ಮತ್ತೆ ಹಾಡಿತು ಕೋಗಿಲೆ

Author : ಎ. ಆರ್‌. ಮಣಿಕಾಂತ್

₹ 160.00




Year of Publication: 2022
Published by: ನೀಲಿಮಾ ಪ್ರಕಾಶನ

Synopsys

ಎ. ಆರ್‌. ಮಣಿಕಾಂತ್ ಅವರ ಲೇಖನ ಸಂಕಲನ ಪುಸ್ತಕದಲ್ಲಿ ಅಬಾಲವೃದ್ಧರಾದಿಯಾಗಿ ಇಲ್ಲರಿಗೂ ಇಷ್ಟವಾಗುವ 31 ಸ್ಪೂರ್ತಿದಾಯಕ ಕಥೆಗಳು, ವ್ಯಕ್ತಿತ್ವವಿಕಸನಕ್ಕೆ ಪೂರಕವಾಗುವ ಸ್ಮರಣೀಯ ನಿಜಘಟನೆಗಳು, ನೀತಿಬೋಧಕ ಪ್ರಸಂಗಗಳು, ಯಾರೊಬ್ಬರ ಸಹಾಯವಿಲ್ಲದೆಯೂ ಅನನ್ಯ ಸಾಧನೆಯ ಮೂಲಕ ರೋಲ್ ಮಾಡೆಲ್ ಗಳಾಗಿರುವ ಸಾಧಕರ ಕಥೆಗಳಿವೆ. ಸರಳ, ಸುಲಲಿತ ಮತ್ತು ಹೃದಯಸ್ಪರ್ಶಿ ಭಾಷೆಯ ನಿರೂಪಣೆ ಈ ಕೃತಿಯ ಹೆಚ್ಚುಗಾರಿಕೆ.

