ಇಲ್ಲಿನ ಲೇಖನಗಳಲ್ಲಿ ಗಮನಿಸಬೇಕಾದ ಪ್ರಮುಖ ಅಂಶವಿದೆ. ಅತಿ ಕಡಿಮೆ ಪದಗಳಲ್ಲಿ ಶ್ರೇಷ್ಠ ಚಿಂತನೆಗಳ ಮತ್ತು ವ್ಯಕ್ತಿಗಳ ಪರಿಚಯವನ್ನು ಮಾಡುವ ಕಲೆ, ಶ್ರೀಲಕ್ಷ್ಮೀಯ ಕುರಿತು ಸುದೀರ್ಘ ಲೇಖನ ಇರುವುದರಿಂದ ಕೃತಿಗೆ 'ಶ್ರೀಕಾರ' ಹೆಸರಿಟ್ಟಿರುವುದು ಅರ್ಥಪೂರ್ಣ. ಇಲ್ಲಿ ಎಂದು ಶಂಕರಾಚಾರ್ಯರ ಅದೈತ, ವೇದಪುರಾಣಗಳಲ್ಲಿ ಹಿಂದೂ ವ್ಯಾಖ್ಯಾನ ಬಲರಾಮನ ಬದುಕು ಎಲ್ಲವನ್ನೂ ಸಣ್ಣ ಸಣ್ಣ ಲೇಖನಗಳಲ್ಲಿ ಹಿಡಿದುಕೊಟ್ಟಿದ್ದಾರೆ. ಈ ಸಣ್ಣ ಲೇಖನಗಳು ಆ ವ್ಯಕ್ತಿ ಅಥವಾ ವಿಷಯದ ಸಂಪೂರ್ಣ ಮಾಹಿತಿ ನೀಡುವುದಿಲ್ಲವಾದರೂ, ಪ್ರಾರಂಭದ ಹಂತದಲ್ಲಿರುವವರಿಗೆ ಉತ್ತಮ ಪ್ರವೇಶ ನೀಡುತ್ತದೆ. ಹವ್ಯಾಸ ವೃದ್ಧಿಸಿಕೊಳ್ಳಬೇಕೆಂಬ ಬಯಕೆಯಿರುವ ಪ್ರತಿಯೊಬ್ಬರಿಗೂ ಈ ಪುಸ್ತಕ ಹೇಳಿ ಮಾಡಿಸಿದ್ದು, ಮನೆಯಲ್ಲಿರುವ ಶಾಲೆ ಕಾಲೇಜಿಗೆ ಹೋಗುವ ಯುವಕರಲ್ಲಿ ಓದುವ ಹವ್ಯಾಸ ತುಂಬಲು ಈ ಪುಸ್ತಕ ಉತ್ತಮ ಉಡುಗೊರೆ.
ಹನುಮಂತ.ಮ. ದೇಶಕುಲಕರ್ಣಿ ಅವರು ಪತ್ರಕರ್ತನಾಗಿ, ಲೇಖಕನಾಗಿ, ಸಂಘಟಕನಾಗಿ , ಕವಿಯಾಗಿ, ವ್ಯಂಗ್ಯ ಚಿತ್ರಕಾರನಾಗಿ ಹೀಗೆ ವಿವಿಧ ಪ್ರಕಾರಗಳಲ್ಲಿ ಹೆಸರು ಮಾಡಿದವರು. ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗುತ್ತಿದ್ದು ಅವುಗಳಲ್ಲಿ ಸಾಮಾಜಿಕ, ಧಾರ್ಮಿಕ , ಸಾಂಸ್ಕೃತಿಕ, ಶೈಕ್ಷಣಿಕ ಮುಂತಾದ ವಿಷಯಗಳು ತುಂಬಿರುತ್ತವೆ. ಇವರ ಪ್ರಬುದ್ಧ ಲೇಖನಗಳು ನಾಡಿನ ಹೆಸರಾಂತ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕದಲ್ಲಿ, ಮಾಸ ಪತ್ರಿಕೆಯಲ್ಲಿ 4,000ಕ್ಕೂ ಮಿಕ್ಕಿ ಲೇಖನಗಳು ಪ್ರಕಟವಾಗಿವೆ. "ಟಾಂಗಣ್ಣ" ಹೆಸರಿನಲ್ಲಿ ಓರೆಕೋರೆಗಳಿಗೆ ಭೂತಗನ್ನಡಿ ಹಿಡಿಯುವ ಹಾಸ್ಯ ಪಾತ್ರವನ್ನು ಸೃಷ್ಟಿಸಿಕೊಂಡು ಹಾಸ್ಯ ಬರಹಗಳನ್ನು ಬರೆಯುತ್ತ ಬಂದಿರುವ ಇವರು ತಿಳಿಹಾಸ್ಯದ ಮೂಲಕ ನಗಿಸುತ್ತಾರೆ. ’ಅಂಬರಗಾಮಿ’ ಎಂಬ ...
READ MORE