ಕವಿಜನ ಮಾರ್ಗ

Author : ಕಲ್ಯಾಣರಾವ ಜಿ. ಪಾಟೀಲ

Pages 694

₹ 500.00




Year of Publication: 2020
Published by: ಕನ್ನಡ ಸಾಹಿತ್ಯ ಪರಿಷತ್ತು,
Address: # ಸ್ವಾಗತ ಸಮಿತಿ, 85ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ,ಕಲಬುರಗಿ

Synopsys

ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಲಬುರ್ಗಿ-2020ರ ನೆನಪಿನ ಹೊತ್ತಿಗೆಯಾಗಿ ಪ್ರಕಟಗೊಂಡಿರುವ ‘ಕವಿಜನಮಾರ್ಗ’ವು ಕಲ್ಯಾಣ ಕರ್ನಾಟಕದ ಶ್ರೀಮಂತವಾದ ಐತಿಹಾಸಿಕ, ಸಾಹಿತ್ಯಿಕ, ಸಾಂಸ್ಕೃತಿಕ ಹಿನ್ನೆಲೆಯ ಜೊತೆಗೆ ಸರ್ವಧರ್ಮ ಸಾಮರಸ್ಯದ, ಭಾವೈಕ್ಯತೆಯ ಸೌರಭವನ್ನು ವ್ಯವಸ್ಥಿತವಾಗಿ ಕಟ್ಟಿಕೊಡುತ್ತದೆ. ಡಾ. ಕಲ್ಯಾಣರಾವ ಜಿ. ಪಾಟೀಲ ಹಾಗೂ ಡಾ. ಈಶ್ವರಯ್ಯ ಮಠ ಸಂಪಾದಕತ್ವವಿದೆ. ಈ ಹೊತ್ತಿಗೆಯಲ್ಲಿ 127 ಲೇಖನಗಳಿವೆ.

ಸಂಶೋಧನಾ ಶಿಸ್ತಿಗನುಗುಣವಾಗಿ ಮೌಲ್ಯಯುತ ಲೇಖನಗಳನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿಕೊಳ್ಳಲಾಗಿದೆ. ಏಕೀಕೃತ ಕನ್ನಡ ನಾಡು ನುಡಿ, ಚರಿತ್ರೆ-ಸಂಸ್ಕೃತಿ ಸಾಹಿತ್ಯ ಮತ್ತು ಜನಜೀವನ, ವಚನ-ಕೀರ್ತನ-ತತ್ವಪದ, ಜನಪರ-ಜನಪದ, ಕೃಷಿ ಸ್ಥಿತಿಗತಿಗಳನ್ನು ಮನವರಿಕೆ ಮಾಡಿಕೊಡುತ್ತವೆ. ಗಡಿಕನ್ನಡ, ಗಡಿನಾಡ ಕನ್ನಡಿಗರ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತ ಅವುಗಳಿಗೆ ಪರಿಹಾರ ಸೂಚಿಸುವ ಪ್ರಸ್ತಾಪಗಳನ್ನು ಲೇಖಕರು ಮಾಡಿದ್ದುಂಟು. ನಾಡಿನ ಸಂಘ ಸಂಸ್ಥೆಗಳು ಕನ್ನಡಪರ ಚಟುವಟಿಕೆಗಳಿಗೆ ನೀಡಿರುವ ಯೋಗದಾನ, ವಸ್ತುಸ್ಥಿತಿಯ ಮೌಲ್ಯಮಾಪನ, ರಾಜಕಾರಣಿಗಳ ಆಡಳಿತಗಾರರ ಕನ್ನಡಿಗರ ಹೊಣೆಗಾರಿಕೆ ಕುರಿತಂತೆ ಪ್ರಸ್ತಾಪಿಸುತ್ತವೆ. ಕನ್ನಡ ನಾಡು ನುಡಿಯ ಬಲವರ್ಧಗೆ ಜನಪರ ಆರ್ಥಿಕ ಸಂವರ್ಧನೆಗೆ ಅತ್ಯಗತ್ಯ ಮಾರ್ಗೋಪಾಯಗಳನ್ನು ಸೂಚಿಸುವ ಲೇಖನಗಳಿವೆ. ಪ್ರಾಚೀನ ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ಚರಿತ್ರೆ ಮತ್ತು ನ್ಯಾಯಿಕ ಶೋಧಕ್ಕೆ ಸಂಬಂಧಿಸಿದ ಲೇಖನಗಳು ಇತ್ತೀಚಿನ ಮಾಹಿತಿಗಳ ಮೇಲೆ ಬೆಳಕು ಚೆಲ್ಲುತ್ತವೆ. ಇದರ ಜೊತೆಗೆ ಶಿಕ್ಷಣ ಆರೋಗ್ಯ, ಕೃಷಿ, ವಿಜ್ಞಾನ, ಗ್ರಂಥಾಲಯ, ಮಾಧ್ಯಮ, ದತ್ತಿನಿಧಿ, ಪುಸ್ತಕ ಸಂಸ್ಕೃತಿಯ ಸಾಧಕ ಬಾಧಕಗಳನ್ನು ವಿಶ್ಲೇಷಿಸುತ್ತವೆ.

