ಡಾ. ಆರ್.ವಿ.ಚಂದ್ರಶೇಖರ ರಾಮೇನಹಳ್ಳಿ ಅವರ ಕೃತಿ ಸಾಮಾಜಿಕ ನೀತಿ ಮತ್ತು ಯೋಜನೆ. ವಿಶ್ಲೇಷಣಾತ್ಮಕ ಬರೆಹಗಳು ಇಲ್ಲಿವೆ. ಸಾಮಾಜಿಕ ನೀತಿ ಮತ್ತು ಯೋಜನೆ, ಸರ್ಕಾರೇತರ ಸಂಸ್ಥೆಗಳ ನಿರ್ವಹಣೆ, ಭಾರತದಲ್ಲಿ ನೀತಿ ನಿರೂಪಣೆಯ ಚೌಕಟ್ಟು,ಸಾಮಾಜಿಕ ಅಭಿವೃದ್ಧಿ ಯೋಜನೆ, ಅಭಿವೃದ್ಧಿಯಲ್ಲಿ ಕ್ಷೇತ್ರೀಯ ಮಾದರಿ ಹಾಗೂ ಕಾರ್ಯಕ್ರಮ/ಯೋಜನೆ ಅನುಷ್ಠಾನ ಮತ್ತು ನಿರ್ವಹಣೆ ಶೀರ್ಷಿಕೆಯ ಅಧ್ಯಾಯಗಳಿವೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ರಾಮೇನಹಳ್ಳಿ ಗ್ರಾಮದ ಡಾ. ಆರ್.ವಿ. ಚಂದ್ರಶೇಖರ ರಾಮೇನಹಳ್ಳಿ ಅವರು ಶಿವಾರಪಟ್ಟಣದಲ್ಲಿ ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಪೂರೈಸಿ, ಮಾಲೂರಿನಲ್ಲಿ ಪದವಿ ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್. ಡಿ ಪಡೆದಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದು, ಜಾಗತೀಕರಣ ಮತ್ತು ಸಮಾಜ, ಭಾರತದ ಆರ್ಥಿಕತೆ ಮತ್ತು ವಿಶೇಷ ವಲಯಗಳು, ಭೂಮಿ ಮತ್ತು ಬದುಕು, ಅಭಿವೃದ್ಧಿ ಎಂಬ ಅವನತಿ, ಅಭಿವೃದ್ಧಿ ಕೊಡಲಿಗೆ ಒಕ್ಕಲುತನದ ಕೊರಳು, ಡಿಟೆಕ್ಟೀವ್ ಡೆವೆಲಪ್ ಮೆಂಟ್, ಸಮಕಾಲೀನ ಮಹಿಳೆ ಮತ್ತು ಆರೋಗ್ಯ-ಒಂದು ಸಮಾಜಶಾಸ್ತ್ರೀಯ ಚಿಂತನೆ, ...
READ MORE