ಲೇಖಕಿ ಬಿ.ಎನ್. ಸುಮಿತ್ರಾಬಾಯಿ ಅವರ ಲೇಖನಗಳ ಸಂಕಲನ-ಬೊಗಸೆಯಲ್ಲಿ ಹೊಳೆ ನೀರು. ಈ ಕೃತಿಗೆ 2014ರ ವಿ.ಎಂ. ಇನಾಂದಾರ ಸ್ಮಾರಕ ವಿಮರ್ಶಾ ಪ್ರಶಸ್ತಿ ಸಂದಿದೆ ಹಾಗೂ ಪಿ. ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ, ರಾಷ್ಟ್ರಕವಿ ಜಿ.ಎಸ್.ಎಸ್. ಪ್ರಶಸ್ತಿ, ಶಾಶ್ವತಿ ಸಂಸ್ಥೆಯ ಸದೋದಿತ ಪ್ರಶಸ್ತಿ ಲಭಿಸಿದೆ. ಸ್ತ್ರೀವಾದ, ಅದರ ಪ್ರಖರತೆ, ಅಗತ್ಯತೆ ಹೀಗೆ ವೈಚಾರಿಕತೆಯನ್ನು ಒಳಗೊಂಡ ಬರಹಗಳು ಇಲ್ಲಿ ಸಂಕಲನಗೊಂಡಿವೆ.
ಜೈನಶಾಸ್ತ್ರ ಮತ್ತು ಪ್ರಾಕೃತ ಪರಿಣಿತೆ ಆಗಿರುವ ಬಿ.ಎನ್. ಸುಮಿತ್ರಾಬಾಯಿ ಅವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಸಾರ್ವತ್ರಿಕದೆಡೆಗೆ, ವಿಚಯ, ಅಯನ, ಮಹಿಳೆ ಮತ್ತು ಸಾಹಿತ್ಯ, ಸರಹದ್ದುಗಳ ಆಚೆ, ಸ್ತ್ರೀವಾದಿ ಪ್ರವೇಶಿಕೆ ಅವರ ಪ್ರಮುಖ ವಿಮರ್ಶಾ ಕೃತಿಗಳು. ’ಕಲ್ಯಾಣ ಸರಸ್ವತಿ, ಕಾತ್ಯಾಯನಿ ವಾಚಿಕೆ, ಸ್ತ್ರೀವಾದಿ ಪ್ರವೇಶಿಕೆ’ ಕೃತಿಗಳನ್ನು ಸಂಪಾದಿಸಿದ್ದಾರೆ. ಅವರಿಗೆ ಅನುಪಮಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಡಾ. ಬಿ. ಎನ್. ಸುಮಿತ್ರಾ ಬಾಯಿ ಅವರ ಬೊಗಸೆಯಲ್ಲಿ ಹೊಳೆ ನೀರು (ಲೇಖನ ಸಂಕಲನ) ಕೃತಿಗೆ 2014ರ ವಿ.ಎಂ. ಇನಾಂದಾರ ಸ್ಮಾರಕ ವಿಮರ್ಶಾ ಪ್ರಶಸ್ತಿ ಸಂದಿದೆ ಹಾಗೂ ಪಿ. ...
READ MORE