'ಅಪ್ಪ; ಪ್ರಶಾಂತ್ ರಾಮಸ್ವಾಮಿ ಅವರು ಬರೆದ ಲೇಖನಗಳ ಸಂಕಲನ. ಅವರೊಂದು ಪುಸ್ತಕವಿದ್ದಂತೆ’ ಎಂಬುದು ಈ ಕೃತಿಗೆ ನೀಡಿರುವ ಉಪಶೀರ್ಷಿಕೆ. ವಯುಕ್ತಿಕ ಜೀವನದಲ್ಲಿಯೂ ಅಪ್ಪನಾಗಿ ಬಡ್ತಿ ಪಡೆದ ಸಂದರ್ಭದಲ್ಲಿ ತಾನು ಈವರೆಗೆ ಕಲಿತ ಎಲ್ಲ ಆತ್ಮೀಯ ಗೆಳೆಯನಾಗಿ ವಿಧೇಯ ವಿದ್ಯಾರ್ಥಿಯಾಗಿ, ಪ್ರಕೃತಿ ಪ್ರೇಮಿಯಾಗಿ, ಹೆಮ್ಮೆಯ ಕನ್ನಡಿಗನಾಗಿ, ಒಮ್ಮೊಮ್ಮೆ ಶಿಕ್ಷಕನಾಗಿಯೂ ಮತ್ತೊಬ್ಬರಿಗೆ ದಾಟಿಸುವ ಪ್ರಯತ್ನವೇ ಈ ಪುಸ್ತಕ. ಕೃತಿಯ ಬೆನ್ನುಡಿಯನ್ನು ಗುಬ್ಬಚ್ಚಿ ಸತೀಶ್ ಬರೆದಿದ್ದಾರೆ. ಪ್ರಬಂಧ,ಕತೆ,ಲೇಖನ ಹೀಗೆ ಯಾವುದೇ ಚೌಕಟ್ಟನ್ನು ಹಾಕಿಕೊಳ್ಳದ ಇಲ್ಲಿನ ಬರಹಗಳು ಓದುಗರಲ್ಲಿ ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸುತ್ತದೆ.
ಯುವಲೇಖಕ ಪ್ರಶಾಂತ್ ರಾಮಸ್ವಾಮಿ ಮೂಲತಃ ಕೋಲಾರ ಜಿಲ್ಲೆಯ ವೇಮಗಲ್ ನಲ್ಲಿ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪದವಿ ಶಿಕ್ಷಣ ಪಡೆದರು. ಸದ್ಯ, ಹವ್ಯಾಸಿ ಬರಹಗಾರರು. ಸಮಾನ ಮನಸ್ಕ ಸ್ನೇಹಿತರೊಟ್ಟಿಗೆ ಕೂಡಿ ಪ್ರಕಾಶನ ಸಂಸ್ಥೆಯೊಂದನ್ನು ಕಟ್ಟಿ, ತನ್ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ರೀತಿಯ ವಿಭಿನ್ನ ಯೋಚನೆಗಳ ಕೃತಿಗಳನ್ನು ಪ್ರಕಟಿಸುತ್ತಿದ್ದಾರೆ. ಕೃತಿಗಳು; ಒಂಟಿದಾರಿ (ಕವನ ಸಂಕಲನ), ಆಚಾರ್ಯ ದೇವೋಭವ (ಸಂಪಾದಿತ ಕೃತಿ), ಅಪ್ಪ (ಕಥಾ ಸಂಕಲನ). ...
READ MORE