‘ಕರ್ಮಯೋಗಿ ಡಾ. ಆರ್.ಎನ್. ಶೆಟ್ಟಿ’ ಜೀಯು ಭಟ್ ಅವರ ಲೇಖನಗಳ ಸಂಗ್ರಹವಾಗಿದೆ. ಆರ್.ಎನ್. ಶೆಟ್ಟಿಯವರ ಸಾಧನೆ ಮತ್ತು ವ್ಯಕ್ತಿತ್ವ ಕುರಿತು ಇಲ್ಲಿನ ಹೆಸರಾಂತ ಬರಹಗಾರರು ಬರೆದಿರುವುದನ್ನು ನನ್ನ ಓದಿನ ಕಮ್ಮಟಕ್ಕೆ ಒಟ್ಟಿನೋಡಿದಾಗ ಕಡೆಗೆ ಆರ್. ಎನ್. ಶೆಟ್ಟಿ ಎಂಬ ಮಣ್ಣಿನ ಗುಣ ಮತ್ತು ಅದರ ಸಾರ ಹಾಗೂ ಆ ಮಣ್ಣಿನ ಪರಿಮಳದ ಸ್ವಾದ ಅಚ್ಚರಿಗೊಳಿಸಿತು. ಒಬ್ಬ ವ್ಯಕ್ತಿ ಸಮಾಜಮುಖಿಯಾಗಿ ತನ್ನ ಇರುವಿಕೆಯಲ್ಲಿ ಏನನ್ನು ಮಾಡಬಲ್ಲನು ಏನನ್ನು ಸಾಧಿಸಬಲ್ಲನು ಏನನ್ನು ಗಳಿಸಿಕೊಳ್ಳಬಲ್ಲನು ಎಂಬುದು ಅವರ ಜೀವನದ ಜಾಡಿನಲ್ಲಿ ದಟ್ಟವಾಗಿ ಹರಿಯುವ ನದಿಯಂತೆ ಕಾಣಿಸುತ್ತದೆ. ಒಂದು ನದಿ ಎರಡೂ ದಂಡೆಗಳಿಗೂ ತಂಪೆರೆಯುತ್ತ ಸಾಗರ ಸೇರಿಕೊಳ್ಳುವ ಹಾಗೆ. ಇದನ್ನು ಆ ನದಿಯ ಸಾಧನೆ ಎಂದು ಹೇಳುವುದು ಇಲ್ಲಿನ ಪ್ರತಿ ಬರೆಹಗಾರರ ಮೂಗಿನ ನೇರದ ಬಣ್ಣನೆ ಅಥವ ವ್ಯಾಖ್ಯಾನ. ಅದರೆ ನಿಜಕ್ಕೂ ಇದಾವುದೂ ಆರ್.ಎನ್.ಶೆಟ್ಟಿ ಎಂಬ ನದಿಯ ಸಾಧನೆಯಲ್ಲ. ಒಂದು ನಿಜವಾದ ವ್ಯಕ್ತಿಯ ಚೇತನದ ಸಹಜ ಹರಿಯುವಿಕೆಯಂತೆ ನನಗಿಲ್ಲಿ ಅವರ ಒಳ ಹರಿವು ಕಾಣಿಸುತ್ತದೆ.
ಜೀಯು ಭಟ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. ಪತ್ರಿಕೋದ್ಯಮ ಮತ್ತು ಕೃಷಿಯನ್ನು ವೃತ್ತಿಯಾಗಿಸಿಕೊಂಡಿದ್ದಾರೆ. ಉದಯವಾಣಿ ಹಿರಿಯ ವರದಿಗಾರನಾಗಿ 50 ವರ್ಷಗಳಿಂದ ಕೆಲಸನಿರ್ವಹಿಸಿದ್ದಾರೆ . ಸಂಯುಕ್ತ ಕರ್ನಾಟಕ ಪತ್ರಿಕೆಯ ಹೊನ್ನಾವರದ ವರದಿಗಾರನಾಗಿ , ಗ್ರಾಮ ವಿಕಾಸ ವಾರಪತ್ರಿಕೆಯ ಸಂಪಾದಕನಾಗಿ, ಸಮನ್ವಯ ವಾರಪತ್ರಿಕೆಯ ಸ್ಥಾನಿಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದಾರೆ. “ಜೋಕುಮಾರ ಸ್ವಾಮಿ”, “ಅಂಧಯುಗ”, “ಬೇಲಿ ಮತ್ತು ಹೊಲ”, “ಆಷಾಢದ ಒಂದು ದಿನ”, ನಾಟಕಗಳನ್ನು ನಿರ್ದೇಶಿಸಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಾಗೂ ಹರಿಶ್ಚಂದ್ರ ಭಟ್ ನಿರ್ದೇಶಿಸಿದ “ಶೋಧ”,, ಕಾಶಿನಾಥರ “ಅನುಭವ”, ಅಂಬರೀಶ ಜೊತೆ “ಗಿರಿಬಾಲೆ”, ಚಲನಚಿತ್ರದಲ್ಲಿ, “ಅಪ್ಸರಧಾರಾ” ,ವಿಶಾಲರಾಜ್ ನಿರ್ದೇಶನದ ...
READ MORE