`ದಕ್ಷಿಣ v/s ಉತ್ತರ' ಕೆ.ಪಿ ಸುರೇಶ ಅವರ ಅನುವಾದಿತ ಕೃತಿಯಾಗಿದ್ದು, ನೀಲಕಂಠನ್ ಎಸ್.ಆರ್ ಅವರ ಮೂಲ ಕೃತಿಯಿದು. ಭಾರತಕ್ಕೆ ಸದ್ಯ ಎದುರಾಗಿರುವ ಸಮಸ್ಯೆಗಳಿಗೆ ಉತ್ತರ ವರ್ಸಸ್ ದಕ್ಷಿಣ ಎಂಬ ನೆರೇಟಿವ್ ಬಲವಾದ ಚರ್ಚೆಗಳನ್ನು ಎತ್ತಬಲ್ಲುದು ಎಂಬ ನಂಬಿಕೆಯೊಂದಿಗೆ ಹೊರಬಂದಿರುವ ಪುಸ್ತಕ. ಲೇಖಕರೇ ಹೇಳುವಂತೆ ಕೃಷಿ ಲಾಭದಾಯಕವಲ್ಲ ಎಂಬುದು ಜಾಗತಿಕ ವಿದ್ಯಮಾನ. ಭಾರತದಲ್ಲಿ ದೊಡ್ಡ ಜನಸ್ತೋಮ ಸಣ್ಣ ಹಿಡುವಳಿಗಳಲ್ಲಿ ದುಡಿಯುತ್ತಿರುವುದು, ಕಡಿಮೆ ಇಳುವರಿ ಪಡೆಯುತ್ತಿರುವುದು ಸಮಸ್ಯೆಯನ್ನು ಸಂಕೀರ್ಣಗೊಳಿಸಿದೆ...” ಎನ್ನುತ್ತಲೇ, “ಕೃಷಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಹೆಚ್ಚು ಆರ್ಥಿಕ ಮೌಲ್ಯವಿರುವ ಆರ್ಥಿಕ ಚಟುವಟಿಕೆಗಳೆಡೆಗೆ ಜನರನ್ನು ಚಲಿಸುವಂತೆ ಮಾಡುವ ಮೂಲಕವಷ್ಟೇ ಈ ವಿಷವೃತ್ತವನ್ನು ತುಂಡರಿಸಬಹುದು...” ಎಂಬತ್ತ ಲೇಖಕರ ವಾದ ಚಲಿಸುತ್ತದೆ. ಪ್ರಾತಿನಿಧಿಕ ಪ್ರಜಾಸತ್ತೆಯಲ್ಲಿ ಜನಪ್ರಾತಿನಿಧ್ಯ ಕಾಯಿದೆ ಮತ್ತು ಪಕ್ಷಾಂತರ ನಿಷೇಧ ಕಾಯಿದೆಗಳ ನಡುವಣ ವೈರುಧ್ಯದ ಬಗ್ಗೆ ಚರ್ಚಿಸುವಾಗ, ಈ ವೈರುಧ್ಯವು ಸೂಕ್ಷ್ಮವಾಗಿ ಗಮನಿಸಿದರೆ ಸಾಂವಿಧಾನಿಕ ಬಿಕ್ಕಟ್ಟಾಗಬಲ್ಲ ಸ್ವರೂಪದ್ದು ಎಂಬುದನ್ನು ಮರೆಯುವಂತಿಲ್ಲ. ಜನಪ್ರತಿನಿಧಿಗಳು “ಲಾ ಮೇಕರ್ಸ್” ಆಗುವ ಬದಲು ಸರ್ಕಾರದ ಸಂಪನ್ಮೂಲಗಳನ್ನು ತಾವು ಪ್ರತಿನಿಧಿಸುವ ಕ್ಷೇತ್ರಗಳಿಗೆ, ತಮ್ಮ ಪಕ್ಷದ (ಅಥವಾ ಸಿದ್ಧಾಂತದ) ಬೆಂಬಲಿಗರು/ಹಿತಾಸಕ್ತಿಗಳಿಗೆ “ವರ ನೀಡುವಂತೆ” ಹಂಚುವ ದೇವರಾಗಿಬಿಟ್ಟಿದ್ದಾರೆ ಎಂಬ ವಾಸ್ತವವನ್ನು ಪರಿಗಣಿಸದೆ ಈ ಪುಸ್ತಕದ ಚರ್ಚೆ ಮುಂದುವರಿಯುತ್ತದೆ.
ಕೆ.ಪಿ. ಸುರೇಶ್ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಸುಸ್ಥಿರ/ಸಾವಯವ ಕೃಷಿ, ಗಾಂಧೀ ವಿಚಾರಗಳು, ಸಾಹಿತ್ಯ- ವಿಭಿನ್ನ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುವ ಇವರು ಈಗಾಗಲೇ ಎರಡು ಕವನ ಸಂಕಲನ, ಎರಡು ಅನುವಾದಿತ ಕೃತಿಗಳನ್ನು ರಚಿಸಿದ್ದಾರೆ. ಕೃಷಿ ಮತ್ತು ಗ್ರಾಮೀಣ ಆರ್ಥಿಕತೆ ಅಭಿವೃದ್ಧಿ, ಇವುಗಳ ಬಗ್ಗೆ ಸತತ ಚಿಂತನೆ ನಡೆಸುವ ಇವರು ತೆರೆಯ ಹಿಂದೆಯೇ 'ಅನಾಮಿಕ'ರಾಗಿ ಇರಲು ಬಯಸುವವರು. ಇವರ ಸಾಹಿತ್ಯ ಕೈಂಕರ್ಯ, ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ...
READ MOREಬೈನರಿಯೊಂದರ ಬಿಕ್ಕಟ್ಟುಗಳು( ರಾಜಾರಾಂ ತಲ್ಲೂರು ವಿಮರ್ಶೆ)