‘ಬಯಲ ಬೆಳಕು’ ಲೇಖಕ ಬಸವರಾಜ ಸಬರದ ಅವರ ವೈಚಾರಿಕ ಲೇಖನಗಳ ಸಂಕಲನ. ಈ ಕೃತಿಗೆ ಬರಗೂರು ರಾಮಚಂದ್ರಪ್ಪ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಗೆಳೆಯರಾದ ಡಾ. ಬಸವರಾಜ ಸಬರದ ಅವರ ಬಯಲ ಬೆಳಕು ಲೇಖನಗಳ ಸಂಕಲನ ಸಮಕಾಲೀನ ಪ್ರಜ್ಞೆಯ ಒಂದು ವೈಚಾರಿಕ ಕೃತಿಯಾಗಿ ಮುಖ್ಯವಾಗುತ್ತದೆ. ಅನೇಕ ವರ್ಷಗಳ ಅಧ್ಯಯನಾತ್ಮಕ ಚಿಂತನೆ ಮತ್ತು ಸಾಮಾಜಿಕ ಕ್ರಿಯಾ ಸಂಚಲನೆಗಳು ಒಗ್ಗೂಡಿದ ವಿವಿಧ ಬರಹಗಳ ಮೂಲಕ ಬಸವರಾಜ ಸಬರದ ನಮ್ಮೆದುರು ಬೆಳಕಿನ ಬಯಲಾಗಿ ನಿಂತಿದ್ದಾರೆ. ಈ ಸಂಕಲನದ ಬರಹಗಳೇ ತಮ್ಮ ಪರಿಧಿಯ ಮೂಲಕ ಲೇಖಕರ ವೈಚಾರಿಕ ನೀತಿ ಮತ್ತು ಅಭಿವ್ಯಕ್ತಿ ರೀತಿಗಳನ್ನು ಒಟ್ಟಿಗೇ ಬೆಳಕಿಗೆ ತರುತ್ತವೆ ಎಂದಿದ್ದಾರೆ. ಜೊತೆಗೆ ಬಸವರಾಜ ಸಬರದ ಅವರ ಈ ಕೃತಿಯಲ್ಲಿನ ಎಲ್ಲ ಲೇಖನಗಳಲ್ಲೂ ಜಾತ್ಯಾತೀತ, ಜನಪದ ನಿಲುವುಗಳ ಒತ್ತಾಸೆಯಿದೆ. ಸಮಕಾಲೀನ ಅನುಸಂಧಾನದ ಫಲಿತವಿದೆ. ಬಸವರಾಜ ಸಬರದವರ ಆಶಯಗಳಲ್ಲಿ ಅಸ್ಪಷ್ಟತೆಯಿಲ್ಲ, ದೃಷ್ಟಿಕೋನದಲ್ಲಿ ಸಂಕುಚಿತತೆ ಇಲ್ಲ. ಚಳವಳಿಯ ಬಿರುಸು, ವಿದ್ವತ್ತಿನ ಬೆಳಕು ಒಂದಾಗಿ ಹುಟ್ಟಿದ ಬೆಳಕಿಗೆ ಇಲ್ಲಿ ಬರವಿಲ್ಲ. ಇದೇ ಬಸವರಾಜ ಸಬರದವರ ಬರಹಗಳ ವಿಶಿಷ್ಟತೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ನನ್ನವರ ಹಾಡು, ಹೋರಾಟ, ...
READ MORE