ತಳಬೇರು

Author : ಬಸವರಾಜ ಎಸ್. ಕಲೆಗಾರ

Pages 116

₹ 95.00




Year of Publication: 2018
Published by: ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
Address: ಯಾದಗಿರಿ

Synopsys

‘ತಳಬೇರು’ ಕಲಾವಿದ, ಲೇಖಕ ಬಸವರಾಜ ಎಸ್. ಕಲೆಗಾರ ಅವರ ಲೇಖನಗಳ ಸಂಕಲನ.  ಚಿತ್ರಕಲೆ ಮತ್ತು ಸಾಹಿತ್ಯ ತಮ್ಮ ಬದುಕಿನ ಹಸಿರು ಉಸಿರು ಎನ್ನುವಂತೆ ಅವರು ಬದುಕುತ್ತಿರುವವರು ಎನ್ನುತ್ತಾರೆ ಡಾ. ಎಚ್. ಎಂ. ಮಹೇಶ್ವರಯ್ಯ.

ಚಿತ್ರಕಲೆ ಜೀವನ ಮತ್ತು ಸಾಮಾಜಿಕ ಮೌಲ್ಯಗಳನ್ನು ಚಿತ್ರಿಸುವಂತೆ, ಚಿತ್ತಾರದ ಆತಂರಿಕ ಸತ್ಯಾಂಶಗಳನ್ನು ಪ್ರಜ್ಞಾಪೂರ್ವಕವಾಗಿ ದಾಖಲಿಸುವ, ವಿಮರ್ಶಿಸುವ, ಸಹೃದಯತೆಗೆ ತಲುಪಿಸುವ, ವಿಭಿನ್ನ ಆಲೋಚನೆಗೆ ಹಚ್ಚುವ ತವಕದ ಬರಹ ಇವರದಾಗಿದೆ. ಪ್ರಸ್ತುತ ಕೃತಿಯಲ್ಲಿ ತಳ ಸಮುದಾಯದ ಬರಹಗಾರರ ಚಿಂತನಾರ್ಹ ಪರಿಚಯವಿದೆ. ಕಾವ್ಯದ ಸಾಲುಗಳ ತಿರುಳಿನಲ್ಲಿ ನೆಲದರಿವಿನ ಹದವಿದೆ. ವಿಮರ್ಶಾತ್ಮಕ ಗುಣಗಳ ಅಭಿವ್ಯಕ್ತಿ ಇದೆ. ದಲಿತ ಸಂವೇದನಾ ಅನುಭವಗಳನ್ನು ಪಸರಿಸಿದ್ದಲ್ಲದೇ, ಚಿತ್ರಕಲೆ ಕುರಿತಾದ ಹಲವು ಲೇಖನಗಳ ಸಮೂಹದಿಂದ ಕಲಾ ಜಗತ್ತಿನ ಅರಿವನ್ನು ಬಿತ್ತರಿಸುತ್ತದೆ. ಚಿತ್ರಕಾರನ ಅಂತರಂಗದೊಳಗಿನ ಕಾವ್ಯ ಉತ್ಪತ್ತಿಯನ್ನು ಸಹ ಬಿಚ್ಚಿಡುವ ಮೂಲಕ ಕೃತಿ ಅನಾವರಣಗೊಳ್ಳುತ್ತದೆ.

About the Author

ಬಸವರಾಜ ಎಸ್. ಕಲೆಗಾರ
(06 July 1984)

ಡಾ. ಬಸವರಾಜ ಎಸ್. ಕಲೆಗಾರ ಮೂಲತಃ ಯಾದಗಿರಿ ಜಿಲ್ಲೆಯವರು. ಕವಿ, ಲೇಖಕ, ಚಿತ್ರಕಲಾವಿದರು. ಎಂ.ವಿ.ಎ, ಎಂ.ಫಿಲ್, ಪಿಹೆಚ್.ಡಿ ಪದವೀಧರರು. ಹಂಪಿ ಕನ್ನಡ ವಿವಿಯಲ್ಲಿ ದೂರ ಶಿಕ್ಷಣ ನಿರ್ದೇಶನಾಯ ಮೂಲಕ ಪತ್ರಿಕೋದ್ಯಮ ಡಿಪ್ಲೋಮಾ ಪೂರ್ಣಗೊಳಿಸಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ 2015-16ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಸಂಶೋಧನೆ ಕೈಗೊಂಡಿದ್ದು, ಸಂಶೋಧನಾ ಅಧ್ಯಯನ ವಿಷಯ ‘ಸಗರನಾಡಿನ ಜನಪದ ಶಿಲ್ಪಿಗಳ ಕಲೆ ಮತ್ತು ಬದುಕು: ಒಂದು ಅಧ್ಯಯನ’ ಪ್ರಬಂಧ ಸಲ್ಲಿಸಿದ್ದಾರೆ. ಪ್ರಕಟಿತ ಕೃತಿಗಳು- ನೀ ಮರೆಯಾದ ಕ್ಷಣಗಳು, ಬೆಳಕು, ಸಂಗಣ್ಣ ಎಂ. ದೋರನಹಳ್ಳಿ ಕಲೆ ಮತ್ತು ಬದುಕು(ಸಂಶೋಧನೆ), ಕಲಾನ್ವೇಷಣೆ, ಚಿತ್ರಶಿಲೆಯಲ್ಲಿ ಬುದ್ಧ, ಗಡಿನಾಡ ಚಿತ್ರಶಾಲೆ, ದೃಶ್ಯ ...

READ MORE

Related Books