ಪ್ರಕಾಶಕ ಹಾಗೂ ಲೇಖಕ ಗೌರಿ ಸುಂದರ ಅವರು ಸಂಗ್ರಹಿಸಿದ ಲೇಖನಗಳ ಕೃತಿ-ತರಾಸು ಕಾದಂಬರಿಗಳ ಕುರಿತು. ಕನ್ನಡ ನಾಡು ಕಂಡ ಅದ್ಭುತ ಕಾದಂಬರಿಕಾರ ತರಾಸು. ಅವರ ದುರ್ಗಾಸ್ತಮಾನ, ರಕ್ತರಾತ್ರಿ, ಕಂಬನಿ ಕುಯಿಲು ಹೀಗೆ ಐತಿಹಾಸಿಕ ಕಾದಂಬರಿಗಳು ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆಗಳು. ಇವರ ಸಾಹಿತ್ಯ ಕುರಿತು ಹಲವಾರು ಸ್ಪಂದನೆ-ಪ್ರತಿಕ್ರಿಯೆಗಳು ಬಂದಿವೆ. ಅವುಗಳಲ್ಲಿ ಆಯ್ದ ಬರಹಗಳನ್ನು ಇಲ್ಲಿ ಸಂಪಾದಿಸಿ ಪ್ರಕಟಿಸಿದ್ದು, ತರಾಸು ಅವರ ಕಾದಂಬರಿಗಳ ಕುರಿತ ಅಧ್ಯಯನಕ್ಕೂ ಈ ಕೃತಿ ಉತ್ತಮ ಆಕರ ಗ್ರಂಥವಾಗಿದೆ.
ಸಿನಿಮಾ ನಿರ್ಮಾಪಕ- ನಿರ್ದೇಶಕ, ಪುಸ್ತಕ ಪ್ರಕಾಶಕ, ಕನ್ನಡ ಚಳವಳಿ, ರಂಗಭೂಮಿ, ಛಾಯಾಗ್ರಹಣ ಹೀಗೆ ವಿವಿಧ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದವರು ಗೌರಿ ಸುಂದರ್. ಇವರು ಮೂಲತಃ ಮೈಸೂರಿನವರು. ಅರಮನೆಯಲ್ಲಿ ನಡೆಯುವ ಗೌರಿ ಪೂಜೆಗೆ ಇವರ ಮನೆತನದ್ದೇ ಪೌರೋಹಿತ್ಯವಿತ್ತು. ಆದ್ದರಿಂದ, ಇವರ ಮನೆತನಕ್ಕೆ ‘ಗೌರಿ’ ಎಂಬ ಹೆಸರು ಸೇರಿಕೊಂಡಿದೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಕೆಲ ಕಾಲ ಗೈಡ್ ಆಗಿ ಕೆಲಸ ನಿರ್ವಹಿಸಿದ್ದರು. ಹೊಸಅಲೆಯ ಸಂಸ್ಕಾರ ಚಲನಚಿತ್ರ ನೋಡಿದ ಮೇಲೆ ಅವರು ಸಿನಿಮಾದತ್ತ ಮುಖ ಮಾಡಿದರು. ನಂತರ, ಅವರು ಹೊಸ ಅಲೆಯ ‘ಸಂದರ್ಭ’ ಸಿನಿಮಾ ಮಾಡಿದರು. ರಂಗಭೂಮಿ ಹಾಗೂ ದೂರದರ್ಶನದಲ್ಲಿ ಆಸಕ್ತಿ ಮೂಡಿ ...
READ MORE