‘ಮಾನವ ಯಂತ್ರ ಕುಸಿದು ಬೀಳದಂತೆ ತಡೆಯುವುದು ಹೇಗೆ’

Author : ಎಚ್.ಡಿ. ಚಂದ್ರಪ್ಪಗೌಡ

Pages 301

₹ 70.00




Published by: ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ
Address: ನವದೆಹಲಿ

Synopsys

‘ಮಾನವ ಯಂತ್ರ ಕುಸಿದು ಬೀಳದಂತೆ ತಡೆಯುವುದು ಹೇಗೆ’ ಕೃತಿಯು ಎಚ್.ಡಿ ಚಂದ್ರಪ್ಪಗೌಡ ಅವರ ಲೇಖನಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಬೆನ್ನುಡಿಯಲ್ಲಿ ಕೆಲವೊಂದು ವಿಚಾರಗಳು ಹೀಗಿವೆ : ಮಾನವನಂತಹ ಸಂಕೀರ್ಣ ಜೀವಿಯ ಬಗ್ಗೆ ಸುಲಭ ಶೈಲಿಯಲ್ಲಿ ಬರೆದಿರುವ ಈ ಪುಸ್ತಕ ಜನಸಾಮಾನ್ಯರಿಗೆ ತಿಳಿವಳಿಕೆ ನೀಡುತ್ತದೆ. ಮಾನವ ಶರೀರದ ವಿವಿಧ ಅಂಗಗಳು ಹೇಗೆ ಕೆಲಸ ಮಾಡುತ್ತವೆ ಮತ್ತು ಅನಾರೋಗ್ಯದ ಪರಿಸ್ಥಿತಿಯಲ್ಲಿ ಏನು ವ್ಯತ್ಯಾಸಗಳು ಉಂಟಾಗುತ್ತವೆ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಓದುಗರ ನೆರವಿಗಾಗಿ ಅನೇಕ ರೇಖಾಚಿತ್ರಗಳನ್ನು ಕೊಡಲಾಗಿದೆ. ಡಾ. ಆರ್.ಎಲ್. ಬಿಜಲಾನಿ ಅವರು ಹೊಸ ದೆಹಲಿಯ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಯ (ಎ.ಐ.ಐ.ಎಂ.ಎಸ್.) ಫಿಸಿಯಾಲಜಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರಿಗೆ 1969 ರಲ್ಲಿ ಪ್ರತಿಷ್ಠಿತ ನಫೀಲ್ಡ್ ಫೌಂಡೇಷನ್ ಸ್ಕಾಲರ್ ಷಿಪ್ ಮತ್ತು 1978ರಲ್ಲಿ ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ ಫೆಲೋಷಿಪ್ ದೊರೆತವು. ಡಾ. ಬಿಜಲಾನಿ ಅವರ ಸುಂದರವಾದ ಹಾಗೂ ಸರಳ ಬರವಣಿಗೆ ಓದುಗರನ್ನು ಆಕರ್ಷಿಸುವಂಥಹುದು. ಡಾ. ಎಸ್. ಕೆ. ಮಂಚಂದ ಅವರು ಫಿಸಿಯಾಲಜಿ ವಿಭಾಗದ ಮುಖ್ಯಸ್ಥರು. ಇರಾಕ್, ಕೆನಡಾ, ಮಲೇಷ್ಯಾ ಮತ್ತು ಜಪಾನಿನ ವಿದ್ಯಾರ್ಥಿಗಳಿಗೂ ಸಹ ಅವರು ಪಾಠ ಹೇಳಿದ್ದಾರೆ. ಮಾನವ ನಡವಳಿಕೆಯ ನರ ಅಂಗಕ್ರಿಯೆಯ ಬಗ್ಗೆ ಅವರು ಕೈಗೊಂಡ ಸಂಶೋಧನೆ ಅಂತರರಾಷ್ಟ್ರೀಯ ಮಾನ್ಯತೆ ಪಡೆದಿದೆ. ಅವರು ಪಡೆದ ಪ್ರಶಸ್ತಿಗಳ ಪೈಕಿ ಹರಿ ಓಂ ಆಶ್ರಮ್ ಪ್ರಶಸ್ತಿ ಮತ್ತು ಸೋವಿಯತ್ ರಷ್ಯಾದ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್ ನ ಪ್ರಶಸ್ತಿಗಳು ಮುಖ್ಯವಾದವು. ಅವರ ಪರಿಣತಿ ಮತ್ತು ಅನುಭವಗಳಿಂದಾಗಿ ಈ ಪುಸ್ತಕ ಮಹತ್ವಪೂರ್ಣದ್ದಾಗಿದೆ ಎಂದಿದೆ.

About the Author

ಎಚ್.ಡಿ. ಚಂದ್ರಪ್ಪಗೌಡ
(29 June 1929)

ಡಾ. ಚಂದ್ರಪ್ಪಗೌಡ ಎಚ್.ಡಿ ಅವರು  29-6- 1929 ಹೊಳೆಗದ್ದೆಯಲ್ಲಿ ಜನಿಸಿದರು. ವೃತ್ತಿಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆಸಲ್ಲಿಸುತ್ತಿರುವ ಅವರು, ಪ್ರವೃತ್ತಿಯಲ್ಲಿ ಸಾಹಿತಿಯಾಗಿದ್ದಾರೆ. ವೈಜ್ಞಾನಿಕ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ.ಎಚ್.ಡಿ. ಚಂದ್ರಪ್ಪಗೌಡ ಅವರು ಆರೋಗ್ಯದ ಕುರಿತಾಗಿ, ಮತ್ತು ಸೃಜನಶೀಲವಾಗಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅವರ ಲೋಕದ ಕೌತುಕಗಳು, ಕುಸಿದುಬೀಳದಂತೆ ತಡೆಯುವುದು ಹೇಗೆ, ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ. ಕುವೆಂಪು ವೈದ್ಯ ಸಾಹಿತ್ಯ ಪುರಸ್ಕಾರ, ದೇಜಗೌ ಪ್ರತಿಷ್ಠಾನದ ವಿಶ್ವಮಾನವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಚ್.ಡಿ.ಚಂದ್ರಪ್ಪಗೌಡ ಅವರ ಮುಖ್ಯ ಕೃತಿಗಳು : ಜೋಸೆಫ್ ಆಸ್ಟರ್, ವೈದ್ಯವಿಜ್ಞಾನ ಸಾಧಕರು, ವಿಶ್ವವಿಖ್ಯಾತ ವೈದ್ಯ ವಿಜ್ಞಾನಿಗಳು ...

READ MORE

Related Books