ಲೇಖಕಿ ವಸುಂಧರಾ ಭೂಪತಿ ಅವರ ಕೃತಿ ‘ರೋಗ ನಿರೋಧಕ ಶಕ್ತಿಗೆ ಮನೆ ಔಷಧಿ’ ಲೇಖನಗಳ ಸಂಕಲನವಾಗಿದೆ. ಆರೋಗ್ಯವೇ ಭಾಗ್ಯ ಎಂಬ ಇಂದಿನ ತಲೆಮಾರಿನಲ್ಲಂತೂ ಕೋವಿಡ್ ಸೃಷ್ಟಿಸಿರುವ ಭಯ ಮನೆಮದ್ದಿಗೆ ಹೆಚ್ಚಿಗೆ ಪ್ರಾಶಸ್ತ್ಯ ಕೊಡುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಕೃತಿಯ ಪರಿವಿಡಿಯಲ್ಲಿ ಅರಿಶಿನ, ಅಮೃತಬಳ್ಳಿ, ಅಶ್ವಗಂಧ, ಇಂಗು, ಒಂದೆಲಗ, ಓಮ, ಏಲಕ್ಕಿ, ಕರಿಬೇವು, ಕೊತ್ತಂಬರಿ ಸೊಪ್ಪು, ಚಕ್ರಮುನಿ, ಜೀರಿಗೆ, ಕಪ್ಪು ಜೀರಿಗೆ, ಧನಿಯಾ, ಜೇಷ್ಠಮಧು, ತುಳಸಿ, ದಾಲ್ಚಿನ್ನಿ, ದೊಡ್ಡಪತ್ರೆ, ನಿಂಬೆಹುಲ್ಲು ಸೇರಿದಂತೆ 30 ಶೀರ್ಷಿಕೆಗಳು ಇವೆ. ಪ್ರತಿ ಶೀರ್ಷಿಕೆಯ ಪುಟಗಳಲ್ಲಿ ಆಯಾ ವಸ್ತುಗಳ ವೈಜ್ಞಾನಿಕ ಹೆಸರು ಮಾತ್ರವಲ್ಲದೆ ಸಂಸ್ಕೃತ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿಯಲ್ಲಿ ಅವುಗಳ ಹೆಸರುಗಳನ್ನು ಓದುಗರಿಗೆ ಮನದಟ್ಟಾಗುವಂತೆ ನೀಡಲಾಗಿದೆ. ಅಲ್ಲದೆ ಔಷಧೀಯ ವಸ್ತುವೊಂದರ ರಾಸಾಯನಿಕ ಅಂಶಗಳು ಹಾಗೂ ಔಷಧೀಯ ಉಪಯೋಗಗಳ ಕುರಿತಾಗಿಯೂ ಪೂರ್ಣ ಮಾಹಿತಿಯನ್ನು ಕೊಡಲಾಗಿದೆ.
ಡಾ. ವಸುಂಧರಾ ಭೂಪತಿ ಕರ್ನಾಟಕದ ರಾಯಚೂರಿನಲ್ಲಿ 1962 ರ ಜೂನ್ 5 ರಂದು ಜನಿಸಿದರು. ಇವರು ಬರೆದಿರುವ ವಿಜ್ಞಾನ ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳು ವಾರಪತ್ರಿಕೆ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ವಸುಂದರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ. ಮತ್ತು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿ ...
READ MORE