‘ನವ್ಯದ ನಾಲ್ಕು ನಾಯಕರು’ ಗೌರೀಶ ಕಾಯ್ಕಿಣಿ ಅವರ ಲೇಖನ ಸಂಕಲನ. ಕೃತಿಯ ಕುರಿತು ತಿಳಿಸುತ್ತಾ ಕನ್ನಡ ಸಾಹಿತಿಗಲ ಮೇಲೆ, ಅಷ್ಟೇ ಏಕೆ ಜಗತ್ತಿನ ಬೇರೆ ಬೇರೆ ಭಾಷೆಗಳ ಸಾಹಿತಿಗಳ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ಪ್ರಭಾವದ ಮುದ್ರೆ ಒತ್ತಿದ ನಮ್ಮ ಪಾಶ್ಚಾತ್ಯ ನವ್ಯಕಾಲದ ನಾಲ್ಕು ಜನ ನಾಯಕರ ಕುರಿತು ನಾನು ಬರೆದ ಪ್ರಾಸಂಗಿಕ ಲೇಖನಗಳನ್ನು ಸೇರಿಸಿ ಒಂದು ಕಿರುಹೊತ್ತಿಗೆಯಾಗಿ ನನ್ನ ಎಳೆಯ ಕವಿ-ಪ್ರಕಾಶಕ ಮಿತ್ರ ವಿಷ್ಣುನಾಯ್ಕರು ಪ್ರಕಟಿಸುತ್ತಿದ್ದಾರೆ. ಕನ್ನಡದಲ್ಲಿ ಕವಿ ಟಿ.ಎಸ್. ಇಲಿಯಟ್ ನ ಬಗ್ಗೆ ಬಂದ ಲೇಖನಗಳು ಬಹಳಷ್ಟಿವೆ, ಆದರೆ ಈ ಪುಸ್ತಕದಲ್ಲಿ ಸೇರಿದ ಇನ್ನುಳಿದ ಮೂವರ ಬಗ್ಗೆ ವಿಶೇಷ ಪರಿಚಯಗಳು ಪ್ರಕಟವಾದಂತಿಲ್ಲ. ಇಲ್ಲಿಯ ಲೇಖನಗಳು ಆ ಕೊರತೆಯನ್ನು ನೀಗಿಸಿದರೆ ಇದು ಪ್ರಕಟವಾದುದಕ್ಕೆ ಸಾರ್ಥಕ ಎಂದಿದ್ದಾರೆ ಗೌರೀಶ ಕಾಯ್ಕಿಣಿ. ಈ ಕೃತಿಯಲ್ಲಿ ಲೇಖಕನ ಎರಡು ಮಾತು, ಪ್ರಕಾಶಕರ ನುಡಿ ಸೇರಿದಂತೆ ಎಝ್ರಾ ಪೌಂಡ, ಡಬ್ಲ್ಯೂ.ಬಿ.ಯೇಟ್ಸ, ಟಿ.ಎಸ್. ಇಲಿಯಟ್, ಹಾಗೂ ಒಡೆನ್ ವಿಸ್ಟಾನ ಹ್ಯೂ ಎಂಬ ಲೇಖನಗಳು ಸಂಕಲನಗೊಂಡಿವೆ.
ಸಾಹಿತಿ ಗೌರೀಶ್ ಕಾಯ್ಕಿಣಿ ಅವರು 1912 ಸೆಪ್ಟೆಂಬರ್ 12ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ತಂದೆ ವಿಠಲರಾವ್ ತಹಸೀಲ್ದಾರರು, ತಾಯಿ ಸೀರಾಬಾಯಿ. ಗೌರೀಶ ಹುಟ್ಟಿದ ಮೂರು ತಿಂಗಳಲ್ಲಿ ತಂದೆ ತೀರಿಕೊಂಡರು. ಗೋಕರ್ಣ, ಕುಮುಟಾ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆದು, ಮುಂದಿನ ಶಿಕ಼್ಣ ಕುಮಟಾ ಹಾಗೂ ಧಾರವಾಡದಲ್ಲಿ ಮುಂದುವರಿಯಿತು. ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತ್ಯಕ್ಕೆ ಪ್ರಥಮರಾಗಿ ತೇರ್ಗಡೆಯಾದರು. ಅವರು ಹಿಂದಿಯಲ್ಲಿ ವಿಶಾರದರೂ ಆಗಿದ್ದರು. ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಗೌರೀಶರು 1930ರಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. ’ಶಾಂಡಿಲ್ಯ ಪ್ರೇಮಸುಧಾ’ ಕನ್ನಡ ಹಾಗೂ ಮರಾಠಿ ...
READ MORE