ಲೇಖಕ ನಾಗೇಶ ಹೆಗಡೆ ಅವರು ಈ ಕೃತಿಯಲ್ಲಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ನಾಳಿನ ಬದುಕಿನ ನಕ್ಷೆಯನ್ನು ರೂಪಿಸಲು ಪರದಾಡುವವರಿಗೆ ಇಲ್ಲಿನ ಒಂದೊಂದು ಕತೆಯೂ ಸುಂದರ ನೀಲನಕ್ಷೆಯನ್ನು ಬಿಡಿಸಿಡುವಂತಿದೆ. ಪಿಯುಸಿ ಪಾಸಾಗಲಾರದ ಜೆಂಪು ರೋಂಗ್‌ ಮೈ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ್ದು, ಬಳೆ ಮಾರುತ್ತಿದ್ದ ರಾಮು ಐಎಎಸ್‌ ಪಾಸಾಗಿದ್ದು, ತೀರ ಕುರೂಪಿಯಾದ ರೋಗಗ್ರಸ್ಥ ಹೆಣ್ಣುಮಗುವೊಂದನ್ನು ದತ್ತು ತೆಗೆದುಕೊಂಡು ಬೆಳೆಸಿದ ಅಲೋಮಾ ಲೋಬೊ ಆಕೆಯನ್ನು ಖ್ಯಾತಿಯ ಉತ್ತುಂಗಕ್ಕೇರಿಸಿದ್ದು.. ಇಂಥ ಹತ್ತಾರು ಕತೆಗಳು ಬದುಕಿನ ಸಾಧ್ಯತೆಗಳ ಬಗ್ಗೆ ಓದುಗರ ಭರವಸೆಯನ್ನೂ ಉತ್ತುಂಗಕ್ಕೇರಿಸುವಂತಿವೆ. ಮತ್ತೆ ಈ ಯಾವವೂ ಕಪೋಲ ಕಲ್ಪಿತವೇನಲ್ಲ; ಅವು ಸತ್ಯಸಂಗತಿಗಳು ಎಂಬುದನ್ನು ಒತ್ತಿ ಹೇಳುವಂತೆ ಫೋಟೊಗಳನ್ನು ಸಂಗ್ರಹಿಸುವಲ್ಲಿ ಮಣಿಕಾಂತ್‌ ಅದೆಷ್ಟು ಶ್ರಮವಹಿಸಿರಬೇಕು ಎಂಬುದು ಆಯಾ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗಲೇ ನಮಗೆ ಗೊತ್ತಾಗುತ್ತದೆ. ಓದುಗರನ್ನು ರಸವಶ ಮಾಡುವಂತೆ ಇಲ್ಲಿನ ಕಥಾನಕಗಳ ನೇಯ್ಗೆಯಲ್ಲಿ ಅಲ್ಲಲ್ಲಿ ಕೆಲವು ಕಾಲ್ಪನಿಕ ವರ್ಣಲೇಪಿತ ಎಳೆಗಳು ಸೇರಿರಬಹುದು. ಅದು ವಿನ್ಯಾಸಕ್ಕಷ್ಟೆ. ಮತ್ತೆ ಇಲ್ಲಿನ ನಿರೂಪಣಾ ಶೈಲಿಯನ್ನು ನೋಡಿ. ಐದನೇ ಕ್ಲಾಸ್‌ ಓದಿದವರಿಗೂ ಅರ್ಥವಾಗುವಂತೆ ತೀರ ಸರಳವಾಗಿ, ನೀತಿಬೋಧೆಯ ಭಾರವಿಲ್ಲದೆ, ಮನಸ್ಸಿಗೆ ತಟ್ಟುವಂತಿವೆ. ನಿತ್ಯದ ಸುದ್ದಿಬಗ್ಗಡದಲ್ಲಿ ತಳಕ್ಕಿಳಿದು ಕೂತ ವಜ್ರದ ಹರಳನ್ನು ಮೇಲೆತ್ತಿ ತಂದಂತೆ, ಭಣಭೂಮಿಯ ನಡುವಣ ಓಯಸಿಸ್ಸಿನಂತೆ ಇಲ್ಲಿನ ಕಥನಗಳು ಮನತಣಿಸುವಂತಿವೆ. ಮಕ್ಕಳು ಹಿರಿಯರಿಗೂ ಹಿರಿಯರು ಎಳೆಯರಿಗೂ ಕಥನರೂಪದಲ್ಲಿ ಲವಲವಿಕೆಯಿಂದ ಓದಿ ಹೇಳಲು ಸಾಧ್ಯವಾಗುವಂತಿವೆ ಎಂದು ಅವರು ಬರೆದಿದ್ದಾರೆ.

About the Author

ಎ. ಆರ್‌. ಮಣಿಕಾಂತ್
(19 May 1970)

ಪತ್ರಕರ್ತ, ಬರಹಗಾರರಾಗಿರುವ ಮಣಿಕಾಂತ್  ಅವರು ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆಯತನಹಳ್ಳಿಯವರು. ಆಟೋ ಮೊಬೈಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು  ವಿಜಯ ಕರ್ನಾಟಕ, ಹಾಯ್ ಬೆಂಗಳೂರು, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿರುವ ಇವರು ಈ ಗುಲಾಬಿಯು ನಿನಗಾಗಿ, ಮರೆಯಲಿ ಹ್ಯಾಂಗ, ಉಭಯ ಕುಶಲೋಪರಿ ಸಾಂಪ್ರತ, ಹಾಡು ಹುಟ್ಟಿದ ಸಮಯ ಎಂಬ ಅಂಕಣಗಳನ್ನು ಬರೆದಿದ್ದಾರೆ.  ಇವರ ಬರೆದಿರುವ ಕೃತಿಗಳೆಂದರೆ ಅಮ್ಮ ಹೇಳಿದ ಎಂಟು ಸುಳ್ಳುಗಳು, ಹಾಡು ಹುಟ್ಟಿದ ಸಮಯ, ಅಪ್ಪ ಅಂದ್ರೆ ಆಕಾಶ, ಭಾವ ತೀರ ಯಾನ, ಮನಸು ಮಾತಾಡಿತು ಮುಂತಾದವು. ಇವರ ಅಮ್ಮ ಹೇಳಿದ ...

READ MORE

Related Books