ಅನಂತಮೂರ್ತಿ ಅವರ ಅಂಕಣ ಬರಹಗಳ ಸಂಕಲನ. ಈ ಸಂಕಲನದ ಬಗ್ಗೆ ಚಿಂತಕ ಕೆ. ಫಣಿರಾಜ್ ಅವರು ’ಒಳ್ಳೆಯ ಅಂಕಣ ಬರಹಗಳಿಗೆ ಆಟದ ಗುಣವಿರುತ್ತದೆ; ಬರಹಗಾರ ಆಟದ ನಿಯಮಗಳನ್ನು ರೂಪಿಸಿದರೂ, ಇದು ತಾನೊಬ್ಬನೇ ಆಡುವ ಆಟವಲ್ಲ ಎಂದೂ, ಓದುಗರನ್ನು ಹೆಚ್ಚು ಸಂಖ್ಯೆಯಲ್ಲಿ ಅಂಕಣಕ್ಕೆ ಸೆಳೆದಷ್ಟೂ ಆಟ ರೋಚಕವಾಗಿರುತ್ತದೆ ಎಂದೂ ಬಲ್ಲವನಾಗಿರುತ್ತಾನೆ. ಅನಂತಮೂರ್ತಿಯವರ ಪ್ರಸ್ತುತ ಅಂಕಣದ ಮುಕ್ಕಾಲುವಾಸಿ ಬರಹಗಳಿಗೆ, ವೈಚಾರಿಕವಾಗಿ ತನ್ನಂತಲ್ಲದ ಓದುಗರನ್ನು ಅಂಕಣದಿಂದ ಹೊರದೂಡದ, ಆದರೆ ಆಟದ ಕೆಚ್ಚನ್ನು ಮರೆಯದೇ ಅಂಕಣ ಸುತ್ತಿಸುವ 'ಫೇರ್ ಪ್ಲೇ'ಯ ಸತ್ವ ಇರುವುದರಿಂದಲೇ, ಅವರ ಜೊತೆ ವಾಗ್ವಾದ ಸಾಧ್ಯವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MORE