ಆಧುನಿಕ ಸಂವಹನ ಮಾಧ್ಯಮಗಳಲ್ಲಿ ಅತ್ಯಂತ ಪ್ರಭಾವಿತವಾಗಿರುವ ಜನರನ್ನು ಚುಂಬಕದಂತೆ ಸೆಳೆಯುವ ಮಾಧ್ಯಮವೆಂದರೆ ಸಿನಿಮಾ. ಆದರೆ ಇದನ್ನು ಸಮರ್ಥವಾಗಿ, ರಚನಾತ್ಮಕವಾಗಿ ಬಳಸಿದವರು ಕಡಿಮೆ. ಕನ್ನಡ ಶ್ರೇಷ್ಠ ಬರಹಗಾರರು ಈ ಕಡೆಯೋಚಿಸಲೇ ಇಲ್ಲ. ಇದಕ್ಕೆ ಅಪವಾದ ಕಂಡು ಬರುವವರ ಕೆಲವೇ ಬರಹಗಾರರು.ಅವರಲ್ಲಿಒಬ್ಬರು ನಾಗತಿಹಳ್ಳಿ ಚಂದ್ರಶೇಖರ ಅವರು. ಇವರ ಜನಪ್ರಿಯ ಮಾಧ್ಯಮವಾದ ಸಿನಿಮಾವನ್ನು ಜನಪರವಾಗಿ ಬಳಸಿದವರು. ಕೆಲವು ಮುಖ್ಯ ಸಮಸ್ಯೆಗಳಿಗೆ ಈ ಮಾಧ್ಯಮವನ್ನು ಬಳಸಿಕೊಂಡವರು. ಇಂತವುಗಳ ಸಾಂಸ್ಕೃತಿಕ ನೆಲೆಗಳ ಕುರಿತ ಚರ್ಚೆ ಇಲ್ಲಿನ ಒಂದು ಪುಟ್ಟ ಲೇಖನದಲ್ಲಿದೆ. ಆತ್ಮೀಯರಾದ ಡಾ.ದೊರೇಶ ಅವರು ಇನ್ನಷ್ಟು ಉತ್ತಮ ಪುಸ್ತಕಗಳನ್ನು ಬರೆಯಲಿ ಎಂದು ಆಶಿಸುತ್ತೇನೆ. ಎಚ್.ಟಿ.ಕೃಷ್ಣಮೂರ್ತಿ ಬೆನ್ನುಡಿಯಲ್ಲಿ ಬರೆದಿದ್ದಾರೆ.
ಡಾ. ದೊರೇಶ ಬಿಳೆಕೆರೆ ಅವರು ಚೆನ್ನರಾಯಪಟ್ಟಣದ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ. ಪದವಿ, ಮೈಸೂರಿನ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ.ಎ, ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಎಂ.ಫಿಲ್ ಮತ್ತು ತುಮಕೂರು ವಿ.ವಿ.ಯಿಂದ ಪಿಎಚ್.ಡಿ ಪದವೀಧರರು. ಸದ್ಯ, ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಕೃತಿಗಳು: ಬಹುರೂಪ, ನಿರ್ವಚನ ...
READ MORE