ಮಥನ

Author : ಎಂ.ಡಿ.ಚಿತ್ತರಗಿ

Pages 112

₹ 130.00




Year of Publication: 2021
Published by: ಹೊನ್ನಕುಸುಮ ಪ್ರಕಾಶನ
Address: ಮಹಾಂತ ನಗರ, 587118, ಬಾಗಲಕೋಟೆ ಜಿಲ್ಲೆ
Phone: 9686019177

Synopsys

`ಮಥನ’ ಎಂ.ಡಿ. ಚಿತ್ತರಗಿ ಅವರ ವಿಮರ್ಶಾ ಲೇಖನಗಳ ಸಂಕಲನವಾಗಿದೆ. ಈ ಕೃತಿಯಲ್ಲಿ ಹನ್ನೆರಡು ಲೇಖನಗಳಿವೆ. ಕೃತಿಯನ್ನೊಳಗೊಂಡಂತೆ ಜಗದೀಶ ಹಾದಿಮನಿಯವರ 'ಉದಯಾಸ್ತಮಾನ ಒಟ್ಟೋಟ್ಟಿಗೆ' ಎಂಬ ಕೃತಿಗಳ ಹರವಿನೊಳಗೆ ಕೊಡಗಿನ ಗೌರಮ್ಮ, ಶಿವರಾಮ ಕಾರಂತ, ಅಬ್ಬಾಸ್ ಮೇಲಿನಮನಿ, ದೇವನೂರ ಮಹಾದೇವ, ಸಾರಾ ಅಬೂಬಕರ್, ಅಕ್ಟರ್ ಕಾಲಿಮಿರ್ಚಿಯವರು ಕಾಣಿಸಿಕೊಂಡಂತೆ ಮರಾಠಿಯ ರಮಾಬಾಯಿ, 'ನಾಳಿನ ಚಿಂತ್ಯಾಕ'ದಂತಹ ಆತ್ಮಚರಿತ್ರೆಯ ಕೃತಿಗಳ ಕುರಿತು ಗಂಭೀರವಾದ ಮತ್ತು ಅರ್ಥಪೂರ್ಣವಾದ ಚರ್ಚೆಗಳನ್ನು ಮಾಡಿರುವರು. ಎಲ್ಲ ಕಾಲದ, ಪಂಥದ ಕೃತಿಗಳನ್ನು ಸಮಕಾಲೀನ ಸಂದರ್ಭದಲ್ಲಿ ಗ್ರಹಿಸುವ ವಿಧಾನಗಳು ಹೇಗಿರಬೇಕು ಎಂಬುದನ್ನು ಇಲ್ಲಿಯ ಲೇಖನಗಳು ಸೂಚಿಸುತ್ತವೆ. ವಿಮರ್ಶಕನೊಬ್ಬ ಕೃತಿ, ಕೃತಿಕಾರನೊಂದಿಗೆ ಹೆಜ್ಜೆ ಹಾಕುವಾಗ ಕಾಯ್ದುಕೊಳ್ಳಬೇಕಾದ ದೂರದ ಸೂಕ್ಷ್ಮತೆಯಿಲ್ಲದಿದ್ದರೆ ವಿಮರ್ಶೆ ಓದುಗನ ಒಳಗನ್ನು ಪ್ರವೇಶಿಸಲು ಪ್ರಯಾಸ ಪಡಬೇಕಾಗುತ್ತದೆ. ವಿಮರ್ಶೆಯ ಭಾಷೆ, ಪರಿಭಾಷೆಗಿಂತಲೂ ಸಹೃದಯನೊಂದಿಗೆ ಸಂವಾದಕ್ಕೆಳೆಸುವ ವಿವೇಕ ಮತ್ತು ವಿನಯವಂತಿಕೆ ಬೇಕು ಎಂಬುದನ್ನು ನಮ್ಮ ಹಿರಿಯ ತಲೆಮಾರಿನ ವಿಮರ್ಶಕರು ತೋರಿಸಿರುವರು. ಆ ಹಾದಿಯಲ್ಲಿಯೇ ಶ್ರೀ ಎಂ.ಡಿ. ಚಿತ್ತರಗಿಯವರು ನಡೆದಿರುವುದರಿಂದ ವಿಮರ್ಶಾ ಪರಂಪರೆಯ ಮುಂದುವರಿಕೆಯಾಗಿ ಸಾಬೀತುಪಡಿಸಿಕೊಂಡಿರುವರು. ವಿಮರ್ಶಾ ಕ್ಷೇತ್ರ ಹೊಸ ನೀರಿಗಾಗಿ ಹಂಬಲಿಸುತ್ತಿದೆ. ಅಂತಹ ನೀರಿನ ವರತೆಯಾಗಿ 'ಮಥನ' ಕೃತಿಯನ್ನು ಓದುಗರ ಕೈಗೆ ನೀಡಿರುವರು. ಕುಡಿಯಬೇಕು (ನೀರು) ಎಂಬ ಹಂಬಲವುಳ್ಳವರಿಗೆ ಈ ಕೃತಿಯೊಂದು ಸಂಗ್ರಹಯೋಗ್ಯವಾಗಿದೆ.

About the Author

ಎಂ.ಡಿ.ಚಿತ್ತರಗಿ

ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಬಾಗಲಕೋಟೆ ಜಿಲ್ಲೆಯ ಹುನಗುಂದದವರಾದ ಎಂ.ಡಿ.ಚಿತ್ತರಗಿಯವರು ಹುನಗುಂದ- ಇಳಕಲ್ಲಿನಲ್ಲಿ ಪದವಿಪೂರ್ವದವರೆಗಿನ ಶಿಕ್ಷಣವನ್ನು ಪೂರೈಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಕ್ರಮವಾಗಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಹಾಗೂ ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗಗಳಲ್ಲಿ ಬಾಹ್ಯವಾಗಿ ಪೂರೈಸಿದ್ದಾರೆ. ಬಿ-ಇಡಿ ಪದವಿಯನ್ನು ಏಳನೆಯ ರ್ಯಾಂಕಿನೊಂದಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪೂರೈಸಿರುವ ಇವರು ಮೊದಲು ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಪ್ರೌಢಶಾಲಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದು, ಈಗ ಉನ್ನತ ಶಿಕ್ಷಣ ಇಲಾಖೆಯ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಧ್ಯಯನ, ಅಧ್ಯಾಪನ, ಮಾರ್ಗದರ್ಶನದೊಂದಿಗೆ ಹುನಗುಂದದಲ್ಲಿ ʼಹೊನ್ನಕುಸುಮ ಸಾಹಿತ್ಯ ...

READ MORE

Related Books