ ಮತ್ತು ಭಯೋತ್ಪಾದನೆಗಳ ಹಿಂದೆ ಮುಸ್ಲಿಮರ ಕೈವಾಡವನ್ನು ಶಂಕಿಸುತ್ತ ಇತರ ಜನಾಂಗ ಅವರೊಂದಿಗೆ ಬರಿಯ ದ್ವೇಷ ಸಾಧಿಸುವುದು ಅವರಿಗೆ ನೋವುಂಟು ಮಾಡಿದೆ. ಇಸ್ಲಾಂ ಧರ್ಮವು ಹತ್ಯೆ ಅಥವಾ ಭಯೋತ್ಪಾದನೆಯನ್ನು ಮಾನ್ಯ ಮಾಡಿಲ್ಲ ಹಾಗೂ ಬೋಧಿಸಿಲ್ಲ; ಇತರ ಕಾರಣಗಳಿಂದಾಗಿ ಜಗತ್ತಿನಲ್ಲಿಂದು ಶಾಂತಿ ಕೆಡುತ್ತಿದೆಯೆ೦ಬುದು ಇಲ್ಲಿನ ಲೇಖನಗಳ ಅಭಿಪ್ರಾಯ.