ಭಾರತದ ಮಹಾನಗರಗಳ ಪೈಕಿ ಮುಂಬೈಗೆ ವಿಶಿಷ್ಟ ಸ್ಥಾನವಿದೆ. ಫೋರ್ಚುಗೀಸರ ಹಾಗೂ ಬ್ರಿಟಿಷರ ಕಾಲದಲ್ಲೇ ಮುಂಬೈಯನ್ನು ಭಾರತದ ಹೆಬ್ಬಾಗಿಲು ಎಂದೇ ಕರೆಯಲಾಗುತ್ತಿತ್ತು. ಕರ್ನಾಟಕದ ರಾಜಧಾನಿ ಬೆಂಗಳೂರು ಬಿಟ್ಟರೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ವಾಸಿಸುವದು ಮುಂಬೈನಲ್ಲಿ. ಹೀಗಾಗಿ, ಮುಂಬೈ ಎಂದರೆ ಕನ್ನಡಿಗರ ಎರಡನೇ ತವರೂರು. ಆದರೂ, ಕನ್ನಡಿಗರು ಇಲ್ಲಿ ಪಟ್ಟಿರುವ ಪಾಡನ್ನು ಲೇಖಕರು ಹಾಡಾಗಿಸಿದ್ದೇ ಈ ಕೃತಿ-ಮುಂಬೈ ಕನ್ನಡ ಜಗತ್ತು. ಲೇಖಕ ಜಿ.ಎನ್. ಉಪಾಧ್ಯ ಅವರು ಮುಂಬೈಯಲ್ಲಿಯ ಕನ್ನಡ ಸಂಘ-ಸಂಸ್ಥೆಗಳು, ಪ್ರತಿಭೆಗಳು, ಅವರ ಸಾಧನೆಗಳು, ಕನ್ನಡ ಸಾಂಸ್ಕೃತಿಕ ಅವಲೋಕನ. ಮುಂಬೈ ಯಲ್ಲಿ ಮೊಗವೀರ ಪತ್ರಿಕೆಯ ಅನನ್ಯತೆ, ಮುಂಬೈಯಲ್ಲಿ ಚಿಣ್ಣರಬಿಂಬದ ಕನ್ನಡ ಕ್ರಾಂತಿ ಹೀಗೆ ಮುಂಬೈಯಲ್ಲಿ ಕನ್ನಡಮಯ ವಾತಾವರಣದ ಸಮಗ್ರ ಪರಿಚಯವನ್ನುಈ ಕೃತಿ ಮಾಡಿಕೊಡುತ್ತದೆ.
ಜಿ.ಎನ್. ಉಪಾಧ್ಯ ಮೂಲತಃ ಉಡುಪಿ ತಾಲೂಕಿನ ಕೋಟದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ವರದರಾಜ ಆದ್ಯ ಬಂಗಾರದ ಪದಕ ಹಾಗೂ ಮೊದಲ ರ್‍ಯಾಂಕ್ನೊಂದಿಗೆ ಗಳಿಸಿಕೊಂಡರು. ಮಹಾರಾಷ್ಟ್ರದ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಎಂಬ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಸಾಂಸ್ಕೃತಿಕ ಅಧ್ಯಯನ, ವಿಮರ್ಶೆ, ಭಾಷಾ ವಿಜ್ಞಾನ ಮತ್ತು ಪತ್ರಿಕೋದ್ಯಮ ಅವರ ಆಸಕ್ತಿಯ ಕ್ಷೇತ್ರಗಳು. 'ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಅವರು ಕೆಲವು ವರ್ಷ ಉಪಸಂಪಾದಕರಾಗಿ ಕೆಲಸ ಮಾಡಿದ್ದರು. ಸೊಲ್ಲಾಪುರ ಒಂದು ಸಾಂಸ್ಕೃತಿಕ ಅಧ್ಯಯನ, ಮಹಾರಾಷ್ಟ್ರದ ಕನ್ನಡ ಶಾಸನಗಳ ...
READ MORE