‘ಚಂದ್ರಶೇಖರ ಪಾಟೀಲ (ಚಂಪಾ) ಚಿಂತನಶೀಲ ಸಾಹಿತಿ ಮತ್ತು ಜನಪದ ಹೋರಾಟಗಾರ’ ಕೃತಿಯು ಜಿ. ಚಂದ್ರಶೇಖರ್ ಅವರ ವ್ಯಕ್ತಿ ಕುರಿತ ಲೇಖನಗಳ ಸಂಕಲನವಾಗಿದೆ. ಇಲ್ಲಿ ಸಮಗ್ರವಾಗಿ ಚಂಪಾ ಅವರ ವ್ಯಕ್ತಿತ್ವ ಮತ್ತು ಕೃತಿತ್ವವನ್ನು ಕಟ್ಟಿಕೊಡಲಾಗದಿದ್ದರೂ, ಅವರ ಹೋರಾಟದ ಬದುಕು ಮತ್ತವರ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. 17 ಅಧ್ಯಾಯಗಳನ್ನು ಒಳಗೊಂಡ ಈ ಕೃತಿಯು 83ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚಂಪಾ, ಧಾರವಾಡ : ಕವಿ ಕೋಗಿಲೆಗಳ ಪುಣ್ಯಾಧಾಮ, ಚಂಪಾ : ಹೆಣ್ಣೋ? ಗಂಡೋ?, ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಗೋಕಾಕ್ ಚಳುವಳಿ ಮತ್ತು ಚಂಪಾ?, ಬಂಡಾಯ ಸಾಹಿತ್ಯ ಚಳವಳಿ, ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ ಚಂಪಾ, ಪಾಟೀಲರ ‘ಸಂಕ್ರಮಣ’ ವೆಂಬ ಬತ್ತದ ತೊರೆ, ಚಂಪಾರಿಗೆ ಸಂದ ಪಂಪ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಚಂಪಾ, ಕನ್ನ ಅಭಿವೃದ್ದಿ ಪ್ರಾಧಿಕಾರದಲ್ಲೊಬ್ಬ ಕನ್ನಡದ ಹರಿಕಾರ, ಚಂಪಾರ ಕವಿತೆಗಳು, ಅಸಂಗತ ರಂಗಭೂಮಿ : ಚಂಪಾ ನಾಟಕಗಳು(ಹೆಚ್. ಎ. ಪಾಶ್ವನಾಥ್), ‘ಸಂಕ್ರಮನ’ 25 : ಹೊಸ ಕ್ಷಿತಿಜಗಳತ್ತ (ಕೆ.ಎಸ್. ಭಗವಾನ್), ಕನ್ನಡ ಭಾಷೆಯ ಬಗ್ಗೆ ಚಂಪಾ ಅನಿಸಿಕೆ, ಸಾಹಿತ್ಯ ಸಮ್ಮೇಳನ : ಅಂದು- ಇಂದು, ಚಂಪಾರವರ ಬದುಕು, ಬರೆಹದ ಮೇಲೊಂದು ಕ್ಷ-ಕಿರಣ ಹೀಗೆ ಹಲವಾರು ವಿಚಾರಗಳನ್ನು ಒಳಗೊಂಡಿದೆ.
ಲೇಖಕ ಜಿ. ಚಂದ್ರಶೇಖರ್ ಅವರು ಮೂಲತಃ ಮೈಸೂರಿನವರು. ಮೈಸೂರಿನ ವಿದ್ಯಾ ಸಂಸ್ಥೆ ವಿದ್ಯಾವರ್ಧಕ ಕಾಲೇಜಿನಲ್ಲಿ ಸಾಹಿತ್ಯದ ಅಧ್ಯಾಪಕರಾಗಿ, ಸದ್ಯ, ನಿವೃತ್ತರು. ಕೃತಿಗಳು : ಚಂದ್ರಶೇಖರ ಪಾಟೀಲ(ಚಂಪಾ)ಚಿಂತನಶೀಲ ಸಾಹಿತಿ ಮತ್ತು ಜನಪದ ಹೋರಾಟಗಾರ. ...
READ MORE