ಲೋಕವೇ ತಾನಾದ ಬಳಿಕ

Author : ಮುಮ್ತಾಜ್ ಬೇಗಂ, ಗಂಗಾವತಿ

Pages 128

₹ 130.00




Year of Publication: 2022
Published by: ಜೀವನ್‌ ಪ್ರಕಾಶನ
Address: ಗಂಗಾವತಿ
Phone: 9480186554

Synopsys

'ಲೋಕವೇ ತಾನಾದ ಬಳಿಕ’ ಮುಮ್ತಾಜ್‌ ಬೇಗಂ ಅವರ ಲೇಖನಗಳ ಸಂಕಲನವಾಗಿದೆ. ಲೋಕವೇ ತಾನಾದ ಬಳಿಕ ಕೃತಿಯು ಮಹಿಳಾ ಪರವಾದ ಧ್ವನಿಯನ್ನು, ಭಿನ್ನ ಆಯಾಮಗಳಲ್ಲಿ ಅನಾವರಣಗೊಂಡಿರುವ ಲೇಖನಗಳ ಸಂಕಲನವಾಗಿದೆ. ಬೇರೆ ಬೇರೆ ಸಂದರ್ಭದಲ್ಲಿ ಬರೆದ ಲೇಖನಗಳು, ಅಲ್ಲದೇ ಮಹಿಳಾ ಪರ ಅಧ್ಯಯನ ಕೈಗೊಳ್ಳುವವರಿಗೆ ಆಕರವನ್ನು ಒದಗಿಸಬಹುದೆಂದು ನಂಬಿಕೆಯೊಂದಿಗೆ ಒಟ್ಟು ಲೇಖನಗಳನ್ನು ಸಂಕಲಿಸಿ ಕೊಡುತ್ತಿರುವೆ. ಲೋಕವೇ ತಾನಾದ ಬಳಿಕ ಏಕಾಂತದ ಹಂಗೇಕಯ್ಯ? ಎಂದು ಪ್ರಶ್ನಿಸಿದ ಶರಣೆ ಅಕ್ಕಮಾದೇವಿಯ ವಚನದ ಸಾಲುಗಳು ತುಂಬಾ ಪ್ರಸ್ತುತವೆನ್ನುವ ಕಾರಣಕ್ಕೆ ಕೃತಿಗೆ ಶೀರ್ಷಿಕೆಯಾಗಿ ವಚನದ ಸಾಲನ್ನು ಇಡಲಾಗಿದೆ. ಉಸಿರಿಗೆ ಪರಿಮಳವಿಲ್ಲದ ಕಾರಣ ಕುಸುಮದ ವಾಸನೆಯನ್ನು ಬಯಸುತ್ತೇವೆ. ಉಸಿರೇ ಕುಸುಮದ ಪರಿಮಳವಾದರೇ? ಅದು ಅಘಟಿತವಾಗುತ್ತದೆ. ನಿಷ್ಕಲ್ಮಷ ಮನುಷ್ಯನ ಉಸಿರು ಪರಿಮಳದಂತೆ ಎಂದು ಅನುಭಾವಿಗಳು ಭಾವಿಸುತ್ತಾರೆ. ಆದ್ದರಿಂದ ಲೋಕವೇ ತಾನಾದ ಬಳಿಕ ಏಕಾಂತದ ಹಂಗೇಕಯ್ಯ ಎನ್ನುವ ಅಕ್ಕ ಇಂದಿಗೂ ಪ್ರಸ್ತುತಳಾಗುತ್ತಾಳೆ. ಒಟ್ಟು ಸ್ತ್ರೀ ಬದುಕಿನ ಕಾಳಜಿಯ ಕಾರಣಕ್ಕೆ ಮಹತ್ವ ಪೂರ್ಣವೆನಿಸುತ್ತವೆ.

About the Author

ಮುಮ್ತಾಜ್ ಬೇಗಂ, ಗಂಗಾವತಿ

ಡಾ. ಮಮ್ತಾಜ್ ಬೇಗಂ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ತಂದೆ ಹುಸೇನಸಾಬ, ತಾಯಿ ಕಾಸಿಂಬಿ ಮುಧೋಳ. ಗಂಗಾವತಿಯಲ್ಲೇ ಪದವಿವರೆಗೂ ಶಿಕ್ಷಣ ಪೂರ್ಣಗೊಳಿಸಿ, ಗುಲಬಗಾ ವಿ.ವಿ.ಯಿಂದ ಎಂ.ಎ ಹಾಗೂ 'ಪಿಂಜಾರರು: ಒಂದು ಜಾನಪದೀಯ ಅಧ್ಯಯನ' ವಿಷಯವಾಗಿ ಮಹಾಪ್ರಬಂಧ ಸಲ್ಲಿಸಿ ಪಿಎಚ್ ಡಿ ಪಡೆದರು. ಸದ್ಯ, ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರರಾವ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಲ್ಲಿಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ.  ಕಾವ್ಯ, ಸಂಶೋಧನೆ, ಜಾನಪದ, ವಚನ, ದಲಿತ ಸಾಹಿತ್ಯ, ಸ್ತ್ರೀವಾದಿ ಚಿಂತನೆಗಳ ಬರವಣಿಗೆ ಇವರ ಆಸಕ್ತಿಯ ಕ್ಷೇತ್ರಗಳು. ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ, ಕನ್ನಡ ವಿಶ್ವವಿದ್ಯಾಲಯ ದೂರಶಿಕ್ಷಣ ಪಠ್ಯಪುಸ್ತಕ ಸಮಿತಿಯ ಸದಸ್ಯರಾದ್ಗಿದಾರೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ...

READ MORE

Related Books