ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟು, ಅರೆ ವಜ್ರ, ಕರ್ಣ ಪಾತ್ರದ ತೊಡಕು, ಕವಿ ಕೀರ್ತಿಯ ಏರಿಳಿತ: ಸ್ಪೆಯಿನ್ ದೇಶದ ಲೋಪ್ ಡ ವೀಗ, ಕವಿಕುಲಗುರು?, ಪ್ರಶಂಸೆ ಸಾಕೊ, ಪರೀಕ್ಷೆ ಬೇಕೊ? ಲೇಖನಗಳ ಸಂಕಲನ ‘ಹೊನ್ನ ಶೂಲ’. ‘ಸಮಾಜ ಜೀವನದ ಮುಂದಿರುವ ಸಮಸ್ಯೆ; ಅದನ್ನು ಒಟ್ಟಿನಲ್ಲಿ ಸೂಕ್ತವಾದ ರೀತಿಯಲ್ಲಿ ಬಿಡಿಸಿಕೊಂಡು ಹೋಗುತ್ತಿದೆಯಲ್ಲವೆ ಸಮಾಜ? ಜೀವನದಲ್ಲಿ ತೊಡಕು, ದಾಕ್ಷಿಣ್ಯ, ವಿರೋಧಗಳು ವಿಪರೀತ’ ಎನ್ನುವ ಲೇಖಕರು ವಿವಿಧ ಸಂದರ್ಭಗಳಲ್ಲಿ ಬರೆದ ಲೇಖನಗಳನ್ನು ಇಲ್ಲಿ ಸಂಕಲಿಸಿ ಲೇಖಕರು ಓದುಗರ ಮುಂದಿಟ್ಟಿದ್ದಾರೆ.
ಕನ್ನಡ ಮತ್ತು ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಪ್ರಾವೀಣ್ಯ ಪಡೆದಿದ್ದ ಎಸ್.ವಿ. ರಂಗಣ್ಣನವರು ಹಾಸನ ಜಿಲ್ಲೆಯ ಸಾಲಗಾಮೆಯಲ್ಲಿ 1898ರ ಡಿಸೆಂಬರ್ 24ರಂದು ಜನಸಿದರು. ತಂದೆ ವೆಂಕಟಸುಬ್ಬಯ್ಯ- ತಾಯಿ ವೆಂಕಟಲಕ್ಷ್ಮಮ್ಮ. ವಿದ್ಯಾಭ್ಯಾಸ ಚಿಕ್ಕಮಗಳೂರು, ಬೆಂಗಳೂರು, ಮೈಸೂರುಗಳಲ್ಲಿ ನಡೆಯಿತು. ಸೆಂಟ್ರಲ್ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ (1921) ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಗಳಿಸಿದರು. 1923ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ನೇಮಕಗೊಂಡರು. ತುಮಕೂರಿನಲ್ಲಿ (1928-33), 1933ರಿಂದ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿ 1954ರಲ್ಲಿ ನಿವೃತ್ತರಾದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಿ.ಎಂ.ಶ್ರೀ. ಅವರು ...
READ MORE