ದೃಶ್ಯ ಸಂವೇದನೆ ಕೃತಿಯು ಬಸವರಾಜ ಎಸ್. ಕಲೆಗಾರ ಅವರ ಲೇಖನಗಳ ಸಂಕಲನ. ವಿವಿಧ ವಿಷಯಗಳ ಕುರಿತು ಸುಮಾರು 26 ಲೇಖನಗಳಿವೆ. ಕಲೆ ಸಾಹಿತ್ಯಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಬಸವರಾಜ ಕಲೆಗಾರ ಅವರು ತಮ್ಮ ಲೇಖನಗಳಲ್ಲಿ ಚರ್ಚಿಸಿದ್ದಾರೆ.
ಡಾ. ಬಸವರಾಜ ಎಸ್. ಕಲೆಗಾರ ಮೂಲತಃ ಯಾದಗಿರಿ ಜಿಲ್ಲೆಯವರು. ಕವಿ, ಲೇಖಕ, ಚಿತ್ರಕಲಾವಿದರು. ಎಂ.ವಿ.ಎ, ಎಂ.ಫಿಲ್, ಪಿಹೆಚ್.ಡಿ ಪದವೀಧರರು. ಹಂಪಿ ಕನ್ನಡ ವಿವಿಯಲ್ಲಿ ದೂರ ಶಿಕ್ಷಣ ನಿರ್ದೇಶನಾಯ ಮೂಲಕ ಪತ್ರಿಕೋದ್ಯಮ ಡಿಪ್ಲೋಮಾ ಪೂರ್ಣಗೊಳಿಸಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ 2015-16ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಸಂಶೋಧನೆ ಕೈಗೊಂಡಿದ್ದು, ಸಂಶೋಧನಾ ಅಧ್ಯಯನ ವಿಷಯ ‘ಸಗರನಾಡಿನ ಜನಪದ ಶಿಲ್ಪಿಗಳ ಕಲೆ ಮತ್ತು ಬದುಕು: ಒಂದು ಅಧ್ಯಯನ’ ಪ್ರಬಂಧ ಸಲ್ಲಿಸಿದ್ದಾರೆ. ಪ್ರಕಟಿತ ಕೃತಿಗಳು- ನೀ ಮರೆಯಾದ ಕ್ಷಣಗಳು, ಬೆಳಕು, ಸಂಗಣ್ಣ ಎಂ. ದೋರನಹಳ್ಳಿ ಕಲೆ ಮತ್ತು ಬದುಕು(ಸಂಶೋಧನೆ), ಕಲಾನ್ವೇಷಣೆ, ಚಿತ್ರಶಿಲೆಯಲ್ಲಿ ಬುದ್ಧ, ಗಡಿನಾಡ ಚಿತ್ರಶಾಲೆ, ದೃಶ್ಯ ...
READ MORE