ಕಾದಂಬರಿಕಾರ-ಚಿಂತಕ ಅ.ನ.ಕೃಷ್ಣರಾಯರ ಕೃತಿ-ಕನ್ನಡದ ದಾರಿ. ಕರ್ನಾಟಕದ ಶಿಕ್ಷಣ, ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಜನಪದ ಸಾಹಿತ್ಯ ಹೀಗೆ ವಿವಿಧ ವಿಷಯ ವಲಯಗಳ ಸಮಸ್ಯೆಗಳು ಹೀಗೆ ವಿಮರ್ಶೆಗಳ ಸಂಕಲನ ಈ ಕೃತಿ. ಹಲವು ವರ್ಷಗಳಿಂದ ನಾಡಿನ ವಿವಿಧ ಪತ್ರಿಕೆಗಳಿಗೆ ಬರೆದ ಲೇಖನಗಳ ಸಂಗ್ರಹ ಕೃತಿ ಇದು. ಕೆಲವು ಹೊಸ ಲೇಖನಗಳೂ ಇಲ್ಲಿ ಸೇರಿವೆ. ಒಟ್ಟುಗೂಡಿಸಿದ ಇಲ್ಲಿಯ ಲೇಖನಗಳು ಕನ್ನಡ ನಾಡು-ನುಡಿಯ ಸಮಸ್ಯೆಗಳ ಗಂಭೀರ ಸ್ವರೂಪ ಹಾಗೂ ಪರಿಹಾರವಾಗಿ ಕೆಲವು ಹೊಳವುಗಳನ್ನು ನೀಡುತ್ತದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಸಂದೇಶ, ಕನ್ನಡ ಪ್ರಚಾರ, ಇಂಡಿಯಾ-ಚೀಣಾ ಬಾಂಧವ್ಯ, ಕನ್ನಡಕ್ಕಾಗಿ ಕಳವಳ, ಶಿಕ್ಷಣದಲ್ಲಿ ಮಾತೃಭಾಷೆಯ ಸ್ಥಾನ, ಸ್ತ್ರೀಯರೂ ಕನ್ನಡವೂ, ಮುಸಲ್ಮಾನರೂ ಕರ್ನಾಟಕವು, ಹಿಂದಿಗೆ ಪ್ರಾಮುಖ್ಯತೆ, ದಕ್ಷಿಣ ಹಿಂದೂಸ್ತಾನಕ್ಕೆ ಒಂದೇ ಲಿಪಿ, ಕನ್ನಡ-ಸಂಸ್ಕೃತವಾದ, ತರುಣ ಸಾಹಿತಿಗಳಿಗೊಂದು ಮಾತು, ಸಾಹಿತಿಗಳಿಗೆ ಎಚ್ಚರಿಕೆ, ಸಾಹಿತ್ಯದಲ್ಲಿ ಕೋಮುವಾದ ವ್ಯಾದಿ, ಕಿರಿಯರ ಸಾಹಿತ್ಯದ ಮೇಲೆ ಹಿರಿಯರ ಕೊಡಲಿ, ಮುಂಬೈಯಲ್ಲಿ ಕನ್ನಡ ಕಲಾವಿದರು, ಕನ್ನಡ ನಾಡಿನ ಕಲೆಗಳ ಬಾಳು-ಬದುಕು ಇಂಥಹ ವಿದ್ವತ್ ಪೂರ್ಣವಾದ 36 ಲೇಖನಗಳ ಸಂಗ್ರಹವಾಗಿದೆ ಈ ಕೃತಿ.
‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...
READ MORE