ಇಪ್ಪತ್ತು ಲೇಖನಗಳ ಸಂಗ್ರಹ ಬಸವರಾಜ ಕುಂಬಾರರ ’ಭರವಸೆಯೇ ಬದುಕು’ ಕೃತಿ. ತನ್ನ ಬದುಕನ್ನು ಬೆಳೆಸಿದ ಸುತ್ತುವರೆದ ಗಾಳಿ, ಬೆಳಕನ್ನು ಕುರಿತ ಚಿಂತನೆಗಳು ಒಳಗೊಂಡಿವೆ. ’ಉಸುಕಿನ ಅಂಗಳದಲ್ಲಿ’ ಎಳೆಯರೆಲ್ಲ ಕುಳಿತು ಉಸುಕಿನದೊಂದು ಗುಬ್ಬಿಮನೆ ಮಾಡಿಕೊಂಡು ಆಟ ಆಡುತ್ತಿದ್ದ ಬಗೆ ಇಲ್ಲಿನ ಲೇಖನಗಳಲ್ಲಿ ಮಿಳಿತಗೊಂಡಿದೆ. ತಾನು ಆಡಿದ ಮನೆ, ತನ್ನ ಸುತ್ತ ಮುತ್ತಲಿನ ಪರಿಸರ ಇಲ್ಲಿನ ಲೇಖನಗಳಲ್ಲಿವೆ.
ಬರಹಗಾರ ಬಸವರಾಜ ಕುಂಬಾರ್ ಅವರು ಜನಿಸಿದ್ದು 1987 ಜೂನ್ 1ರಂದು. ರಾಯಚೂರು ಜಿಲ್ಲೆ ಸಿಂದನೂರು ತಾಲ್ಲೂಕಿನ ಅರಳಹಳ್ಳಿಯವರಾದ ಬಸವರಾಜರ ತಂದೆ ಶಿವಪ್ಪ ಕುಂಬಾರ್, ತಾಯಿ ಕಲ್ಯಾಣಮ್ಮ. ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಇವರ ಪ್ರಮುಖ ಕೃತಿಗಳೆಂದರೆ ಭರವಸೆಯೇ-ಬದುಕು ಮತ್ತು ನಕ್ಷತ್ರ ಮಾಲೆ. ...
READ MORE