ಸಂಪಿಗೆ ಮರ-ಇದು ಲೇಖಕಿ ಡಿ. ಮಝುಲಾ ಅವರ ಕವನ ಸಂಕಲನ. ಈ ಕೃತಿಯ ಬಗ್ಗೆ ಲೇಖಕ ಶಶಿಧರ ಹಾಲಾಡಿ ಬರೆಯುತ್ತಾ ‘ಸಾಹಿತ್ಯ ಹೇಗೆ ಹುಟ್ಟುತ್ತದೆ ಎಂಬ ಎಟರ್ನಲ್ ಪ್ರಶ್ನೆ ಒಂದಿದೆ. ಇದಕ್ಕೆ ನಾನಾ ವಲಯಗಳಲ್ಲಿ ನಾನಾ ರೀತಿಯ ಉತ್ತರಗಳು ಮೂಡಿಬಂದಿವೆ. ಮಂಜುಳಾ ಅವರ ಇಲ್ಲಿಯ ಬರಹಗಳನ್ನು ಕಂಡಾಗ ಅದೇಕೋ ಈ ಪ್ರಶ್ನೆ ನೆನಪಾಯಿತು. ಇಲ್ಲೇ ಎಲ್ಲೋ ಪಕ್ಕದಲ್ಲಿ ಅಥವಾ ಬೆಳಿಗ್ಗೆ ಬಸ್‍ನಲ್ಲಿ ಬರುವಾಗ ನೋಡಿದ ಘಟನೆಯನ್ನು ಅನಾಮತ್ತಾಗಿ ಆದರೆ ತುಸು ಆಪ್ಯಾಯಮನವಾಗಿ ಎತ್ತಿಕೊಳ್ಳುವ ಲೇಖಕಿ, ಆ ಜಾಡನ್ನೇ ಹಿಡಿದು ಹೊಸತನವನ್ನು ತನ್ನ ಬರಹದಲ್ಲಿ ಅಂತರ್ಗತಗೊಳಿಸಲು ಯತ್ನಿಸುವ ರೀತಿಯನ್ನು ಕಂಡರೆ ಅಚ್ಚರಿ ಎನಿಸುತ್ತದೆ, ಸಂತಸವೂ ಮೂಡುತ್ತದೆ. ಬೆಳಗಿನ ದಿಚರಿಯೊಂದರ ಸಾಲಿನಿಂದ ಆರಂಭವಾಗುವ ಲೇಖನವು, ಬೆಳೆಯುತ್ತಾ ಹೋದಂತೆಲ್ಲಾ ಮಹತ್ವಾಕಾಂಕ್ಷಿಯೂ ಎನಿಸುತ್ತದೆ. ಇಲ್ಲಿನ ಬರಹಗಳಲ್ಲಿ ಪ್ರೊತಿಮಾ ಬೇಡಿ ನೃತ್ಯ ಮಾಡುತ್ತಾರೆ, ರಾನು ಮಂಡಲ್ ಹಾಡುತ್ತಾರೆ, ಪೀಲೆ ಎಂಬ ಮಹಾನ್ ಫುಟ್‍ಬಾಲ್ ಆಟಗಾರ ತುಳಿದ ಚೆಂಡು ಹಾರಿ ಬರುತ್ತದೆ. ಜತೆಯಲ್ಲೇ ಹಳ್ಳಿಯ ಮಹಿಳೆಯರು ಹಾಡು ಹಾಡುತ್ತಾರೆ, ಅದಾವುದೋ ಸಂಸಾರ ತಾಪತ್ರಯದ ಮಹಿಳೆಯ ಒಳತೋಟಿ ಹರಿದು ಬರುತ್ತದೆ, ಪಕ್ಕದೂರಿನ ಸ್ವಸಹಾಯ ಸಂಘದ ಸಹಾಯದಿಂದ ತನ್ನ ಕಾಲ ಮೇಲೆ ತಾನು ನಿಂತ ಸ್ವಾಭಿಮಾನಿ ಮಹಿಳೆಯು ಯಶೋಗಾಥೆಯೂ ಬರುತ್ತದೆ ಎಂದು ಪ್ರಶಂಸಿಸಿದ್ದಾರೆ.
