ಸಾವಿರಾರು ವ್ಯಕ್ತಿಚಿತ್ರಗಳನ್ನು ವಿಶಿಷ್ಟವಾಗಿ ಪರಿಚಯಿಸಿ ಸೈ ಅನ್ನಿಸಿ ಕೊಂಡವರು ಹಳೆಯೂರು ಶ್ರೀನಿವಾಸ ಕೃಷ್ಣಸ್ವಾಮಿ ಅಯ್ಯಂಗಾರ್ (ಎಚ್ಚೆಸ್ಕೆ). ಅಂಕಣ ಬರಹದ ವೈಶಿಷ್ಟ್ಯವೆಂದರೆ ಸಾಮಾನ್ಯ ಓದುಗರಿಂದ , ವಿದ್ವಾಂಸರ ತನಕ ಆಕರ್ಷಿಸುವ ಗುಣವನ್ನು ಪಡೆದುಕೊಂಡಿರುತ್ತದೆ. ಎಚ್ಚೆಸ್ಕೆರವರು ವಾರವಾರವೂ ಅನೇಕ 'ವಾರದ ವ್ಯಕ್ತಿ'ಗಳನ್ನು ತಮ್ಮ ಅಂಕಣದಲ್ಲಿ ಚಿತ್ರಿಸಿದ್ದರು. ಈ ಲೇಖನಳೇ ಬದುಕು-ಬೆಳಕು. 'ಬದುಕು-ಬೆಳಕು'ರಲ್ಲಿರುವ ವಾರದ ವ್ಯಕ್ತಿಗಳು: ಪು.ತಿ.ನ., ಎಸ್.ವಿ.ರಂಗಣ್ಣ, 'ರಸಿಕ ರಂಗ, ಡಿ.ಎಲ್.ಎನ್., ವಿ.ಕೃ.ಗೋಕಾಕ್, ಜಿ.ಶಂಕರ ಕುರುಪ್, ಡಾ. ಎ.ಎನ್.ಉಪಾಧ್ಯ, ಡಾ. ಶಿವರಾಮ ಕಾರಂತ, ಡಿ.ವಿ.ಜಿ., ಡಾ.ದ.ರಾ.ಬೇಂದ್ರೆ, 'ಅ.ನ.ಕೃ.', ಗೋಪಾಲಕೃಷ್ಣ ಅಡಿಗ, ಜಿ.ಪಿ.ರಾಜರತ್ನಂ, ರಾಷ್ಟ್ರಕವಿ ಕುವೆಂಪು ಇನ್ನೂ ಅನೇಕರು.
ಎಚ್.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ‍್ಯರು ಮೈಸೂರಿನವರು. ಕೃಷ್ಣರಾಜನಗರ ತಾಲ್ಲೂಕಿನ ಹಳೆಯೂರು ಗ್ರಾಮದವರು. ತಂದೆ ಎಚ್. ಶ್ರೀನಿವಾಸ ಅಯ್ಯಂಗಾರ್, ತಾಯಿ ಅಲಮೇಲಮ್ಮ. ಜನನ 06-08-1920. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಕಾಂ. ಪದವೀಧರರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎ. (ಅರ್ಥಶಾಸ್ತ್ರ) ಪದವಿ. ಪತ್ರಿಕೋದ್ಯಮ ಮತ್ತು ಅಧ್ಯಾಪಕ ವೃತ್ತಿ. ಮೈಸೂರಿನ ಡಿ. ಬನುಮಯ್ಯ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಕನ್ನಡ ವಿಶ್ವಕೋಶದ ಮಾನವಿಕ ವಿಭಾಗದ ಸಂಪಾದಕರಾಗಿದ್ದರು. ಬ್ಯಾಂಕಿಂಗ್ ಪ್ರಪಂಚ ತ್ರೈಮಾಸಿಕ ಪತ್ರಿಕೆಯ ಸಂಪಾದಕರು. ಕಾದಂಬರಿಗಳು-ಮುಕ್ತಿಮಾರ್ಗ, ಬಯಕೆಯ ಬಲೆ, ಕುರುಕ್ಷೇತ್ರ. ವ್ಯಕ್ತಿಚಿತ್ರ-ಶ್ರೀರಾಮಾನುಜ, ಎತ್ತರದ ವ್ಯಕ್ತಿಗಳು, ಡಾ. ವಿ.ಕೆ.ಆರ್.ವಿ. ರಾವ್, ಬದುಕು-ಬೆಳಕು, ಬೆಳಕು ಚೆಲ್ಲಿದ ಬದುಕು, ಲಾಲ್ ...
READ MORE