`ಪತ್ರಿಕಾ ಭಾಷೆ' ಕೃತಿಯು ಪತ್ರಕರ್ತ, ಲೇಖಕ ಪದ್ಮರಾಜ ದಂಡಾವತಿ ಅವರ 30ರ ಸಂಭ್ರಮ ಮಾಲಿಕೆ ಕೃತಿಯಾಗಿದೆ. ಪತ್ರಿಕೋದ್ಯಮದ ಕುರಿತ ಲೇಖನಗಳನ್ನು ಇಲ್ಲಿ ಕಾಣಬಹುದು. ಅಷ್ಟೇ ಅಲ್ಲದೆ ಭಾಷೆಯ ಕುರಿತ ಹಲವಾರು ಸಂಗತಿಗಳು ಇಲ್ಲಿ ಪಾಲುಪಡೆದುಕೊಂಡಿದೆ. ಭಾಷೆ ಎಂಬುದು ಒಂದು ಅದ್ಭುತ ಸಂಗತಿ, ಸಂಪರ್ಕ ಸಾಧನ, ಈ ಸಾಧನ ಇಲ್ಲದಿದ್ದರೆ ಏನಾಗುತ್ತದೆ ಅಥವಾ ಏನಾಗಬಹುದಿತ್ತು ಎಂದು ಒಂದು ಕ್ಷಣ ಯೋಚಿಸಿ ನೋಡಿ, ಪರಸ್ಪರರ ನಡುವೆ ಸಂವಹನವೇ ಇಲ್ಲದಂಥ ಒಂದು ಸಂದರ್ಭ ಅದು. ಭಾಷೆ, ಮಾತಿನ ಒಂದು ಮಾಧ್ಯಮ ಆಗಿರುವ ಹಾಗೆಯೇ ಸಾಹಿತ್ಯದ ಒಂದು ಮಾಧ್ಯಮ ಕೂಡ ಆಗಿದೆ ಎಂಬುದು ಬಹು ಮುಖ್ಯ ಸಂಗತಿ. ಮಾತಿನ ಮಾಧ್ಯಮವಾಗಿರುವ ಭಾಷೆಗೆ ಒಂದು ಪಾತಳಿ ಇದ್ದರೆ ಸಾಹಿತ್ಯ ಸೃಷ್ಟಿಯ ಮಾಧ್ಯಮವಾದ ಭಾಷೆಗೆ ಮತ್ತೊಂದು ಪಾತಳಿಯಿದೆ. ಬಹುಶಃ ಇವೆರಡರ ಮಧ್ಯಮ ಪಾತಳಿಯಲ್ಲಿ ಪತ್ರಿಕಾ ಭಾಷೆ ಬಳಕೆಯಾಗುತ್ತದೆ. ದೂರದರ್ಶನದಂಥ ವಿದ್ಯುನ್ಮಾನ ಮಾಧ್ಯಮ ಬಂದು ಪತ್ರಿಕೆಗಳ ಪ್ರಭಾವ ಕಡಿಮೆಯಾಗಿಬಿಡುತ್ತದೆ ಎಂಬ ಆತಂಕಕ್ಕೆ ವ್ಯತಿರಿಕ್ತವಾಗಿ ಮುದ್ರಣ ಮಾಧ್ಯಮ ಇನ್ನೂ ಜೀವಂತವಾಗಿ ಉಳಿದುಕೊಂಡು ಬಂದಿದೆ. ನೂರಾರು ವರ್ಷಗಳ ಇತಿಹಾಸ ಇರುವ ಮುದ್ರಣ ಮಾಧ್ಯಮ ಓದುಗನ ಮೇಲೆ ತನ್ನದೇ ಆದ ಛಾಪು ಒತ್ತಿದೆ. ಆ ಛಾಪು ಅಳಿಸಿಹೋಗದಂತೆ ನೋಡಿಕೊಳ್ಳುವುದು ಮುದ್ರಣ ಮಾಧ್ಯಮದಲ್ಲಿ ಕೆಲಸ ಮಾಡುವವರ ಆದ್ಯ ಕರ್ತವ್ಯವಾಗಿದೆ.
ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದಲ್ಲಿ 1955ರ ಆಗಸ್ಟ್ 30 ರಂದು ಪದ್ಜರಾಜ ದಂಡಾವತಿ ಅವರು ಜನಿಸಿದರು. ತಂದೆ ದೇವೇಂದ್ರಪ್ಪ, ತಾಯಿ ಚಂಪಮ್ಮ. ಪ್ರಾಥಮಿಕ- ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಮುದ್ದೇಬಿಹಾಳದಲ್ಲಿ ಮುಗಿಸಿ, ಪದವಿ ಶಿಕ್ಷಣವನ್ನು ರಾಮದುರ್ಗದಲ್ಲಿ ಪೂರೈಸಿದರು. ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಪತ್ರಕರ್ತರಾಗಿ 1982ರಲ್ಲಿ ಪ್ರಜಾವಾಣಿ ಸೇರಿದ್ದು, ಹಂತ ಹಂತವಾಗಿ ಬಡ್ತಿ ಹೊಂದಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ಸತತ ಎಂಟು ವರ್ಷಗಳಿಂದ ಅವರು ಪ್ರತಿ ಭಾನುವಾರ ಪ್ರಜಾವಾಣಿಯಲ್ಲಿ ಬರೆದ ‘ನಾಲ್ಕನೇ ಆಯಾಮ’ ಅಂಕಣ, ತನ್ನವಿಚಾರ-ವಿಷಯ ವೈವಿಧ್ಯತೆಯಿಂದಾಗಿ ಜನಪ್ರಿಯತೆ ಪಡೆದಿತ್ತು. ಕೃತಿಗಳು: ಪತ್ರಿಕಾಭಾಷೆ, ರಿಪೋರ್ಟಿಂಗ್, ಅವಲೋಕನ, ನಾಲ್ಕನೇ ಆಯಾಮ(ಆರು ...
READ MORE