`ನಿಮ್ಮದೀ ನೆಮ್ಮದಿ’ ಪದಚಿಹ್ನ ಅವರ ಕೃತಿಯಾಗಿದೆ. ಈ ಕೃತಿಯಲ್ಲಿನ ಮಾತುಗಳು ಹೀಗಿವೆ; ಮನಸ್ಸು ಭಾರವಾದಾಗ, ರಸ್ತೆ ಬದಿಯ ಫುಟ್ಪಾತ್ ಮೇಲೆ ಒಬ್ಬರೇ ನಡೆಯುವಾಗ, ಯೋಚನೆಗಳು ಕಾಡುವಾಗ, ಮಾತು ಹೊರಬರಲು ಒದ್ದಾಡುವಾಗ, ರಾತ್ರಿ ನಿದ್ರೆ ಬರದೇ ಇದ್ದಾಗ. ಯಾವುದಾದರೊಂದು ಸಮಾಧಾನದ ಆಸರೆ ನೆರವಾದರೆ ಅಷ್ಟೇ ಸಾಕು. ಸಮಸ್ಯೆಗಳನ್ನು ಪರಿಹರಿಸಲು ಅಲ್ಲ, ಕಷ್ಟಗಳನ್ನು ದೂರ ಮಾಡಲು ಅಲ್ಲ. ಆದ ಗಾಯಕ್ಕೆ ಔಷಧಿ ಹಚ್ಚಲೂ ಅಲ್ಲ! ನಮ್ಮೊಳಗೇ ಇರುವ ಉತ್ತರವನ್ನು ನಮ್ಮ ಮುಂದಿಡಲು, ನಮ್ಮೊಳಗೇ ಇರುವ ಸಾಮರ್ಥ್ಯದ ಅರಿವು ಮೂಡಿಸಲು, ಹೆಗಲ ಮೇಲೆ ಕೈಯಿಟ್ಟು ಪ್ರೀತಿಯ ಮಾತನಾಡಲು, ಜತೆಗೆ ಕುಳಿತು ಒಂದು ಗುಟುಕು ಕಾಫಿ ಕುಡಿಯುತ್ತ ನಮ್ಮ ಕಥೆ ಕೇಳಲು, ನೆಮ್ಮದಿ ಎಷ್ಟು ಮುಖ್ಯ ಎಂದು ಹೇಳಲು ಯಾರಾದರೂ ಇರಲಿ ಎಂದೆನಿಸುತ್ತದೆ. ಅಂತಹ ಸಂದರ್ಭದಲ್ಲೂ ಯಾರೂ ಸಿಗದಿದ್ದಾಗ, ಒಂಟಿ ಎಂದೆನಿಸಿದಾಗ, ಕರೆ ಮಾಡಿದ ಸ್ನೇಹಿತರ ಸಂಖ್ಯೆ ನಾಟ್ ರೀಚೆಬಲ್ ಆದಾಗ ಈ ನೆಮ್ಮದಿ ನಿಮ್ಮದೇ ಎನ್ನುವುದನ್ನು ಮರೆಯಬೇಡಿ ಎಂಬುದನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಪದಚಿಹ್ನ ಎಂಬ ಕಾವ್ಯನಾಮ ಹೊಂದಿರುವ ಇವರು ಹುಟ್ಟಿದ್ದು ಮಲೆನಾಡಿನ ಸುಂದರ ಊರು ತೀರ್ಥಹಳ್ಳಿಯಲ್ಲಿ ಮತ್ತು ಬೆಳೆದಿದ್ದು ಕರಾವಳಿಯ ಕುಮಟಾದಲ್ಲಿ. ಬೆಂಗಳೂರೆಂಬ ಮಾಯಾನಗರಿಯಲ್ಲಿ ಪ್ರಸ್ತುತ ವಾಸ. ಇಂಜಿನಿಯರಿಂಗ್ ಓದಿ ಪ್ರಸ್ತುತ ಪತ್ರಿಕೋದ್ಯಮದಲ್ಲಿ ವೃತ್ತಿ, ಅದಕ್ಕೆ ಕಾರಣ ಬರವಣಿಗೆಯ ಮೇಲಿರುವ ಪ್ರೀತಿ. ಕಲೆ, ಸಾಹಿತ್ಯ, ರಂಗಭೂಮಿ, ಮಾತುಗಾರಿಕೆ, ಹಾಸ್ಯ, ಎಲ್ಲದರಲ್ಲೂ ಅಪಾರ ಆಸಕ್ತಿ. ಸಮಾಜಮುಖಿ ಕೆಲಸಗಳನ್ನು ಮಾಡಲು ಪರಹಿತಮ್ ಫೌಂಡೇಶನ್ ಎಂಬ ಎನ್ ಜಿ ಓ ಸ್ಥಾಪನೆ. ಒಳ್ಳೆಯ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು, ಬೈಕ್ ರೈಡಿಂಗ್, ಅಲೆಮಾರಿಯ ಬದುಕು ಇಷ್ಟ. ಕೃತಿ: ಮೈಸೂರ್ ಪಾಕ್ ಹುಡುಗ ...
READ MORE