ಅನುಭವ ಅನುಭಾವಗಳನ್ನು ಲೇಖನಗಳ ಮೂಲಕ ಕಟ್ಟಿಕೊಡುವ ಪ್ರಯತ್ನ ಸಂಜೀವಕುಮಾರ ಅತಿವಾಳೆ ಅವರ ಚೌಕಟ್ಟಿನಾಚೆ ಕೃತಿಯಲ್ಲಿದೆ. ಬೀದರ್ ಜಿಲ್ಲೆಯ ವಿಶೇಷತೆ, ವಚನ ಸಾಹಿತ್ಯದ ಪ್ರಭಾವ, ವಚನಕಾರರು ಈ ಜಗತ್ತಿಗೆ ನೀಡಿದ ಕೊಡುಗೆಯನ್ನು ವಿವರಿಸುವ ಪ್ರಯತ್ನವನ್ನು ಲೇಖಕರು ಈ ಕೃತಿಯ ಮೂಲಕ ಮಾಡಿದ್ದಾರೆ.
ಜಾನಪದದ ಮೂಲಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ಹೇಗೆ ವಿಭಿನ್ನ ಹಾಗೂ ವೈಶಿಷ್ಟತೆ ಮೆರೆಯುತ್ತದೆ ಎನ್ನುವುದು ತಿಳಿಸಿದ್ದಾರೆ. ಪ್ರಾದೇಶಿಕತೆಯ ಸೊಗಡು, ಭಾಷಾ ಬರವಣಿಗೆ, ಸೂಕ್ಷ್ಮ ವಿಷಯಗಳನ್ನು ಅರ್ಥಪಡಿಸುವ ರೀತಿಯಲ್ಲಿ ಬರೆಯುವ ಶೈಲಿ ಚೌಕಟ್ಟಿನಾಚೆ ಕೃತಿಯಲ್ಲಿದೆ.
. ಬರಹಗಾರ ಸಂಜೀವಕುಮಾರ ಅತಿವಾಳೆ ಅವರು ಜನಿಸಿದ್ದು 1979 ಜೂನ್ 1ರಂದು. ಬೀದರ್ ಜಿಲ್ಲೆಯ ಅತಿವಾಳದವರಾದ ಇವರು ಪ್ರಸ್ತುತ ಸರ್ಕಾರಿ ಪ್ರಾಥಮಿಕ ಶಾಲೆ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಸ್ವಾತಂತ್ಯ್ರ(ಕವನ ಸಂಕಲನ), ಚೌಕಟ್ಟಿನಾಚೆ(ಲೇಖನಗಳ ಸಂಕಲನ), ಪ್ರಬಂಧ ಲೋಕ, ನುಡಿ ಕಿಡಿ (ಸಂಪಾದಿತ) ಮುಂತಾದವು. ಇವರಿಗೆ ಲೋಹಿಯಾ ಪ್ರತಿಷ್ಠನ ಬಸವಕಲ್ಯಾಣ ವತಿಯಿಂದ ಕಲ್ಯಾಣ ರತ್ನ ಪ್ರಶಸ್ತಿ, ಆದರ್ಶ ಶಿಕ್ಷಕ ಪ್ರಶಸ್ತಿ, ರಾಷ್ಟ್ರ ನಿರ್ಮಾಪಕ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ...
READ MORE