ಉತ್ತರೆಯ ಅಳಲು

Author : ಕೆ. ಶಾರದಾ ಭಟ್

Pages 152

₹ 75.00




Published by: ಸುಮಂತ ಪ್ರಕಾಶನ
Address: ಬ್ರಹ್ಮಾವರ ಉಡುಪಿ ಜಿಲ್ಲೆ

Synopsys

‘ಉತ್ತರೆಯ ಅಳಲು’ ಕೃತಿಯು ಕೆ. ಶಾರದಾ ಭಟ್ ಅವರ ಲೇಖನ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕುರಿತ ಲೇಖನಗಳ ಸಂಗ್ರಹ ಇದಾಗಿದ್ದು, ಇವು ನಮ್ಮ ಸಮಾಜದಲ್ಲಿ ನಡೆಯುತ್ತಲೇ ಇರುವ ಘಟನೆಗಳನ್ನು ಆಧರಿಸಿ ರೂಪಿತಗೊಂಡಿದೆ. ಸ್ತ್ರೀಗೆ ಆಗುತ್ತಿರುವ ಅನ್ಯಾಯ, ಅನಿಷ್ಟಗಳನ್ನು ಬಹುವಾಗಿ ಈ ಕೃತಿಯು ವಿಮರ್ಶಿಸುತ್ತದೆ. ಹಾಗೂ ಅಂತಹ ವಿಚಾರಗಳ ಬಗ್ಗೆ ಗಮನವನ್ನು ನೀಡುವಂತೆ ಮಾಡುತ್ತದೆ. ಸ್ತ್ರೀಯರ ಕುರಿತು ಈ ಸಮಾಜ ಕಟ್ಟಿಕೊಂಡ ಅರಿವಿನ ಎಲ್ಲ ಆಯಾಮಗಳನ್ನು, ಅವುಗಳ ಹಿಂದಿನ ನಿಜಸ್ಥಿತಿಯನ್ನು ಪ್ರಸ್ತುತ ಸಂಕಲನದ ಲೇಖನಗಳು ವಿಶ್ಲೇಷಿಸುತ್ತವೆ. `ಈ ವಿಶ್ಲೇಷಣೆಯನ್ನು `ಸ್ತ್ರೀವಾದ‘ ಎನ್ನುವುದಕ್ಕಿಂತ `ಸ್ತ್ರೀಪ್ರಜ್ಞೆ‘ ಎಂದು ಕರೆಯುವುದೇ ಸೂಕ್ತ‘ – ಎಂದು ಮುನ್ನುಡಿಯಲ್ಲಿ ಜಿ. ರಾಜಶೇಖರ್ ಹೇಳಿರುವುದು ವಸ್ತುನಿಷ್ಟ ಸಂಗತಿಯೇ ಆಗಿದೆ. ಅಲ್ಲದೆ, ವಾದಗಳನ್ನು ಮೀರಿದ ಮಾನವೀಯ ಅಂತಃಕರಣದ ತುಡಿತ, ನ್ಯಾಯದ ಪರ ನಿಲುವು ಇವೆಲ್ಲವೂ ಕೂಡ ಲೇಖಕಿಯ ಪ್ರತಿಯೊಂದು ಮಾತಿನಲ್ಲೂ ಎದ್ದುಕಾಣುತ್ತದೆ.

About the Author

ಕೆ. ಶಾರದಾ ಭಟ್
(24 October 1949)

ಲೇಖಕಿ ಶಾರದಾಭಟ್ ಅವರು ಮೂಲತಃ ಕುಂದಾಪುರ ತಾಲ್ಲೂಕಿನ ಕೋಟೇಶ್ವರದವರು. ತಂದೆ- ಕೆ. ವಿಠಲಭಟ್, ತಾಯಿ ಕಾವೇರಿಯಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿ ಪಡೆದ ಅವರು ದೂರಸಂಪರ್ಕ ಇಲಾಖೆಯಲ್ಲಿ ಕೆಲಸ ದೊರೆತಿದ್ದರಿಂದ ಉದ್ಯೋಗದ ಜೊತೆಗೆ ಬೆಂಗಳೂರಿನ ಆಚಾರ‍್ಯ ಪಾಠಶಾಲಾ ಸಂಜೆ ಕಾಲೇಜಿನಿಂದ ಪಡೆದ ಬಿ.ಎ. ಪದವಿಪಡೆದರು. ಜೊತೆಗೆ ಬಾಹ್ಯ ವಿದ್ಯಾರ್ಥಿನಿಯಾಗಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ಚಿಕ್ಕಂದಿನಿಂದಲೇ ಸಾಹಿತ್ಯದತ್ತ ಒಲವಿದ್ದ ಶಾರದ ಅವರು ಮಹಿಳೆಯರ ಶೋಷಣೆಯ ಬಗ್ಗೆ ಅರಿವು ಮೂಡಿಸಲು ಹಲವಾರು ಮಹಿಳಾ ಸಂಘಟನೆಗಳೊಡನೆ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಶೋಷಣೆ ಕುರಿತು ಆಕಾಶವಾಣಿಗಾಗಿ ಹಲವಾರು ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ. ಉದ್ಯೋಗದ ...

READ MORE

Related Books