‘ಶಿವರಾಮ ಕಾರಂತರ ಲೇಖನಗಳು ಸಂಪುಟ- 1’ ಹಿರಿಯ ಸಾಹಿತಿ ಶಿವರಾಮ ಕಾರಂತರು ವ್ಯಕ್ತಿ ಚಿತ್ರಗಳು ಹಾಗೂ ವಿಮರ್ಶೆಗಳ ಸಂಕಲನ. ಲೇಖಕಿ ಬಿ. ಮಾಲಿನಿ ಮಲ್ಯ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.
ಅಸ್ತಮಿಸಿದ ಹಿರಿಯ, ಅಸ್ತಮಿಸಿದ ಇಬ್ಬರು ಹಿರಿಯರು, ಆದರ್ಶ ಜೀವಿ, ಆದ್ಯ ರಂಗಾಚಾರ್ಯರು, ಉತ್ತರ ಕನ್ನಡಕ್ಕೆ ಬೆಳೆಕು ತೋರಿದರು, ಎಪ್ಪತ್ತರ ಹೊಂಗೂಸು, ಐರೋಡಿ ಶಿವರಾಮಯ್ಯ, ಕಡಲಿನ ಕರೆಗೆ ಕಿವಿಗೊಟ್ಟ ಕೂಸು, ಕಣ್ಮರೆಯಾದ ಹಿರಿಯರು, ಕನ್ನಡಕ್ಕಾಗಿ ದುಡಿದ ಹಿರಿಯರು, ಕಾರವಾರದ ಪ್ರಥಮ ಮಿತ್ರರು, ಕೆಲವು ನೆನಪುಗಳು, ಗಣ್ಯ ಪತ್ರಿಕೋದ್ಯಮಿ, ಕವಿ, ಗೌರವಾನ್ವಿತ ವಿದ್ವಾಂಸರು, ಟಾಲ್ ಸ್ಟಾಯಿಯವರು, ತ್ಯಾಗವೂ ಒಂದು ಅಪರಾಧವಾದಾಗ, ನಿಡುಗಾಲದ ಸ್ನೇಹ, ಸಂಪರ್ಕ, ಪಡುಕೋಣೆ ರಮಾನಂದ ರಾಯರು, ಪ್ರತಿಭಾಶಾಲಿ ರಾಜಕಾರಣಿ, ಪ್ರಾಮಾಣಿಕ ಗೆಳೆತನಕ್ಕೆ ಸುಲಭದಲ್ಲಿ ಎಟುಕುವವರು, ಪ್ರೊ.ವಿ. ಎಂ. ಇನಾಂದಾರ್ - ಮನ್ನಣೆಗೆ ಪಾತ್ರರು, ಬದುಕಿನ ಬಳಿಕ ಹೂವಿನ ಹಾಸಿಗೆ, ಬೆಟಗೇರಿ ಕೃಷ್ಣ ಶರ್ಮರು ಸೇರಿದಂತೆ 45 ಲೇಖನಗಳ ಸಂಕಲನ ಇದಾಗಿದೆ.
ಶಿವರಾಮ ಕಾರಂತರ ಬದುಕು ಬರಹಗಳನ್ನು ಕನ್ನಡ ಓದುಗರಿಗೆ ಉಣಬಡಿಸಿ, ಕಾರಂತರ ವೈಚಾರಿಕ ನೆಲೆ, ಜೀವನ ಪ್ರೀತಿಯನ್ನು ಮತ್ತಷ್ಟು ಅರ್ಥೈಸಿಕೊಳ್ಳುವಲ್ಲಿ ಕೊಡುಗೆ ನೀಡಿದವರು ಕಾದಂಬರಿಗಾರ್ತಿ ಮಾಲಿನಿ ಮಲ್ಯ .ಮೂಲತಃ ಉಡುಪಿಯವರು. ಭಾರತೀಯ ಜೀವವಿಮಾನಿಗಮದ ನಿವೃತ್ತ ಉದ್ಯೋಗಿ. ಕೃತಿಗಳು: ನಾನು ಕಂಡ ಕಾರಂತರು (ವ್ಯಕ್ತಿಚಿತ್ರ), ಗೊಂದಲಪುರದ ನಿಂದಲರು (ಕಾದಂಬರಿ), ದಾಂಪತ್ಯ ಗಾಥೆ (ಕಿರುಕಾದಂಬರಿ), ಶಿವರಾಮಕಾರಂತರ ಕಿನ್ನರಲೋಕ (ಲೇಖನ ಸಂಗ್ರಹ), ಚಿಣ್ಣರ ಲೋಕದಲ್ಲಿ ಕಾರಂತರು ಭಾಗ 1 ಮತ್ತು 2, ಸಾಹಿತ್ಯೇತರ ಕಾರಂತರು, ಕಾರಂತ ಉವಾಚ, ’ಶಿವರಾಮ ಕಾರಂತರ ವಾಙ್ಮಯ ವೃತ್ತಾಂತ, ಶಿವರಾಮ ಕಾರಂತರ ಕೃತಿ ಕೈಪಿಡಿ, ಶಿವರಾಮ ಕಾರಂತರ ಲೇಖನಗಳು-8 ಸಂಪುಟಗಳು, ಪಕ್ಷಿಗಳ ಅದ್ಭುತ ...
READ MORE