ವರ್ತಮಾನದ ತಲ್ಲಣಗಳು ಸುದ್ದಿಗಳನ್ನು ದಿನನಿತ್ಯ ಪತ್ರಿಕೆಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ನೋಡುತ್ತಿರುತ್ತೇವೆ. ವಿಶ್ವದ ಅನೇಕ ಸುದ್ದಿಗಳು ಅಂಗೈಯಲ್ಲೇ ಸಿಗುವ ಈ ಕಾಲದಲ್ಲಿ ಸುದ್ದಿಗಳ ಮೂಲ ನೆಲೆಯನ್ನು ಆಮೂಲಾಗ್ರವಾಗಿ ವಿವರಿಸುವ ವಿಶ್ಲೇಷಿಸುವ ಬಿಂಬಗಳೇ ಈ ಕಾಲದ ಕನ್ನಡಿಯ ಲೇಖನಗಳು. ಪ್ರಸ್ತುತ ಪುಸ್ತಕದಲ್ಲಿ. ಲೇಖನಗಳ ಸರ ಪಟಾಕಿಗಳಿವೆ. ಈ ಪಟಾಕಿಗಳು ಯಾವ ಪಕ್ಷಕ್ಕೂ ಸೇರಿದವಲ್ಲ ಯಾರನ್ನೂ ಅನುಮೋದಿಸುವುದಿಲ್ಲ. ಸತ್ಯವನ್ನು ಮಾತ್ರ ಹೇಳಲು ಬರೆದಂತಹುವು. ಕಾಲದ ಕನ್ನಡಿ ಎಲ್ಲವನ್ನೂ ಎಲ್ಲರನ್ನೂ ಸಮಾನವಾಗಿ ವಿಮರ್ಶೆಗೆ ಒಳಪಡಿಸುತ್ತದೆ. ಆಕೃತಿಯನ್ನು ಕನ್ನಡಿಯ ಮುಂದಿಟ್ಟರೆ ಯಾವುದನ್ನೂ ಮುಚ್ಚಿಟ್ಟುಕೊಳ್ಳದೆ ಬೆತ್ತಲಾಗುತ್ತವೇ ಹಾಗೆ ಇಲ್ಲಿನ ಲೇಖನಗಳು ಸನ್ನಿವೇಶವನ್ನ, ವ್ಯಕ್ತಿಯ ಮುಖವಾಡದ ಹಿಂದಿನ ಮುಖವನ್ನು ನೇರವಾಗಿ ಪ್ರತಿಬಿಂಬಿಸುತ್ತವೆ.
’ಸಾಲದ ಕನ್ನಡಿ’ ಎಂಬ ಪುಸ್ತಕ ಪ್ರಕಟಿಸಿರುವ ರಾಘವೇಂದ್ರ ನಾವಡರು ಹೊರನಾಡಿನ ಅನ್ನಪೂರ್ಣೇಶ್ವರಿ ಸನ್ನಿಧಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ಲೇಖನ, ಕವಿತೆ, ಕತೆ ಕಾದಂಬರಿಗಳ ಬರವಣಿಗೆಯಲ್ಲಿ ಅವರು ಆಸಕ್ತರಾಗಿದ್ದಾರೆ. ತಮ್ಮ ಕೃತಿಗಳನ್ನು ಬ್ಲಾಗ್ ನಲ್ಲಿ ಪ್ರಕಟಿಸಿದ್ದಾರೆ. ...
READ MORE