ಬದುಕಿನ ಸುತ್ತಮುತ್ತ-ವೈ.ಜಿ. ಭಗವತಿ ಅವರ ಲೇಖನಗಳ ಸಂಕಲನ. ಈ ಕೃತಿಯಲ್ಲಿ ಆರು ಭಾಗಗಳಿದ್ದು ಈ ಎಲ್ಲ ಲೇಖನಗಳು ನಾಡಿನ ವಿವಿಧ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಭಾಗ -1 ರಲ್ಲಿ ಸಾಧಕರಿವರು ಅರಿತುಕೊಳ್ಳೋಣ. ಇಲ್ಲಿ ಕವಿಗಳ, ನಾಟಕ, ಸಂಗೀತ ಕಲಾವಿದರ ಸಾಧನೆಗಳ ಜೊತೆಗೆ ಜೀವನ ವಿಧಾನದ ಬರಹಗಳಿವೆ. ಭಾಗ- 2 ರಲ್ಲಿ ನೆನಪಿನಂಗಳದಲ್ಲಿ ಲೇಖಕರ ಬಾಲ್ಯದ ವಿಶಿಷ್ಟ ವಿನೋದದ ಪ್ರಸಂಗಳು ಇವೆ. ಭಾಗ-3 ರಲ್ಲಿ ಸರಕಾರಿ ಶಾಲೆಗಳ ಕಾರ್ಯಗಳ ಲೇಖನಗಳಿವೆ. ಭಾಗ- 4 ರಲ್ಲಿ ಸಮಾಜದ ವಿಶಿಷ್ಠತೆಗಳ ಕುರಿತ ಲೇಖನಗಳಿವೆ. ಭಾಗ-5 ರಲ್ಲಿ ಸಾಹಿತ್ಯ ಸಂವೇದನೆಗಳಲ್ಲಿ ಆಕಾಶವಾಣಿ ಧಾರವಾಡದಲ್ಲಿ ಪ್ರಸಾರವಾದ ಚಿಂತನೆ, ಪುಸ್ತಕ ಪರಿಚಯ, ವಿಷಯಭಾಷಣಗಳ ಅಕ್ಷರ ರೂಪ ನೋಡಬಹುದು. ಭಾಗ-6 ರಲ್ಲಿ "ದೇವಮ್ಮನ ಲೋಟ" ಕೃತಿಯ ವಿಮರ್ಶಾತ್ಮಕ ಬರಹಗಳಿವೆ.
ಲೇಖಕ, ಮಕ್ಕಳ ಸಾಹಿತಿ ವೈ. ಜಿ. ಭಗವತಿ ಅವರು ಪ್ರಸ್ತುತ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದಹೊನ್ನಿಹಳ್ಳಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹರೆಯದಿಂದಲೋ ಸಣ್ಣ ಕಥೆ, ಮಕ್ಕಳ ಕಥೆ, ಕವನ, ಕಾದಂಬರಿ, ಲೇಖನ ರಚನೆಯಲ್ಲಿ ಆಸಕ್ತಿ ತಳೆದಿದ್ದಾರೆ. ‘ದೇಮಮ್ಮನ ಲೋಟ’(2016), `ಸುಂದ್ರಮ್ಮಜ್ಜಿಯ ಮೊಮ್ಮಗನಂತೆ’ (2019) ಅವರ ಪ್ರಕಟಿತ ಮಕ್ಕಳ ಕಥಾಸಂಕಲನ. ಅವರ ‘ಬದುಕಿನ ಸುತ್ತಮುತ್ತ’ (2018) ಲೇಖನಸಾಹಿತ್ಯ ಪ್ರಕಟವಾಗಿವೆ. ಅವರ ಮತ್ತೊಂದು ‘ಮತ್ತೆ ಹೊಸ ಗೆಳೆಯರು’ ಎಂಬ ಮಕ್ಕಳ ಕಾದಂಬರಿ ನೈರುತ್ಯ ಕನ್ನಡ ಮಾಸಪತ್ರಿಕೆಯಲ್ಲಿ ಧಾರವಾಹಿಯಾಗಿ ಕಳೆದ ಒಂದೂವರೆ ವರ್ಷದಿಂದ ...
READ MORE