ವಿಶ್ವತೋಮುಖ

Author : ಕಿರಣ್ ಉಪಾಧ್ಯಾಯ

Pages 200

₹ 315.00




Year of Publication: 2022
Published by: ವಿಕಿ ಬುಕ್ಸ್‌

Synopsys

ವಿಶ್ವತೋಮುಖ ಕಿರಣ್ ಉಪಾಧ್ಯಾಯ ಅವರ ಕೃತಿಯಾಗಿದೆ. ಈ ಕೃತಿಯಲ್ಲಿ “ವಿಶ್ವ ವೈಶಿಷ್ಟ್ಯ' ಎಂಬ ಶೀರ್ಷಿಕೆಯಡಿಯಲ್ಲಿ 56 ಪುಟ ಪುಟ್ಟ ಲೇಖನಗಳಿವೆ. ಒಂದೆರಡು ಪುಟಗಳಲ್ಲಿ ರೇಖಿಸಿರುವ ಈ ಶಬ್ದಚಿತ್ರಗಳ ವಿಶಿಷ್ಟ ಶೈಲಿ ಡಾ. ಹಾ.ಮಾ.ನಾಯಕರ ಬರವಣಿಗೆಯನ್ನು ನೆನಪಿಸುವಂತಿದೆ. ಆಧುನಿಕ ಓದುಗರ ಅಭಿರುಚಿಗೆ ಹೊಂದುವಂತಿವೆ. ಆನಂತರ 'ನೆನಪಿನ ಅಂಗಳದಲ್ಲಿ' ಭಟ್ಟರು ವಿವಿಧ ಗಣ್ಯರ ಜೊತೆ ಇರುವ ಫೋಟೋ ಆಲ್ಬಮ್ ಇದೆ. ಬಳಿಕ ವಕ್ರತುಂಡೋಕ್ತಿ, ಭಟ್ಟರ ಸ್ಕಾಚ್, ಸಂಪಾದಕರ ಸತ್ಯಶೋಧನೆ- ಇವು ಶ್ರೀ ವಿಶ್ವೇಶ್ವರ ಭಟ್ಟರ ಬರವಣಿಗೆಗಳಿಂದ ಆಯ್ದ ಮುಕ್ತಾಫಲಗಳಾಗಿವೆ. ಇವು ಓದುಗನಿಗೆ ಕಚಗುಳಿ ಇಡುತ್ತವೆ; ಚಿಂತೆಗೆ ಹಚ್ಚುತ್ತವೆ. ಕೆಲವೆಡೆ ಸಾಲುಗಳ ನಡುವೆ ಅರ್ಥಗಳನ್ನು ಹುಡುಕಲು ಪ್ರಚೋದಿಸುತ್ತವೆ! ಲೇಖನಗಳಲ್ಲಿ ಬಳಸಿರುವ ಹೊಸ ಪದಪ್ರಯೋಗಗಳು (ಓದುಪೋತ, ಭಟ್ಟರ ಸ್ಕಾಚ್ ಇತ್ಯಾದಿ) ಆಹ್ಲಾದಕರವಾಗಿವೆ. ಕೃತಿಯ ಮುದ್ರಣ ವಿನ್ಯಾಸ ಸೊಗಸಾಗಿದೆ. ಇತ್ತೀಚೆಗೆ ಕನ್ನಡದಲ್ಲಿ ಪ್ರಕಟವಾದ ಸುಂದರ ಪುಸ್ತಕಗಳಲ್ಲಿ ಇದು ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಇಂಥದೊಂದು ರುಚಿಶುದ್ಧಿಯುಳ್ಳ ಪುಸ್ತಕವನ್ನು ಹೊರತರುತ್ತಿರುವುದು ಅಭಿನಂದನೀಯ. ಎಂದು ಜಗದ್ಗುರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು ಪುಸ್ತಕದ ಬಗ್ಗೆ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಕಿರಣ್ ಉಪಾಧ್ಯಾಯ

ಅಂಕಣಕಾರ, ಲೇಖಕ ಕಿರಣ್ ಉಪಾಧ್ಯಾಯ ಅವರು ವಿಕಿ ಬುಕ್ಸ್ ಮುಖ್ಯಸ್ಥರು. ಪ್ರಸ್ತುತ ಬಹ್ರೈನ್‌ ನಲ್ಲಿ ವಾಸವಿದ್ದಾರೆ. ಕೃತಿಗಳು: ವಿಶ್ವತೋಮುಖ ...

READ MORE

Related Books