ಯಾವುದು ಚರಿತ್ರೆ ? ಇತಿಹಾಸ ಬರಹದ ಕೃತಿಯ ಮೂಲ ತೆಲುಗು ಭಾಷೆಯ ಹಾಗೂ ಎಂ.ವಿ.ಆರ್. ಶಾಸ್ತ್ರಿ ರಚಿಸಿದ ಕೃತಿಯನ್ನು ಲೇಖಕ ಬಾಬು ಕೃಷ್ಣಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ನಾವೆಲ್ಲ ಇದುವರೆಗೆ ತಿಳಿದುಕೊಂಡು ಬಂದಿರುವ ಇತಿಹಾಸ ಜ್ಞಾನವನ್ನು ಹೊಡೆದುರುಳಿಸುತ್ತ ಕಾಲಗರ್ಭದಲ್ಲಿ ಅಡಗಿರುವ ನಮ್ಮ ದೇಶದ ಇತಿಹಾಸವನ್ನು ಪುರಾವೆ ಸಮೇತ ಕೆದಕುವ ಅನೇಕ ಸಂಗತಿಗಳು ಈ ಸಂಶೋಧನಾ ಗ್ರಂಥದಲ್ಲಿವೆ. ಕೆಲವು ಪ್ರಮುಖ ವ್ಯಕ್ತಿತ್ವಗಳನ್ನು, ಪ್ರಮುಖ ಘಟನೆಗಳನ್ನು ಕುರಿತು ಬಹುಕಾಲದಿಂದ ವಿಚಾರವಂತರ ವರ್ಗದಲ್ಲಿ ಮನೆಮಾಡಿರುವ ಕೆಲವೇ ಕೆಲವಾದರೂ ತಪ್ಪು ಅಭಿಪ್ರಾಯಗಳನ್ನು ಅಳಿಸಿಹಾಕುವುದೇ ಈ ಬರವಣಿಗೆಯ ಉದ್ದೇಶ. ಇದನ್ನು ಓದಿದ ನಂತರ ನಮ್ಮ ದೇಶವನ್ನು ಕುರಿತು, ನಮ್ಮ ಪೂರ್ವಿಕರನ್ನು ಕುರಿತು, ರಾಷ್ಟ್ರೀಯ ವಾರಸುದಾರಿಕೆಯನ್ನು ಕುರಿತು ಒಂದಿಷ್ಟು ಅಭಿಮಾನ… ವಾಸ್ತವ ಚರಿತ್ರೆಯನ್ನು ಭ್ರಷ್ಟಗೊಳಿಸಿದ ಕುರುಡು, ಕಿವುಡು ಬುದ್ಧಿಜೀವಿ ವರ್ಗಗಳ ಬಗ್ಗೆ ಒಂದಿಷ್ಟು ಕ್ರೋಧ ಮತ್ತು ಇಂತಹ ಉಜ್ವಲ ಚರಿತ್ರೆಯುಳ್ಳ ರಾಷ್ಟ್ರಕ್ಕೆ ಉಜ್ವಲ ಭವಿಷ್ಯ ಇದೆಯೆಂಬ ನಂಬಿಕೆ ಓದುಗರಿಗೆ ಉಂಟಾಗುವುದೆಂದು ಲೇಖಕರಿಗೆ ಭರವಸೆ ಎಂದು ಪುಸ್ತಕದ ಕುರಿತು ಇಲ್ಲಿ ವಿವರಿಸಲಾಗಿದೆ.
ಸಾಹಿತ್ಯ, ಪತ್ರಿಕೋದ್ಯಮ ಎರಡು ಕ್ಷೇತ್ರಗಳಲ್ಲೂ ಚಿರಪರಿಚಿತರಾದ ಬಾಬು ಕೃಷ್ಣಮೂರ್ತಿ ಹುಟ್ಟಿದ್ದು ಬೆಂಗಳೂರು. ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಅತೀವ ಆಸಕ್ತಿ. ಅವರ ಸಂಪಾದಕತ್ವದಲ್ಲಿ ಬಾಲಮಂಗಳ (ಪಾಕ್ಷಿಕ), ಬಾಲಮಂಗಳ ಚಿತ್ರಕಥಾ (ಮಕ್ಕಳ ವ್ಯಂಗ್ಯ ಚಿತ್ರ ಪಾಕ್ಷಿಕ), ಗಿಳಿವಿಂಡು (ಶಿಶು ಪಾಕ್ಷಿಕ ಪತ್ರಿಕೆ) ಪ್ರಕಟವಾಗಿವೆ. ಇವರು ರಚಿಸಿದ ಸ್ವಾತಂತ್ರ್ಯವೀರ ಚಂದ್ರಶೇಖರ ಆಜಾದ್ ಕುರಿತು ಆರು ವರ್ಷ ಕಾಲ ಸಂಶೋಧನೆ, ಸ್ಥಳವೀಕ್ಷಣೆ ನಡೆಸಿ ರಚಿಸಿದ ಕೃತಿ ‘ಅಜೇಯ’. ಅವರ ಪ್ರಮುಖ ಕೃತಿಗಳು - ಅಜೇಯ (1974), ಸಿಡಿಮದ್ದು ನೆತ್ತರು ನೇಣುಗಂಬ (1984), ಅದಮ್ಯ (1984), ರುಧಿರಾಭಿಷೇಕ (2005), ಡಾ. ಸಿ.ಜಿ. ಶಾಸ್ತಿಒಂದು ಯಶೋಗಾಥೆ (2007), 1857-ಭಾರತದ ಸ್ವಾತಂತ್ರ್ಯ ಸಂಗ್ರಾಮ (2007), ...
READ MORE