‘ಪ್ರೀತಿಸುವವರನ್ನು ಕೊಂದುಬಿಡಿ’ ಲೇಖಕ ಜೋಗಿ ಅವರ ಕೃತಿ. ಲೈಫ್ ಈಸ್ ಬ್ಯೂಟಿಫುಲ್ ಮತ್ತು ತಂದೆತಾಯಿ ದೇವರಲ್ಲ ಕೃತಿಗಳ ನಂತರ ಹೊರಬರುತ್ತಿರುವ ಮೂರನೆಯ ಪುಸ್ತಕ ಇದು. ಈ ಪುಸ್ತಕ ಸಾಹಿತ್ಯವನ್ನು ಈಗಾಗಲೇ ಓದಿಕೊಂಡಿರುವ ಪ್ರಾಜ್ಞರಿಗಾಗಿ ಅಲ್ಲ. ಈಗಷ್ಟೇ ಕನ್ನಡ ಕೃತಿಗಳನ್ನು ಓದಲು ಶುರುಮಾಡಿರುವ ಹದಿಹರೆಯದ ತರುಣ ತರುಣಿಯರಿಗೆ. ಇಂಗ್ಲಿಷ್ ನಲ್ಲಿ ಜನಪ್ರಿಯವಾಗಿ ಯಂಗ್ ಅಡಲ್ಟ್ ಫಿಕ್ಷನ್ ಮಾದರಿಯದು ಎನ್ನುತ್ತಾರೆ ಲೇಖಕ ಜೋಗಿ.
ಜೋಗಿ, ಜಾನಕಿ, ಎಚ್. ಗಿರೀಶ್ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್ ರಾವ್ ಹತ್ವಾರ್ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್ 16ರಂದು. ಮೂಲತಃ ಸೂರತ್ಕಲ್ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಾಯ್ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...
READ MORE