ಡಾ. ಎಚ್. ಎಸ್. ಸತ್ಯನಾರಾಯಣ ಅವರ ಅಂಕಣಗಳ ಸಂಕಲನ ನುಡಿಚಿತ್ರ. ಕೃತಿಯಲ್ಲಿ ಲೇಖಕ ಡಾ. ಎಚ್. ಎಸ್. ಸತ್ಯನಾರಾಯಣ ಅವರೇ ಪ್ರಸ್ತಾವನೆಯನ್ನು ಬರೆದಿದ್ದು,‘ಆಧುನಿಕ ಕನ್ನಡ ಸಾಹಿತ್ಯವನ್ನು ಕಟ್ಟಿ ಬೆಳೆಸಿದ ಮೂರು ತಲೆಮಾರಿನ ಬರಹಗಾರರನ್ನು ಕುರಿತ ನುಡಿಚಿತ್ರವಿದು. ಅವರ ಬದುಕುವ ಬರಹಗಳ ನ್ನು ಕುರಿತ ಸ್ಥೂಲ ನೋಟವೊಂದನ್ನು ಕಾಣಿಸುವ ಪ್ರಯತ್ನ ಇಲ್ಲಿದೆ. ಪಿ. ಲಂಕೇಶರನ್ನು ಕುರಿತ ಲೇಖನ ತುಸು ವಿಸ್ತಾರವಾಗಿ ಬಂದಿದೆ. ನಾನು ಬರೆದಿದ್ದ ಪುಟ್ಟ ಬರಹವೊಂದನ್ನು ಗಮನಿಸಿದ ಅನೇಕ ಗೆಳೆಯರು ಇನ್ನಷ್ಟು ವಿವರವಾಗಿ ಬರೆಯಿರೆಂದು ಆಗ್ರಹಪೂರ್ವಕವಾಗಿ ಒತ್ತಾಯಿಸಿದ ಕಾರಣ ನಾನು ಮೊದಲು ಬರೆದ ಟಿಪ್ಪಣಿಯನ್ನು ವಿಸ್ತರಿಸಿ ಇಲ್ಲಿ ಸೇರಿಸಿರುವೆ. ಲಂಕೇಶರನ್ನು ಅನೇಕ ಸಲ ಮಾತನಾಡಿಸಿದ್ದೆನಾದರೂ ಒಂದು ಬಗೆಯ ವಿಚಿತ್ರ ಭಯದ ಅಂತರ ಕಾಪಾಡಿಕೊಂಡಿದ್ದೆ. ಲಂಕೇಶರ ಬರಹದ ಪ್ರಭಾವದಿಂದ ನಮ್ಮ ತಲೆಮಾರಿನ ಓದುಗರು ತಪ್ಪಿಸಿಕೊಳ್ಳುವುದು ಅಸಾಧ್ಯವೆಂಬಂತಹ ಪ್ರತಿಭೆ ಲಂಕೇಶರದು. ಅವರ ಬಗ್ಗೆ ಬರೆಯುವಾಗಲೂ ಅವರನ್ನು ಕಂಡಾಗಿನ ಅಳುಕೇ ಕಾಡುತ್ತಿತ್ತು. ಈ ಲೇಖನ ಅವರ ಸಾಹಿತ್ಯಕ ವ್ಯಕ್ತಿತ್ವವನ್ನು ಒರಟಾಗಿ ರೇಖಿಸಿದೆಯಷ್ಟೇ’ ಎಂದಿದ್ದಾರೆ.
ಕನ್ನಡ ಪ್ರಾಧ್ಯಾಪಕರು ಹಾಗೂ ಹೊಸ ತಲೆಮಾರಿನ ವಿಮರ್ಶಕರೂ ಆದ ಎಚ್.ಎಸ್. ಸತ್ಯನಾರಾಯಣ ಅವರು ಮೂಲತಃ ಮಲೆನಾಡಿನವರು. ಕುವೆಂಪು ಅವರ ಕುಪ್ಪಳಿಗೆ ಸಮೀಪವೇ ಇರುವ, ಚಿಕ್ಕಮಗಳೂರಿನ ಹೊಕ್ಕಳಿಕೆಯಲ್ಲಿ ಜನಿಸಿದ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿತರು. ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಸತ್ಯನಾರಾಯಣ ಅವರು ಅನೇಕ ಸಾಹಿತಿಗಳೊಂದಿಗೆ ಒಡನಾಡಿದ್ದಾರೆ. ಆ ಬಗ್ಗೆ ಅತ್ಯಂತ ಆಕರ್ಷಕವಾಗಿ ಮಾತನಾಡುವ ಅವರು ಅಷ್ಟೇ ಆಕರ್ಷಕವಾಗಿ ಬರೆಯುತ್ತಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ‘ಕನ್ನಡ ಸಾಹಿತ್ಯ ಸಂಗಾತಿ’, ‘ಸಾಹಿತ್ಯ ವಿಮರ್ಶೆ-2016’, ಜೊತೆಗೆ ಡುಂಡಿರಾಜರ ಸಾಹಿತ್ಯ ವಿಮರ್ಶೆ ಕುರಿತ ‘ಡುಂಡಿಮಲ್ಲಿಗೆ’, ದ್ವಿತೀಯ ಪಿ.ಯು.ಸಿ.ಯ ಕನ್ನಡ ಭಾಷಾ ಪಠ್ಯ ‘ಸಾಹಿತ್ಯ ...
READ MORE