ಚಿಂತನೆಯ ಜ್ಯೋತಿ

Author : ಖಾಜಾ ಹುಸೇನ್ ಆನೆಹೊಸೂರು

Pages 155

₹ 150.00




Year of Publication: 2021
Published by: ಬಸವ ಪ್ರಕಾಶನ
Address: ಮುಖ್ಯರಸ್ತೆ, ಸರಸ್ವತಿ ಗೋದಾಮು, ಸೂಪರ್ ಮಾರ್ಕೆಟ್, ಕಲಬುರಗಿ-585101

Synopsys

ಲೇಖಕ ಖಾಜಾಹುಸೇನ ಎಂ ಆನೆಹೊಸೂರು ಅವರು ಬರೆದ ಲೇಖನಗಳ ಕೃತಿ-‘ಚಿಂತನೆಯ ಜ್ಯೋತಿ’. ಮತದಾನ, ಹಣ, ಪುಸ್ತಕ, ಓದು, ನೀರು ಮತ್ತು ಊರು, ದುಡ್ಡು ಬೇಡ ಒಂದು ಕತ್ತೆ ಕೊಡಿಸಿ, ಮೂರರ ಮಹತ್ವ,ನಮ್ಮನ್ನು ನಾವು ಅರಿತುಕೊಳ್ಳುವ, ನಮ್ಮ ಊರಿಗೆ ನಾವೇ ನಾಯಕರು, ಗೆಳೆತನ, ಅರ್ಹತೆ, ಜವಾಬ್ದಾರಿ, ಧರ್ಮ ಮತ್ತು ದೇವರು ಸೇರಿದಂತೆ 49 ಚಿಂತನೆಗಳ ಲಹರಿಯ ಗುಚ್ಚವಿದು. ಈ ಲೇಖನಗಳ ಓದು ಅನುಭವ ವಿಸ್ತಾರ, ಜ್ಞಾನದ ಆಳ, ನಾಯಕತ್ವ ಗುಣ ಹೆಚ್ಚಿಸುವಲ್ಲಿ ಸಹಕಾರಿ, ಸಾಧನೆಗೆ ಪ್ರೇರಣೆಯಾಗಿಯೂ ಚಿಂತನೆಗಳಿವೆ.

About the Author

ಖಾಜಾ ಹುಸೇನ್ ಆನೆಹೊಸೂರು

ಲೇಖಕ ಖಾಜಾಹುಸೇನ್ ಅವರು ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಆನೆಹೊಸೂರುನಲ್ಲಿ 1968 ಜುಲೈ 01 ರಂದು ಜನಿಸಿದರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪತ್ರಿಕೋದ್ಯಮದಲ್ಲಿ ಪದವಿಯನ್ನು ಪಡೆದಿದ್ದಾರೆ.  ವೈಚಾರಿಕ ಲೇಖನ ಸೇರಿದಂತೆ ನಾಟಕ, ಕತೆ ಮುಂತಾದ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ‘ಚಿಂತನೆಯ ಚಿಲುಮೆ’ ಅವರ ವೈಚಾರಿಕ ಲೇಖನ ಪುಸ್ತಕ 2015ರಲ್ಲಿ ಪ್ರಕಟಣೆ ಕಂಡಿತು. ಹಸಿರೇ ಉಸಿರು, ಸಾಲ ಮುಗಿಯದ ಬಾಲ, ದ್ವೇಷ ಅಳಿಸಿ ದೇಶ ಉಳಿಸಿ, ಧರ್ಮಕ್ಕಿಂತ ದೇಶ ದೊಡ್ಡದು ಅವರ ಗಮನಾರ್ಹ ಕೃತಿಗಳು. ಅವರ ಹಲವಾರು ಕಥೆಗಳು ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟಣೆ ...

READ MORE

Related Books