‘ಸಾಹಿತ್ಯ ಕಲೆ’ ಲೇಖಕ ಎಂ.ಎಚ್. ಕೃಷ್ಣಯ್ಯ ಅವರ ಲೇಖನ ಸಂಕಲನ. ಲೇಖಕಿ ಡಾ. ವಿಜಯಾ ಅವರು ಕೃತಿಗೆ ಬೆನ್ನುಡಿ ಬರೆದು ‘ಯಾವುದೇ ಶ್ರೇಷ್ಠ ಸೃಜನಶೀಲ ಕಲೆ ತನ್ನನ್ನು ಬಿಟ್ಟು ಕೊಡುವುದಿಲ್ಲ; ಬಿಚ್ಚಿಕೊಳ್ಳುವುದಿಲ್ಲ. ಅದು ತನ್ನಷ್ಟಕ್ಕೆ ಒಂದು ಅನುಭವ, ಅದು ಅನಿರ್ವಚನೀಯ. ಅಂಥ ಕ್ಷಣಗಳಿಗಾಗಿ ತುಡಿತ ಸಹಜ. ಆದರೆ, ಆ ಅನುಭವ ನೆರಳು - ಬೆಳಕಿನಂತೆ ಒಮ್ಮೆ ಸನಿಹ - ಒಮ್ಮೆ ದೂರ-ಬಹುದೂರ, ದಕ್ಕಿಸಿಕೊಳ್ಳಲೇ ಬೇಕಾದ ಅನುಭವ - ಆನಂದಕ್ಕೆ ಯಾವುದೇ ಕಲಾಕೃತಿಗೆ ಇರಬಹುದಾದ ಕ್ಲಿಷ್ಟತೆ - ಸಾಧ್ಯತೆಗಳನ್ನು ಕಂಡುಕೊಳ್ಳಲು ಹುಡುಕಾಟ, ಅಮೂರ್ತವಾಗಿರಬಹುದಾದ್ದನ್ನು ಅಥವಾ ಹಾಗೆ ಭಾವಿಸುವಂಥ ಕೃತಿಯ ಪ್ರವೇಶಕ್ಕೊಂದು ಪಥ ದರ್ಶನವಾಗಬೇಕು. ಪ್ರೊ. ಎಂ.ಎಚ್.ಕೆ. ಹೆಬ್ಬಾಗಿಲು ತೆರೆದು ಒಳಗಿನ ಅಗಾಧತೆಗೊಂದು ಪುಟ್ಟ ಸೊಡರ ಬೆಳಕನ್ನು ಈ 'ಸಾಹಿತ್ಯ ಕಲೆ'ಯ ಮೂಲಕ ಹರಿಸಿದ್ದಾರೆ. ಇದೀಗ ಕಲಾ ರಸಿಕನಿಗೆ ಗ್ರಹಿಸಲು, ಕಲ್ಪಿಸಲು, ಭಾವಿಸಲು, ಒಂದು ಅನನ್ಯ ಅನುಭವವಾಗಿಸಿಕೊಳ್ಳಲು ಅನಂತ ಅವಕಾಶ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಟ್ಟೀಮನಿ ಅವರ ಚಾರಿತ್ರಿಕ ಕಾದಂಬರಿಗಳ ಸ್ವರೂಪ, ಸಣ್ಣಕಥೆ, ಕೈಲಾಸಂ ಸ್ಮರಣೆ ಮತ್ತು ಮೃಚ್ಛಕಟಿಕ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಸಾಹಿತ್ಯ ಮತ್ತು ಕಲೆ, ಹೊಸಗನ್ನಡ ಕಾವ್ಯದಲ್ಲಿ ವಿನೋದ, ಕನ್ನಡದಲ್ಲಿ ಪ್ರವಾಸ ಸಾಹಿತ್ಯ: ಅಮೆರಿಕ, ಕನ್ನಡ ಸಾಹಿತ್ಯದಲ್ಲಿ ಚರಿತ್ರೆ ಮತ್ತು ಪುರಾಣ, ಶಾಸ್ತ್ರೀಯ ಸಂಗೀತದಲ್ಲಿ ಸಾಹಿತ್ಯ, ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ: ಡಾ. ರಾಜಾರಾಮಣ್ಣ, ಪಾಶ್ಚಾತ್ಯ ಪ್ರಾಚೀನ ಮಹಾಕಾವ್ಗಗಳು, ನವೋದಯ ಕಲೆ, ವಿಡಿಯೊ ಕಲೆ/ ವಿಡಿಯೊ ಸ್ಥಾಪನಾ ಕಲೆ ಹಾಗೂ ಕಲೆ: ಕೆಲವು ಟಿಪ್ಪಣಿಗಳು (ಪ್ರಾದಿಮ ಮಾನವ ಕಲೆ, ಕಲೆ ಮತ್ತು ಪರಿಸರ ಮಾಧ್ಯಮ, ಗಣಕ ಕಲೆ, ಡಿಜಿಟಲ್ ಕಲೆ ಮತ್ತು ಪ್ರಿಂಟ್ಸ್, ಕೊಲಾಜ್ ಕಲೆ-ವಿ. ಬಾಲು, ಕಲೆ: ಪರಂಪರೆ ಮತ್ತು ವಿಜ್ಞಾನ, ಸ್ವೀಕರಣ ಕಲೆ, ಚರ್ಮ ಪ್ರಸಾದನ ಕಲೆ) ಹೀಗೆ ವಿವಿಧ ಅಧ್ಯಾಯಗಳನ್ನು ಈ ಕೃತಿ ಒಳಗೊಂಡಿವೆ.
ಸಾಹಿತಿ, ವಿಮರ್ಶಕ ಪ್ರೊ. ಎಂ. ಎಚ್. ಕೃಷ್ಣಯ್ಯ ಅವರು (ಜನನ: 21-07-1937) ಮೈಸೂರಿನಲ್ಲಿ ಜನಿಸಿದರು. ತಂದೆ ಹುಚ್ಚಯ್ಯ, ತಾಯಿ ಕೆಂಪಮ್ಮ. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ. ಎ ಮತ್ತು ಎಂ. ಎ. ಪದವೀಧರರು. ಬೆಂಗಳೂರು, ಕೋಲಾರ, ಮಂಗಳೂರು, ಮಾಗಡಿ ಮುಂತಾದೆಡೆ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. 1979-83ರಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ನಿರ್ದೇಶನಾಲಯದ ಯುವ ಕರ್ನಾಟಕ ಹಾಗೂ ಸ್ಫೋರ್ಟ್ಸ್ ಅರೆನಾ ಪತ್ರಿಕೆಗಳಿಗೆ ಇವರನ್ನು ಸರ್ಕಾರವು ಸಂಪಾದಕರೆಂದು ನಿಯೋಜಿಸಿತ್ತು. ಲಲಿತ ಕಲಾ ಅಕಾಡೆಮಿಯ `ಕರ್ನಾಟಕ ಕಲಾವಾರ್ತೆ '(1987-92) ಗೌರವ ಸಂಪಾದಕರು ಮತ್ತು ಕಲಾ ಪಂಥ ಮಾಲೆಯ ‘ಎಕ್ಸ್ ಪ್ರೆಷನಿಸಂ’ ಹಾಗೂ ‘ಇಂಪ್ರೆಷನಿಸಂ’ ಪುಸ್ತಕಗಳಿಗೆ ...
READ MORE