‘ನಾನೇಕೆ ಬರೆಯುತ್ತೇನೆ’ ಕನ್ನಡದ ಪ್ರಸಿದ್ಧ ಲೇಖಕ ಎಸ್.ಎಲ್. ಭೈರಪ್ಪನವರ ಲೇಖನ ಹಾಗೂ ಭಾಷಣಗಳ ಸಂಕಲನ. ಕಾದಂಬರಿಕಾರರೆಂದೇ ಖ್ಯಾತಿಯ ಭೈರಪ್ಪನವರು ಇಲ್ಲಿ ವಿಮರ್ಶಕರಾಗಿಯೂ ಕಾಣಿಸುತ್ತಾರೆ. ಆಳವಾದ ಅಧ್ಯಯನ, ಸೂಕ್ಷ್ಮವಾದ ವಿಮರ್ಶಾ ದೃಷ್ಟಿ, ಸಾಹಿತ್ಯೇತರ ವಿಷಯಗಳ ಗಾಢವಾದ ಪರಿಚಯ ಈ ಲೇಖನಗಳಲ್ಲಿ ಮೈದುಂಬಿದೆ. ಪ್ರತಿಕ್ರಿಯೆಗಳ ರಹಸ್ಯ, ಲೇಖನಗಳ ಉದ್ದೇಶ, ಸಾಹಿತ್ಯ ವಿಮರ್ಶೆಯ ವಿವಿಧ ಸ್ವರೂಪ, ಸಾಹಿತ್ಯಕ್ಕೆ ಸಂಬಂಧಿಸಿದ ಇತರೆ ವಿಷಯಗಳ ಸಮಾಲೋಚನೆ- ಸಂಕಲನದ ವಸ್ತು. ಕೆಲವು ಕೃತಿಗಳ ವಿಮರ್ಶೆಯಲ್ಲಿಯೂ ಲೇಖಕರು ಮೂಲಭೂತವಾದ ವಿಚಾರಗಳನ್ನೂ ಚರ್ಚಿಸಿದ್ದಾರೆ.
ಜನಪ್ರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ಮೀಮಾಂಸಕರೂ ಹೌದು. ಹಾಸನ ಜಿಲ್ಲೆ ಚೆನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ 1931ರ ಆಗಸ್ಟ್ 20ರಂದು ಜನಿಸಿದರು. ತಂದೆ ಲಿಂಗಣ್ಣಯ್ಯ- ತಾಯಿ ಗೌರಮ್ಮ. ತಮ್ಮ ಹುಟ್ಟೂರಿನ ಸುತ್ತಮುತ್ತಲ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮೈಸೂರಿಗೆ ಬಂದು ಶಾರದಾವಿಲಾಸ ಪ್ರೌಢಶಾಲೆಯಲ್ಲಿ ಓದಿ, ಮಹಾರಾಜ ಕಾಲೇಜಿನಲ್ಲಿ ಬಿ.ಎ. ಮಾಡಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಗಳಿಸಿದರು. ಅನಂತರ ಹುಬ್ಬಳ್ಳಿಯ ಕಾಡುಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕ (1958-60), ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ (1960-66), ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಶಿಕ್ಷಣ ಸಂಸ್ಥೆಯಲ್ಲಿ ಉಪಪ್ರಾಧ್ಯಾಪಕ (1967-1971) ...
READ MORE