ನವ ಜಾಗತಿಕ ವ್ಯವಸ್ಥೆ ದೃಷ್ಟಿಕೋನಗಳು -ಆಖ್ಯಾನಗಳು

Pages 232

₹ 325.00




Year of Publication: 2022
Published by: ಅಯೋಧ್ಯಾ ಬುಕ್ಸ್
Address: 1571, 36ನೇ ಕ್ರಾಸ್, ಡಾ. ಪುನೀತ್ ರಾಜಕುಮಾರ್ ರೋಡ್, ಬನಶಂಕರಿ 2ನೇ ಹಂತ, ಬೆಂಗಳೂರು, ಕರ್ನಾಟಕ 560070
Phone: 096209 16996

Synopsys

2021 ರಲ್ಲಿ ಸಂವಾದ ವರ್ಲ್ಡ್‌ನಲ್ಲಿ ಪ್ರಕಟವಾದ ಅತ್ಯುತ್ತಮ ಲೇಖನಗಳ ಸಂಕಲನ ಪ್ರಶಾಂತ್ ವೈದ್ಯರಾಜ್ ಅವರ ‘ನವ ಜಾಗತಿಕ ವ್ಯವಸ್ಥೆ ದೃಷ್ಟಿಕೋನಗಳು -ಆಖ್ಯಾನಗಳು’ ಕೃತಿ. ಅಂತರಾಷ್ಟ್ರೀಯ ಸಂಬಂಧಗಳು ಅತ್ಯಂತ ಚಲನಶೀಲವಾಗಿದೆ ಎನ್ನುವಾಗ ಸಾಮಾಜಿಕ ಜಾಗತಿಕ ಘಟನೆಗಳು ಪರಿಚಿತವಾದ ದೃಷ್ಟಿಕೋನಗಳನ್ನೂ ಮತ್ತು ನೆಲೆಗೊಂಡ ಆಖ್ಯಾನಗಳನ್ನೂ ಬದಲಿಸುತ್ತಿರುತ್ತವೆ ಎನ್ನುವ ಗ್ರಹಿಕೆಯನ್ನು ಇಲ್ಲಿ ಕಾಣಬಹುದು. ಬದಲಾಗುವ ಜಾಗತಿಕ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಜಾಗತಿಕ ವಿದ್ಯಮಾನಗಳ ಕುರಿತು ಅರಿವು ಮತ್ತು ಒಳನೋಟಗಳು ಬೇಕಾಗುತ್ತವೆ. ಅಂತಹ ವಿಚಾರಗಳನ್ನು ನಮಗೆ ಇಲ್ಲಿ ಸಿಗುತ್ತವೆ. ನೆಮ್ಮದಿಯ ಜೀವನ ನಡೆಸಬೇಕೆಂದರೆ ಇಂದು ಜಾಗತೀಕರಣದ ಮರು ವ್ಯಾಖ್ಯಾನ ಆಗಬೇಕು ಹಾಗೂ ಸುಸ್ಥಿರ ಅಭಿವೃದ್ಧಿ ಮಾದರಿಗಳು ಮತ್ತು ಸಾಮಾಜಿಕ ಮೌಲ್ಯಗಳ ಕುರಿತು ಚಿಂತನೆ ನಡೆಯಬೇಕು. ಈ ವಿಚಾರಗಳನ್ನು ಪೂರ್ವಾಗ್ರಹರಹಿತವಾಗಿ ಪ್ರಚುರಪಡಿಸುವುದರಲ್ಲಿ ಮಾಧ್ಯಮಗಳ ಪಾತ್ರ ಮಹತ್ವದಾಗಿದೆ ಎನ್ನುತ್ತದೆ ಈ ಕೃತಿ. ನಮ್ಮ ಜೀವನದಲ್ಲಿ ಬದಲಾವಣೆಗಳನ್ನು ತರುವುದರ ಜೊತೆಗೆ ನಾವು ವಾಸಿಸುವ ಪ್ರಪಂಚದ ಮೇಲೆ ಪ್ರಭಾವ ಬೀರಿದ ಅತ್ಯಂತ ಮುಖ್ಯವಾದ ಅಂತರರಾಷ್ಟ್ರೀಯ ಘಟನೆಗಳು ಮತ್ತು ಸಮಸ್ಯೆಗಳನ್ನು ವಿಶ್ಲೇಷಿಸುತ್ತದೆ. ವಿಶ್ವಾದ್ಯಂತ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಅರಿವು ಮೂಡಿಸುವುದೇ ಸಂವಾದ ವರ್ಲ್ಡ್ ಪ್ರಾರಂಭದಿಂದಲೂ ಹೊಂದಿರುವ ಉದ್ದೇಶ. ಪರಿಣಾಮವಾಗಿ, ಈ ಪುಸ್ತಕವು ಅಂತರರಾಷ್ಟ್ರೀಯ ಸಂಬಂಧಗಳು ನಮ್ಮ ಜೀವನ ಮತ್ತು ಭವಿಷ್ಯಕ್ಕೆ ಸಂಬಂಧಿಸಿದೆ ಎಂಬ ಅಂಶವನ್ನು ಈ ಕೃತಿಯು ಪ್ರದರ್ಶಿಸುತ್ತದೆ.

Related Books