ಚಿ. ನಾ. ರಾಮು ಅವರ ಬರೆದ ಕೃತಿ-‘ಬಲಿತ ದಲಿತರ ತುಳಿತ ನನ್ನ ಜನ ಅನಾಥ'. ಇದು ಮೀಸಲು ವಂಚಿತ ಕೇರಿ ಅಸ್ಪೃಶ್ಯನ ಆಕ್ರಂದನ ಎಂಬ ಉಪಶೀರ್ಷಿಕೆಯಡಿ ‘ಮೀಸಲು ಮಹಾಮೋಸಕ್ಕೆ ಕೆನೆಪದರವೇ ನ್ಯಾಯ’ ಎಂಬ ಘೊಷಣೆಯು ಈ ಕೃತಿಯ ಪ್ರತಿಪಾದನೆಯಾಗಿದೆ. ಲೇಖಕ ನೀರಕಲ್ಲು ಶಿವಕುಮಾರ್ ಅವರು ಕೃತಿಯನ್ನು ನಿರೂಪಿಸಿದ್ದಾರೆ.
‘ಮೀಸಲಾತಿ ಬಲದಿಂದ ಮೇಲೆದ್ದು ಬಂದು ಸಾಮಾಜಿಕ ವ್ಯವಸ್ಥೆಯ ಅಟ್ಟಣಿಗೆ ಏರಿ ಕುಳಿತವರು ತಮ್ಮದೇ ಉನ್ನತ ವರ್ಗವೊಂದನ್ನು ಕಟ್ಟಿಕೊಂಡು ಬಲಿತ ದಲಿತ ಏಕ ಚಕ್ರಾಧಿಪತ್ಯವನ್ನು ಸೃಷ್ಟಿಸಿಕೊಂಡಿದ್ದಾರೆ. ಬಡತನ ಚಾದರ ಹೊದ್ದು ಮಲಗಿದವರು ಕೇರಿಯಲ್ಲೇ ಕೊಳೆಯುತ್ತಿದ್ದಾರೆ. ಇವರು ತಮ್ಮದೇ ಸಮಾಜದ ನಡುವೆ ಅನಾಥರಂತಿದ್ದಾರೆ’ ಎಂದು ಲೇಖಕರು ಈ ಕೃತಿಯಲ್ಲಿ ಚರ್ಚಿಸಿದ್ದಾರೆ.
ಕೋರ್ಟ್ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರು ಕೃತಿಗೆ ಬೆನ್ನುಡಿ ಬರೆದು‘ ಪರಿಶಿಷ್ಟರ ಮೀಸಲಾತಿಯು ಆ ವರ್ಗದಲ್ಲಿಯ ಕೆಳಮಟ್ಟದ ಜನರಿಗೇ ತಲುಪುತ್ತಿಲ್ಲ. ಹೀಗಾಗಿ, ಮೀಸಲು ವಿಮರ್ಶೆ ಅಥವಾ ಕೆನೆಪದರು ನೀತಿ ಜಾರಿ ಅವಶ್ಯ ಎಂದು ಸುಪ್ರೀಂಕೋರ್ಟ್, ಮೀಸಲಾತಿ ಕುರಿತ ಹಲವಾರು ಪ್ರಕರಣಗಳಲ್ಲಿ ಅಭಿಪ್ರಾಯಪಟ್ಟಿದೆ’ ಎಂದು ಈ ಪುಸ್ತಕದ ನಿಲುವು ಪ್ರಶಂಸಿಸಿದ್ದಾರೆ.
ಲೇಖಕ ಚಿ.ನಾ. ರಾಮು ಅವರು ಬಿಜೆಪಿಯ ಎಸ್ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ (ದಕ್ಷಿಣ ಭಾರತ) ಕಾರ್ಯದರ್ಶಿ. 'ಬಲಿತ ದಲಿತರ ತುಳಿತ ನನ್ನ ಜನ ಅನಾಥ' ಎಂಬುದು ಇವರ ಕೃತಿ. ...
READ MORE