ಶಿವಶರಣರು, ದಾರ್ಶನಿಕರು, ಹರಿದಾಸರು, ವಿರಕ್ತರು, ತತ್ತ್ವಪದಕಾರರು ಗೈದಿರುವ ಸಮಾಜೋಪಯೋಗಿ ಕಾರ್ಯಗಳ ಜೊತೆಗೆ ಅವರವರ ಸಾಹಿತ್ಯಕ, ವೈಚಾರಿಕ ಚಿಂತೆನಗಳನ್ನು ವಚನ-ಕೀರ್ತನ-ತತ್ವಪದ ವಿಭಾಗದಲ್ಲಿ ಗುರುತಿಸಬಹುದಾಗಿದೆ. ಭಾಗ ಒಂದರ ಕರ್ನಾಟಕ ಜನಮಾರ್ಗವು ಇಡೀ ಕರ್ನಾಟಕ-ಕನ್ನಡತ್ವವನ್ನು ಗಮನದಲ್ಲಿರಿಸಿಕೊಂಡು ಈ ಹೊತ್ತಿಗೆಯನ್ನು ರೂಪಿಸಿದರೆ ಭಾಗ ಎರಡರ ಕಲ್ಯಾಣ ಜನಮಾರ್ಗವು ಕಲ್ಯಾಣ ಕರ್ನಾಟಕ ಕೇಂದ್ರಿತವಾಗಿದೆ. ಸಮಗ್ರ ಕರ್ನಾಟಕಕ್ಕಿಂತ ಈ ಭಾಗದ ಚರಿತ್ರೆ ಹಲವು ಭಿನ್ನ ನೆಲೆಗಳಲ್ಲಿ ರೂಪಿಸಲಾಗಿದೆ.

ವಿಮೋಚನಾ ಚಳವಳಿ, ಏಕೀಕರಣ ಚಳವಳಿ, ಕನ್ನಡ ಕಟ್ಟಿದ ಮಠಗಳು, ಕನ್ನಡ ಕಟ್ಟಿದ ಮಹನೀಯರು, ಕನ್ನಡಪರ ಸಂಘಟನೆಗಳು, ಇಲ್ಲಿಯವರ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲುತ್ತವೆ. ಕಲ್ಯಾಣ ಕರ್ನಾಟಕದ ಶಾಸನಗಳು, ಮಹಿಳಾ ಸಾಹಿತ್ಯ, ಕೀರ್ತನ, ತತ್ವಪದ ಸಾಹಿತ್ಯ, ಆಧುನಿಕ ಕನ್ನಡ ಸಾಹಿತ್ಯ ಪ್ರಕಾರಗಳು ಚರ್ಚಿಸಲ್ಪಟ್ಟಿವೆ. ಸೌಹಾರ್ದ ಪರಂಪರೆ ಮತ್ತು ಸೂಫಿಸಂತರ ಕುರಿತ ಚಿಂತನಲಹರಿ ವಾಸ್ತವದ ನೆಲೆಗಟ್ಟು ನೀಡುತ್ತದೆ. ಕಲಬುರ್ಗಿ ಕೇಂದ್ರಿತ ಜನಮಾರ್ಗವು ಜಿಲ್ಲೆಗೆ ಸೀಮಿತವಾದರೆ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನಾಧ್ಯಕ್ಷರ ಕುರಿತಾದ ಭಾಗವು ವಸ್ತುನಿಷ್ಠೆಗೆ ಸಾಕ್ಷಿಯಾಗಿದೆ. ಕರ್ನಾಟಕದ, ಕಲ್ಯಾಣ ಕರ್ನಾಟಕದ ಮತ್ತು ಕಲಬುರಗಿಗೆ ಸಂಬಂಧಿಸಿದ ಸಾಂಸ್ಕೃತಿಕ ಆಯಾಮಗಳ ಅಧ್ಯಯನಕ್ಕಾಗಿ ಈ ಹೊತ್ತಿಗೆಯು ಸಂಗ್ರಹ ಯೋಗ್ಯವಾಗಿದೆ.

About the Author

ಕಲ್ಯಾಣರಾವ ಜಿ. ಪಾಟೀಲ

ಲೇಖಕ ಡಾ. ಕಲ್ಯಾಣರಾವ ಜಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸೊಂತ ಸಮೀಪದ ಸರಪೋಷ್ ಕಿಣಗಿ ಗ್ರಾಮದವರು. ತಂದೆ- ಗುರುಪಾದಪ್ಪ ಮಾಲಿಪಾಟೀಲ, ತಾಯಿ- ಮಹಾದೇವಿಯಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ  ಹಾಗೂ ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಪಕ್ಕದೂರಾದ ಚೇಂಗಟಾದಲ್ಲಿ ಪೂರ್ಣಗೊಳಿಸಿದರು. ಪ್ರೌಢಶಾಲೆಯಿಂದ ಪದವಿಯವರೆಗೂ ಕಲಬುರಗಿಯ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ನಂತರ  ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಕಾಲೇಜಿಗೆ ಪ್ರಥಮ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಹತ್ತನೇ ರ್‍ಯಾಂಕಿನೊಂದಿಗೆ ಬಿ.ಎ. ಪದವಿ ಪಡೆದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎರಡನೆಯ ರ್‍ಯಾಂಕಿನೊಂದಿಗೆ ಎಂ.ಎ ಪದವಿ ಹಾಗೂ ಮೂರನೇ ರ್‍ಯಾಂಕಿನೊಂದಿಗೆ ಎಂ.ಫಿಲ್ ಪದವಿ  ಹಾಗೂ ಡಾ. ಎಂ.ಎಂ. ...

READ MORE

Related Books