ಲೇಖಕಿ ಮಂಜುಳ ಡಿ. ಅವರು ಉದಯವಾಣಿ ಪತ್ರಿಕೆಯ ಅಂಕಣಕಾರರು. ಈ ಅಂಕಣಗಳ ಬರಹಗಳನ್ನು ಸಂಗ್ರಹಿಸಿ ಅವರು ನಿನಾದವೊಂದು ಎಂಬ ಕೃತಿ ರಚಿಸಿದ್ದಾರೆ. ...
READ MOREನಿಜಕ್ಕೂ ಸಮ್ಮತಿಯ ಎರಕಗೊಂಡು ಅಂತರಾಳನ್ನು ಇನ್ನಿಲ್ಲದಂತೆ ಕಲಕಿ ನಿಂತಾಗ- ಒಬ್ಬರಲ್ಲಿ ನಮ್ಮ ಜಗತ್ತನ್ನು ಕಂಡುಕೊಳ್ಳುತ್ತೇವೆ ಎನ್ನುವುದು ಮನದಟ್ಟಾದಾಗ ವಯಸ್ಸು ಅಷ್ಟು ದೊಡ್ಡ ವಿಷಯವಾ..? ಮೂಲ ವಾಲ್ಮೀಕಿ ವಿರಚಿತ ರಾಮಾಯಣದ ಪ್ರಕಾರ ರಾಮ ಸೀತೆಗಿಂತ ಆರು ವರ್ಷ ಚಿಕ್ಕವನು, ರಾಧೆ ಹತ್ತು ವರ್ಷ ದೊಡ್ಡವಳು, ಪಹರೇಧಾರಿ ಪಿಯಾ ಕೀ ಸೀರಿಯಲ್ ನಲ್ಲಿ ಹದಿನಾಲ್ಕರ ಹುಡುಗ ಇಪ್ಪತ್ತೆಂಟರ ಹುಡುಗಿಯನ್ನು ಮದುವೆಯಾಗುವ ಕಥಾಹಂದರವಿರುವ ಸೀರಿಯಲ್.... ಈ ಸೀರಿಯಲ್ ನೋಡಿ ಬಾಲ್ಯ ವಿವಾಹ ಇತ್ಯಾದಿಯಾಗಿ ಬೊಬ್ಬೆ ಹೊಡೆದ ದೇಶದಲ್ಲಿ ನಿಜಕ್ಕೂ ಮೂವತ್ತು- ನಲವತ್ತು ವಯಸ್ಸಿನ ಅಂತರದ ಚಿಕ್ಕ ಆಡುವ ಹುಡುಗಿಯರನ್ನು ಮದುವೆ ಮಾಡಿಕೊಡುವುದನ್ನು ಘಟನೆಯಾಗಿಸುವುದಿಲ್ಲ. ಆಶಾ ಸತ್ಯದ ಬುನಾದಿಗಾಗಿ ಆಶಿಸಿ ನಿಜ ಹೇಳಿದ್ದಕ್ಕೆ ಇಲ್ಲದ್ದನ್ನ ಭಾವಿಸಿಕೊಂಡು ಸಂಬಂಧ ಕಡಿದುಕೊಂಡ ಇಂತಹವರು ಹೆಜ್ಜೆ-ಹೆಜ್ಜೆಗೂ ಸಿಗುತ್ತಾರೆ. ಅಸಲಿಗೆ ನಮ್ಮ ದೇಶದಲ್ಲಿ ಮದುವೆ ಮುರಿದು ಬೀಳಲು ಕಾರಣಗಳೇ ಬೇಕಿಲ್ಲ - ಮದುವೆ ಊಟದಲ್ಲಿ ಸಾಂಬರು ಸರಿಯಿಲ್ಲ- ಗಂಡಿನ ಕಡೆಯವರಿಗೆ ಸರಿಯಾಗಿ ಟ್ರೀಟ್ ಮಾಡಿಲ್ಲ- ಹುಡುಗಿಗೆ ಸ್ನೆಹಿತೆಯರು ಹೆಚ್ಚು!! ಎಂಥ ಕ್ಷುಲ್ಲಕ ಕಾರಣವಾದರೂ ಆದೀತು. ಇಂಥ ಮದುವೆಗಳ ಬುನಾದಿ ನಂಬಿಕೆ - ವಿಶ್ವಾಸ ಆಗಿರುವುದಾದರೂ ಹೇಗೆ ಸಾಧ್ಯ??