‘ಸಮಗ್ರ ಕಾಮರೂಪಿ’ ಕೃತಿಯು ಎಂ.ಎಸ್. ಪ್ರಭಾಕರ ಅವರ ಲೇಖನಗಳ ಗುಚ್ಛವಾಗಿದೆ. ಕೃತಿಯ ಕುರಿತು ಡಿ.ವಿ ಪ್ರಹ್ಲಾದ್ ಅವರು, ಐವತ್ತು ಅರವತ್ತರ ದಶಕದ ಅನೇಕ ಪ್ರತಿಭಾವಂತ ಕನ್ನಡ ಲೇಖಕರು ಕರ್ನಾಟಕದಿಂದ ಹೊರಗೆ ತಮ್ಮ ಉದ್ಯೋಗಾರ್ಥ ನೆಲೆಸಿದ್ದು ಒಂದು ಗಮನೀಯ ಅಂಶ. ಅವರ ತಲೆಮಾರಿನ ಎ. ಕೆ ರಾಮಾನುಜನ್, ಶಾಂತಿನಾಥದೇಸಾಯಿ, ಕುಸುಮಾಕರ, ದೇವರಗೆಣ್ಣೂರು, ಚಿತ್ತಲದ್ವಯರು, ಎಂ. ಜಿ ಕೃಷ್ಣಮೂರ್ತಿ, ಕುರ್ತಕೋಟಿ, ಜಿ.ಎಸ್ ಅಮೂರ, ವ್ಯಾಸರಾಯ ಬಲ್ಲಾಳ ಮುಂತಾದ ಅನೇಕ ಕನ್ನಡ ಲೇಖಕರು ತಂತಮ್ಮ ಉದ್ಯೋಗದ ನೆಲೆಗಳನ್ನು ಕರ್ನಾಟಕದಿಂದ ಹೊರಗೆ ಕಂಡುಕೊಂಡರು. ಈ ಸಂಗತಿ ಅವರ ಜೀವನದೃಷ್ಟಿಗೆ-ಬರವಣಿಗೆಗೆ ಅಲ್ಲಿನ ಪರಿಸರದ ಮೂಲಕ ಕೊಟ್ಟ ಕೊಡುಗೆ ದೊಡ್ಡದು. ಅದರ ಲಾಭವದದ್ದು ಮಾತ್ರ ನಮ್ಮ ಭಾಷೆಗೆ. ಇದೇ ಒಂದು ಅಧ್ಯಯನದ ವಸ್ತುವಾಗಬಲ್ಲದು ಎಂದಿದ್ದಾರೆ.
ಎಂ.ಎಸ್. ಪ್ರಭಾಕರ ಅವರು ಕಾಮರೂಪಿ ಎಂಬ ಕಾವ್ಯನಾಮದಿಂದ ನಾಡಿನ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಪೂರ್ಣ ಹೆಸರು ಮೊಟ್ಟಹಳ್ಳಿ ಸೂರಪ್ಪ ಪ್ರಭಾಕರ. ಹುಟ್ಟಿದ್ದು 1936ರಲ್ಲಿ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಆಂಗ್ಲ ಸಾಹಿತ್ಯದಲ್ಲಿ ಪದವಿ ಪಡೆದ ಇವರು ತಮ್ಮ ಪಿಎಚ್.ಡಿ. ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದರು. 1962 ರಿಂದ 1965ರವರೆಗೆ ಗೌಹಾತಿ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ರೀಡರ್ ಆಗಿದ್ದ ಇವರು, 1975ರಿಂದ 1983ರವರೆಗೆ `ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ನಂತರ ಹಿಂದೂ ಪತ್ರಿಕೆಯಲ್ಲಿ ಈಶಾನ್ಯ ಭಾರತ ಹಾಗೂ ದಕ್ಷಿಣ ಆಫ್ರಿಕದ ವಿಶೇಷ ...
READ MORE