ಡಾ. ವಿಜಯಾ ಅವರ ಕೃತಿ-ಚಿತ್ತ ಕೆತ್ತಿದ ಚಿತ್ರ. ಲೇಖಕಿಯು ಆಗಾಗ ಬರೆದ ಲೇಖನಗಳ ಸಂಗ್ರಹ ಇದು. ಬರೆಹದಲ್ಲಿ ವಸ್ತು ವೈವಿಧ್ಯತೆ ಇದೆ. ದೃಷ್ಟಿಕೋನದಲ್ಲಿ ತೀಕ್ಷಣತೆ ಇದೆ. ಪ್ರತಿ ಬರವಣಿಗೆಯೂ ಸಾಮಾಜಿಕ ಹೊಣೆಗಾರಿಕೆಯನ್ನು ಎಚ್ಚರಿಸುತ್ತದೆ.
ನಾಡಿನ ಹೆಸರಾಂತ ಪತ್ರಕರ್ತೆ, ಪ್ರಕಾಶಕಿಯಾಗಿರುವ ವಿಜಯಾ ಅವರು ದಾವಣಗೆರೆಯವರು. ಅವರು 1942 ಮಾರ್ಚಿ 10ರಲ್ಲಿ ಶ್ಯಾಮಭಟ್, ಸರೋಜಮ್ಮ ಅವರ ಮಗಳಾಗಿ ಜನಿಸಿದರು. ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವಿ ಪಡೆದ ಅವರು ಇಳಾ ಮುದ್ರಣವನ್ನು ಪ್ರಾರಂಭಿಸಿದ್ದಾರೆ. ‘ಪರ್ವ ಒಂದು ಸಮೀಕ್ಷೆ, ಇನಾಂದಾರ್: ವ್ಯಕ್ತಿ, ಕೃತಿ, ಇಂದಿನ ರಂಗಕಲಾವಿದರು (ಕನ್ನಡ ರಂಗಭೂಮಿ ಕಲಾವಿದರ ಮಾಹಿತಿ), ರಂಗ ಚಿಂತನೆ, ಕನ್ನಡ ಸಿನೆಮಾ ಸ್ವರ್ಣಮಹೋತ್ಸವ, ಮಕ್ಕಳ ಸಿನೆಮಾ, ಚಲನಚಿತ್ರರಂಗದ ೧೪ ವ್ಯಕ್ತಿ ಚಿತ್ರಣ, ಕಿರಿಯರ ಕರ್ನಾಟಕ, ಪದಾಂತರಂಗ (ಎನ್.ಕೆ. ಪದ್ಮಾದೇವಿ ಬದುಕು-ಬರಹ ಲೇಖನ ಸಂಗ್ರಹ), ಅಕ್ಕರೆ (ಎನ್. ವ್ಯಾಸರಾಯ ಬಲ್ಲಾಳರ ಅಭಿನಂದನಾ ಗ್ರಂಥ), ಕನ್ನಡ ಚಲನಚಿತ್ರ ...
READ MORE