ವೃತ್ತಿಯಲ್ಲಿ ವೈದ್ಯರಾದರೂ, ಪ್ರವೃತ್ತಿಯಲ್ಲಿ ಲೇಖಕಿಯಾಗಿರುವ ಡಾ.ಕೆ.ಎಸ್.ಪವಿತ್ರ ಅವರ ಲೇಖನಗಳ ಸಂಕಲನ ‘ವಿಹಾರಿ-ಮನೋಹಾರಿ’. ಈ ಕೃತಿಯ ಬೆನ್ನುಡಿಯಲ್ಲಿ” ಸಂಗೀತ-ಸಾಹಿತ್ಯಾದಿ ಲಲಿತಕಲೆಗಳಿಗೂ ಮನಸ್ಸಿಗೂ ಅವಿನಾಭಾವ ಸಂಬಂಧವಿದೆ. ಹಾಗಾಗಿಯೇ ಮನುಷ್ಯನಿಗೆ ಲಲಿತಕಲೆಗಳ ನಿರಂತರ ಆಕರ್ಷಣೆ, ಹೊಸ ಹೊಸ ಹೊಳಹುಗಳು! ಈ ಹಿನ್ನೆಲೆಯಲ್ಲಿ ನಾವು ಓದಿದ ಪುಸ್ತಕಗಳು, ನೋಡಿರುವ ಕಲಾವಿದರು ಸ್ವಾರಸ್ಯಕಾರಿ ವ್ಯಕ್ತಿತ್ವದ ವೈದ್ಯರು, ನೋಡಿದ ಸ್ಥಳಗಳು ಎಲ್ಲವೂ ಹಲವು ಚಿಂತನೆಗಳನ್ನು ಪ್ರಚೋದಿಸುತ್ತದೆ.ಇಂಥ ಅನುಭವಗಳು ಎಲ್ಲರಿಗೂ ಸಾಧ್ಯವಿರಬಹುದಾದರೂ, ಅವುಗಳನ್ನು ಹೊಸ ದೃಷ್ಟಿಕೋನಗಳಿಂದ, ವಿಭಿನ್ನವಾಗಿ, ವೈಜ್ಞಾನಿಕವಾಗಿ ನೋಡುವುದು ಉಪಯುಕ್ತ. ಲಲಿತಕಲೆಗಳು ಅಂತಿಮವಾಗಿ ನಮಗೆ ಕಲಿಸುವುದು ಜೀವನ ಕಲೆಯನ್ನೆ. ಹಾಗಾಗಿ 'ವೈಯಕ್ತಿಕ' ಅನುಭವಗಳು ಎನ್ನಬಹುದಾದ ಪರೀಕ್ಷೆ, ಹಾಸ್ಟೆಲ್ ಜೀವನ, ಅಪಘಾತ ಇವುಗಳನ್ನೂ ಸಾಹಿತ್ಯ ರಚನೆಯ ಮೂಲಕ ಮರು ಪರಿಶೀಲಿಸುವ, ಎಲ್ಲರೊಡನೆ ಹಂಚಿಕೊಂಡು, ಓದುಗರ ಅನುಭವಗಳನ್ನೂ ನೆನಪಿಸುವ ಪ್ರಯತ್ನ. ಕೆಲವು ಲೇಖನಗಳಲ್ಲಿದೆ. ಇಲ್ಲಿರುವ ಲೇಖನಗಳು ವಿಜ್ಞಾನ ಸಾಹಿತ್ಯವೆಂಬ ಶೀರ್ಷಿಕೆಯಡಿ ಬಾರದೆ, ಅತ್ತ ಲಲಿತ ಪ್ರಬಂಧಗಳೆಂಬ - ಸಾಹಿತ್ಯ ಪ್ರಕಾರವನ್ನೂ ಸೇರದೆ, ಸಾಮಾಜಿಕ ಸ್ವಾಸ್ಥ್ಯವನ್ನು, ಜನ ಹಿತವನ್ನು ಗುರಿಯಾಗಿಟ್ಟುಕೊಂಡ ಮನಸ್ಸಿನ ಲಹರಿಗಳಷ್ಟೇ ಎಂದು ಭಾವಿಸುವುದು ಸೂಕ್ತ. ಹಾಗಾಗಿಯೇ ಇವು 'ಸುಲಲಿತ ಪ್ರಬಂಧಗಳು!’ “ಎಂದಿವೆ.
ವೈದ್ಯಕೀಯ ಸಾಹಿತ್ಯ ರಂಗ, ಭರತನಾಟ್ಯ ಕಲಾವಿದೆಯಾಗಿ ಹೆಸರು ಗಳಿಸಿರುವ ಪವಿತ್ರಾ ಕೆ.ಎಸ್ ಅವರು ಮೂಲತಃ ಶಿವಮೊಗ್ಗದವರು. ಆರೋಗ್ಯ ಸಲಹೆಗಳಿಂದ ಉನ್ನತ ಸ್ಥಾನ ಗಳಿಸಿರುವ ಅವರು ವಿಚಾರ ಸಾಹಿತ್ಯದಲ್ಲೂ ಆಸಕ್ತರು. 11ನೇ ವಯಸ್ಸಿನಲ್ಲಿ ಅಖಿಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಉಪಾಧ್ಯಕ್ಷೆಯಾಗಿದ್ದ ಕೀರ್ತಿ ಅವರದು. ’ಮನ-ಮನನ, ನೀವು ಮತ್ತು ನಿಮ್ಮ ಸಂಬಂಧಗಳು, ಸಿ.ಜಿ.ಯೂಂಗ್, ಓ ಸಖಿ ನೀನು ಸಖಿಯೆ, ಪರಿಪೂರ್ಣ ವ್ಯಕ್ತಿತ್ವ ಇಂದಿನ ಮಹಿಳೆಯ ಮಾನಸಿಕ ಸವಾಲುಗಳು, ಗೀಳು ಖಾಯಿಲೆ, ಮಗು-ಮನಸು’ ಅವರ ಕೃತಿಗಳು. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಬಹುಮಾನ, ಕಸಾಪ ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿ ...
READ MORE